ETV Bharat / state

ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವರದ್ದೇ ಧಾಟಿಯಲ್ಲಿ ಉತ್ತರ ನೀಡ್ತೇವೆ: ಜಿವಿಎಲ್ ನರಸಿಂಹರಾವ್

author img

By

Published : Dec 16, 2019, 10:54 PM IST

ಹಿಂಸೆಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ‌. ಹಿಂಸಾಚಾರ ನಡೆಸುವವರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೋ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತೇವೆ‌. ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವರದ್ದೇ ಧಾಟಿಯಲ್ಲಿ ಉತ್ತರಕೊಟ್ಟು ಹಿಂಸಾಚಾರವನ್ನು ದಮನ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಸ್ಪಷ್ಟಪಡಿಸಿದ್ದಾರೆ.

gvl-narasimha-rao
ಜಿವಿಎಲ್ ನರಸಿಂಹರಾವ್

ಬೆಂಗಳೂರು: ಹಿಂಸೆಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ‌. ಹಿಂಸಾಚಾರ ನಡೆಸುವವರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೋ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತೇವೆ‌. ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವರದ್ದೇ ಧಾಟಿಯಲ್ಲಿ ಉತ್ತರಕೊಟ್ಟು ಹಿಂಸಾಚಾರವನ್ನು ದಮನ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಸ್ಪಷ್ಟಪಡಿಸಿದ್ದಾರೆ.

ಜಿವಿಎಲ್ ನರಸಿಂಹರಾವ್

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್, ಮಾರ್ಕ್ಸಿಸ್ಟ್ , ಕಮ್ಯುನಿಷ್ಟ್, ತೃಣಮೂಲ‌ ಕಾಂಗ್ರೆಸ್ ಪಕ್ಷಗಳ ಹಿಪೋಕ್ರಸಿ ರಾಷ್ಟ್ರದ ಜನತೆಗೆ ಗೊತ್ತಾಗುತ್ತದೆ‌. ಪಾಕಿಸ್ತಾನದ ಇಮ್ರಾನ್ ಖಾನ್ ಆಡುವ ಭಾಷೆಯನ್ನೇ ಇಲ್ಲಿ ರಾಹುಲ್ ಗಾಂಧಿ ಆಡುತ್ತಿದ್ದಾರೆ. ಈ ರಾಷ್ಟ್ರೀಯ ಪೌರತ್ವ ಕಾಯ್ದೆಯಲ್ಲಿ ಮುಸ್ಲಿಂ ಬಾಹುಳ್ಯ ಉಳ್ಳ ಪಾಕಿಸ್ತಾನ, ಆಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ರಕ್ಷಣೆ ಕೊಡುವುದೇ ಹೊರತು, ಭಾರತದ ನಾಗರಿಕರಿಗೂ ಈ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ. ಆದರೂ ಈ ರಾಜಕೀಯ ಪಕ್ಷಗಳು ಭಾರತದ ಮುಸ್ಲಿಮರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಆರೋಪಿಸಿದರು.

ಹಿಂದೆ ಮನಮೋಹನಸಿಂಗ್ ಅವರೇ ಬಾಂಗ್ಲಾದೇಶದ ಅಲ್ಪಸಂಖ್ಯಾತರು ಅಂದರೆ, ಹಿಂದೂಗಳು ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ಏನು ಮಾತನಾಡಿದ್ದರು ಎಂದು ರಾಹುಲ್ ಗಾಂಧಿ ಸ್ಮರಿಸಲಿ, ಅಸ್ಸೋಂ ಸಿಎಂ ಆಗಿದ್ದ ತರುಣ್ ಗೊಗೋಯ್ ಬಾಂಗ್ಲಾದೇಶದ ಹಿಂದುಗಳ ಬಗ್ಗೆ ಏನು ಹೇಳಿದ್ದರು? ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದಿರುವುದೇಕೆ ಎಂಬುದಕ್ಕೆ ಕಾಂಗ್ರೆಸ್ ನಾಯಕರೇ ಉತ್ತರಕೊಡಬೇಕು. ಬಾಂಗ್ಲಾ ದೇಶದಿಂದ ಬಂದಿರುವ ಹಿಂದು ಅಲ್ಪಸಂಖ್ಯಾತರಿಗೆ ಪೌರತ್ವ ರಕ್ಷಣೆ ಕೊಡಬೇಕೆಂದು ಪ್ರಕಾಶ್ ಕಾರಟ್ ಪತ್ರ ಬರೆದಿದ್ದು ಮರೆತು ಹೋಯ್ತಾ?ಈಗ ಪ್ರಕಾಶ್ ಕಾರಟ್ ಎಲ್ಲಿ ಅಡಗಿದ್ದಾರೆ ಎಂದು ನರಸಿಂಹರಾವ್​ ಪ್ರಶ್ನಿಸಿದರು.

ಎನ್ ಆರ್ ಸಿ ಈ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರಿಗೂ ಅತ್ಯಗತ್ಯ. ನಾವು ಈ ರಾಷ್ಟ್ರದ ನಾಗರಿಕರು ಎಂದು ದಾಖಲೆ ತೋರಿಸಲು, ನೋಂದಣಿಯಾಗಲು ಯಾರೂ ಹಿಂಜರಿಯುವುದಿಲ್ಲ‌. ಆ ಹಿಂಜರಿಕೆಗೂ ಅರ್ಥವೇ ಇಲ್ಲ. ಎನ್ ಆರ್ ಸಿ ಯಾವುದೇ ಒಂದು ಕೋಮನ್ನು ಗುರಿಯಾಗಿಸಿಕೊಂಡಿಲ್ಲ. ಅದು ಸಾಧ್ಯವೂ ಇಲ್ಲ‌. ದೇಶದಲ್ಲಿ ಅಕ್ರಮವಾಗಿ ನೆಲಸಿರುವವರನ್ನು ಪತ್ತೆ ಹಚ್ಚಲು ಇರುವ ಮಾರ್ಗವೂ ಇದೊಂದೇ ಎಂದು ಅವರು ಸಮರ್ಥಿಸಿಕೊಂಡರು.

Intro:


ಬೆಂಗಳೂರು: ಹಿಂಸೆಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ‌. ಹಿಂಸಾಚಾರ ನಡೆಸುವವರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕೋ ಅದೇ ರೀತಿಯಲ್ಲಿ ನಡೆದುಕೊಳ್ಳುತ್ತೇವೆ‌. ಕಾನೂನು ಕೈಗೆತ್ತಿಕೊಳ್ಳುವವರಿಗೆ ಅವರದ್ದೇ ಧಾಟಿಯಲ್ಲಿ ಉತ್ತರಕೊಟ್ಟು ಹಿಂಸಾಚಾರವನ್ನು ದಮನ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್,ಮಾರ್ಕ್ಸಿಸ್ಟ್ ,ಕಮ್ಯುನಿಷ್ಟ್,ತೃಣಮೂಲ‌ ಕಾಂಗ್ರೆಸ್ ಪಕ್ಷಗಳ ಹಿಪೋಕ್ರಸಿ ರಾಷ್ಟ್ರದ ಜನತೆಗೆ ಗೊತ್ತಾಗುತ್ತದೆ‌. ಪಾಕಿಸ್ತಾನದ ಇಮ್ರಾನ್ ಖಾನ್ ಆಡುವ ಭಾಷೆಯನ್ನೇ ಇಲ್ಲಿ ರಾಹುಲ್ ಗಾಂಧಿ ಆಡುತ್ತಿದ್ದಾರೆ.ಈ ರಾಷ್ಟ್ರೀಯ ಪೌರತ್ವ ಕಾಯ್ದೆಯಲ್ಲಿ ಮುಸ್ಲೀಂ ಬಾಹುಳ್ಯ ಉಳ್ಳ ಪಾಕಿಸ್ತಾನ,ಆಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ರಕ್ಷಣೆ ಕೊಡುವುದೇ ಹೊರತು ಭಾರತದ ನಾಗರೀಕರಿಗೂ ಈ ಕಾಯ್ದೆಗೂ ಯಾವುದೇ ಸಂಬಂಧವಿಲ್ಲ ಆದರೂ ಈ ರಾಜಕೀಯ ಪಕ್ಷಗಳು ಭಾರತದ ಮುಸ್ಲೀಮರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.

ಹಿಂದೆ ಮನಮೋಹನಸಿಂಗ್ ಅವರೇ ಬಾಂಗ್ಲಾದೇಶದ ಅಲ್ಪಸಂಖ್ಯಾತರು ಅಂದರೆ ಹಿಂದೂಗಳು ಅನುಭವಿಸುತ್ತಿರುವ ಹಿಂಸೆಯ ಬಗ್ಗೆ ಏನು ಮಾತನಾಡಿದ್ದರು ಎಂದು ರಾಹುಲ್ ಗಾಂಧಿ ಸ್ಮರಿಸಲಿ,ಅಸ್ಸಾಂ ಸಿಎಂ ಆಗಿ ತರುಣ್ ಗಗೋಯ್ ಬಂಗ್ಲಾದೇಶದ ಹಿಂದುಗಳ ಬಗ್ಗೆ ಏನು ಹೇಳಿದ್ದರು, ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದುರುವುದೇಕೆ ಎಂಬುದಕ್ಕೆ ಕಾಂಗ್ರೆಸ್ ನಾಯಕರೇ ಉತ್ತರಕೊಡಬೇಕು .ಬಾಂಗ್ಲಾ ದೇಶದಿಂದ ಬಂದಿರುವ ಹಿಂದು ಅಲ್ಪಸಂಖ್ಯಾತರಿಗೆ ಪೌರತ್ವ ರಕ್ಷಣೆ ಕೊಡಬೇಕು ಎಂದು ಪ್ರಕಾಶ್ ಕಾರಟ್ ಪತ್ರ ಬರೆದಿದ್ದು ಮರೆತು ಹೋಯ್ತಾ?ಈಗ ಪ್ರಕಾಶ್ ಕಾರಟ್ ಎಲ್ಲಿ ಅಡಗಿದ್ದಾರೆ ಎಂದು ಪ್ರಶ್ನಿಸಿದರು.

ಎನ್ ಆರ್ ಸಿ ಈ ರಾಷ್ಟ್ರದ ಪ್ರತಿಯೊಬ್ಬ ನಾಗರೀಕರಿಗೂ ಅತ್ಯಗತ್ಯ.ನಾವು ಈ ರಾಷ್ಟ್ರದ ನಾಗರೀಕರು ಎಂದು ದಾಖಲೆ ತೋರಿಸಲು,ನೋಂದಣಿಯಾಗಲು ಯಾರೂ ಹಿಂಜರಿಯುವುದಿಲ್ಲ‌ ಆ ಹಿಂಜರಿಕೆಗೂ ಅರ್ಥವೇ ಇಲ್ಲ.ಎನ್ ಆರ್ ಸಿ ಯಾವುದೇ ಒಂದು ಕೋಮನ್ನು ಗುರಿಯಾಗಿಸಿಕೊಂಡಿಲ್ಲ.ಅದು ಸಾಧ್ಯವೂ ಇಲ್ಲ‌.ದೇಶದಲ್ಲಿ ಅಕ್ರಮವಾಗಿ ನೆಲಸಿರುವವರನ್ನು ಪತ್ತಹಚ್ಚಲು ಇರುವ ಮಾರ್ಗವೂ ಇದೊಂದೆ ಎಂದು ಎಸ್ಆರ್ಸಿ ಸಮರ್ಥಿಸಿಕೊಂಡರು.

ಇಮ್ರಾನ್ ಖಾನ್ ರ ತೆಹರಿಕ್ ಇ ಇನ್ಸಾಫ್ ಪಕ್ಷವು ಯುಪಿಎ ಯ ಇನ್ನೊಂದು ರೂಪವೇ ಆಗಿದೆ. ಇಮ್ರಾನ್ ಖಾನ್ ಮತ್ತು ರಾಹುಲ್ ಗಾಂಧಿ ಆಡುವ ಭಾಷೆ ಒಂದೇ ಆಗಿದೆ.ಹಾಗೆ ನೋಡಿದ್ರೆ ರಾಹುಲ್ ಗಾಂಧಿ ಫೇಕ್ ಗಾಂಧಿ.ಗಾಂಧಿ ಎನ್ನುವ ಹೆಸರು ಎರವಲು ಪಡೆದಿದ್ದಾರೆ.ಅವರ ಹಿಂದೂ ವಿರೋಧಿ ನಡವಳಿಕೆ ನೋಡಿದರೆ ಅವರನ್ನು ರಾಹುಲ್ ಜಿನ್ನಾ ಎಂದು ಕರೆಯುವುದು ಸೂಕ್ತ.ಕಾಂಗ್ರೆಸ್ ನ ಹಿಂದೂ ವಿರೋಧಿ ಹಾಗೂ ಸೂಡೋ ಸೆಕ್ಯೂಲರಿಸಂನ್ನು ಬಯಲು ಮಾಡುವ ಕಾಲ ಈಗ ಬಂದಿದೆ.ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಕಾಂಗ್ರೆಸ್ ಗೆ ಅಷ್ಟೊಂದು ಮಮಕಾರವಿದ್ದರೆ,ಯುಪಿಎ ಅವಧಿಯಲ್ಲಿ ಅವರಿಗೆಲ್ಲಾ ಪೌರತ್ವ‌ನೀಡುವ ಕಾಯ್ದೆಯನ್ನೇಕೆ ಜಾರಿಗೊಳಿಸಲಿಲ್ಲ ಎಂದು ತಿರುಗೇಟು ನೀಡಿದರು.

ಪೌರತ್ವ ಕಾಯ್ದೆ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಕೆಲ ರಾಜ್ಯಗಳು ಹೇಳುತ್ತಿವೆ ಆದರೆ ಪೌರತ್ವ ವಿಚಾರ ರಾಜ್ಯಗಳಿಗೆ ಸಂಬಂಧಪಟ್ಟಿದ್ದಲ್ಲ ಅಲ್ಲದೇ ಸಂಸತ್ತು ರಚಿಸುವ ಕಾಯ್ದೆ ಅನುಷ್ಠಾನಕ್ಕೆ ವಿರೋಧಿಸಲು ರಾಜ್ಯಗಳಿಗೆ ಅಧಿಕಾರ ಇಲ್ಲ ಹಾಗೊಂದು ವೇಳೆ ಪೌರತ್ವ ಕಾಯ್ದೆ ಅನುಷ್ಠಾನ ಮಾಡಲ್ಲ ಎಂದರೆ ಅದನ್ನು ಪತ್ರ ಬರೆದು ತಿಳಿಸಿ ಎಂದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.