ETV Bharat / state

ಜುಲೈ ತಿಂಗಳಲ್ಲಿ 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಿದ್ದೇವೆ: ಸಿಎಂ ಸಿದ್ದರಾಮಯ್ಯ

author img

By

Published : May 20, 2023, 7:03 PM IST

ಜುಲೈನಲ್ಲಿ 3.25 ಲಕ್ಷ ಕೋಟಿ ರೂ ಮೊತ್ತದ ಬಜೆಟ್​​ ಮಂಡಿಸಲಿದ್ದೇವೆ. ಜತೆಗೆ 15 ಸಾವಿರ ಕೋಟಿ ರೂ ಆದಾಯ ಸಂಗ್ರಹ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

we-are-going-to-present-a-rs-3-dot-25-lakh-crore-budget-says-siddaramaih
ಜುಲೈ ತಿಂಗಳಲ್ಲಿ 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಲಿದ್ದೇವೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: 3.25 ಲಕ್ಷ ಕೋಟಿ ರೂ. ಮೊತ್ತದ ಬಜೆಟ್​​ನ್ನು ಜುಲೈನಲ್ಲಿ ಮಂಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸಂಪುಟ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​​​ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ 3.10 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಲಾಗಿದೆ. ಜುಲೈನಲ್ಲಿ 3.25 ಲಕ್ಷ ಕೋಟಿ ರೂ. ಬಜೆಟ್ ಮಂಡನೆ ಮಾಡಲಿದ್ದೇವೆ. ಅಂದಾಜು 15,000 ಕೋಟಿ ರೂ. ಆದಾಯ ಸಂಗ್ರಹ ಹೆಚ್ಚಿಸಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ತಿಳಿಸಿದರು.

ಮೂರು ದಿನ ಸೋಮವಾರ, ಮಂಗಳವಾರ, ಬುಧವಾರ ವಿಶೇಷ ಅಧಿವೇಶನ ಕರೆಯಲಿದ್ದೇವೆ. ವಿಶೇಷ ಅಧಿವೇಶನದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಆ ಅಧಿವೇಶನದಲ್ಲಿ ಸ್ಪೀಕರ್ ಅವರ​​ನ್ನು ಆಯ್ಕೆ ಮಾಡಲಿದ್ದೇವೆ. ಆರ್.ವಿ ದೇಶಪಾಂಡೆಗೆ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡುತ್ತೇವೆ ಎಂದರು. ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿದ್ದೇವೆ. ಆ ಭರವಸೆಗಳು ಒಂದೇ ವರ್ಷದಲ್ಲಿ ಈಡೇರಿಸುವ ಭರವಸೆ ಅಲ್ಲ. ಐದು ವರ್ಷದಲ್ಲಿ ಈಡೇರಿಸುವ ಭರವಸೆ ಆಗಿದೆ ಎಂದರು.

ಅದರಲ್ಲಿ ಪ್ರಮುಖವಾಗಿ ಐದು ಗ್ಯಾರಂಟಿಗಳಿಗೆ ಮೊದಲ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು, ಆ ಸಂಬಂಧ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದೆವು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ಕೊಟ್ಟ ಮಾತಿನಂತೆ ನಡೆದಿದ್ದೆವು. ವಿರೋಧ ಪಕ್ಷ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ರಾಜ್ಯ ದಿವಾಳಿ ಆಗುತ್ತೆ, ಸಾಲಗಾರರ ರಾಜ್ಯ ಎಂದು ಟೀಕೆ ಮಾಡಿದ್ದರು. ಪ್ರಧಾನಿ ಮೋದಿಯೂ ತಮ್ಮ ಮನ್ ಕೀ ಬಾತ್​ನಲ್ಲಿ ಉಚಿತಗಳಿಂದ ರಾಜ್ಯ ದಿವಾಳಿ ಆಗುತ್ತೆ ಎಂದಿದ್ದರು. ಮಾಜಿ ಸಿಎಂ ಬೊಮ್ಮಾಯಿ ಹಾಗೂ ಇತರ ಬಿಜೆಪಿ ನಾಯಕರು ಈ ಗ್ಯಾರಂಟಿ ಆಗಲ್ಲ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದರು.

ಸದ್ಯ 3.10 ಲಕ್ಷ ಕೋಟಿ ರೂ. ರಾಜ್ಯದ ಬಜೆಟ್ ಆಗಿದೆ. ಶೇ.10ರಷ್ಟು ಬಜೆಟ್ ಗಾತ್ರ ಹೆಚ್ಚಾಗುತ್ತಿದೆ. ತೆರಿಗೆ ಸಂಗ್ರಹ ಕಟ್ಟುನಿಟ್ಟಾಗಿ ಮಾಡಿದರೆ ಆದಾಯ ಹೆಚ್ಚು ಮಾಡಬಹುದು. ಆದಾಯದ ಟಾರ್ಗೆಟ್ ರೀಚ್ ಮಾಡಲು ಸಾಧ್ಯವಿದೆ. ಕೇಂದ್ರದ ಮೂಲಕ ನಮಗೆ 50 ಸಾವಿರ ಕೋಟಿ ಬರಲಿದೆ. ವಾಸ್ತವದಲ್ಲಿ ನನ್ನ ಪ್ರಕಾರ ಒಂದು ಲಕ್ಷ ಕೋಟಿ ರೂ. ಬರಬೇಕಿತ್ತು. 15 ಹಣಕಾಸು ಆಯೋಗದಲ್ಲಿ ನಮಗೆ ಅನ್ಯಾಯವಾಗಿದೆ. 4 ಲಕ್ಷ ಕೋಟಿ ರೂ. ಕರ್ನಾಟಕದಿಂದ ಒಟ್ಟು ತೆರಿಗೆ ಪಾವತಿ ಮಾಡುತ್ತಿದ್ದೇವೆ. ಹಿಂದಿನ ಸರ್ಕಾರದವರು ನಮ್ಮ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದರು.

5.64 ಲಕ್ಷ ಕೋಟಿ ರೂ. ರಾಜ್ಯದ ಮೇಲೆ ಸಾಲ: 5,495 ಕೋಟಿ ರೂ. ವಿಶೇಷ ಅನುದಾನ ಬರಬೇಕು ಎಂದು ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ತಿಳಿಸಿದೆ. ಅದನ್ನು ಬಿಜೆಪಿ ಸರ್ಕಾರ ತಗೊಳಲೇ ಇಲ್ಲ. ಪ್ರಧಾನಿ ಮೋದಿ ರಾಜ್ಯಕ್ಕೆ ನಷ್ಟ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಯಾವುದೇ ದನಿ ಎತ್ತಿಲ್ಲ. ಸದ್ಯ 5.64 ಲಕ್ಷ ಕೋಟಿ ರೂ. ರಾಜ್ಯದ ಮೇಲೆ ಸಾಲ ಇದೆ. 1.16 ಲಕ್ಷ ಕೋಟಿ ರೂ. ನಾನು ಐದು ವರ್ಷದಲ್ಲಿ ಸಾಲ ಮಾಡಿದ್ದೇವೆ. ಅನಗತ್ಯ ವೆಚ್ಚ ಕಡಿತ, ಆದಾಯ ಸಂಗ್ರಹ ಹೆಚ್ಚಿಗೆ ಮಾಡಿ ಸುಮಾರು 15,000 ಕೋಟಿ ರೂ. ಕ್ರೋಢೀಕರಿಸಲಿದ್ದೇವೆ ಎಂದರು.

ಇದನ್ನೂ ಓದಿ: ಸಾಲ ಮಾಡದೇ 'ಪಂಚ ಖಾತರಿ' ಜಾರಿ: ಸಿಎಂ ಸಿದ್ದರಾಮಯ್ಯ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.