ETV Bharat / state

ಮೀಸಲಾತಿ ಹೆಚ್ಚಿಸಿ: ಸಿಎಂಗೆ ಮನವಿ ಮಾಡಿದ ವಾಲ್ಮೀಕಿ ಶ್ರೀ ನೇತೃತ್ವದ ನಿಯೋಗ

author img

By

Published : Aug 18, 2021, 6:16 PM IST

ಸಿಎಂ ಬೊಮ್ಮಾಯಿ ಅವರಿಗೆ ವಾಲ್ಮೀಕಿ ವಿಜಯ ಕೃತಿ ನೀಡಿದ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ವಾಲ್ಮೀಕಿ ಸಮುದಾಯ ಮೀಸಲಾತಿಯನ್ನು 7.5 ಹೆಚ್ಚಳ ಮಾಡಬೇಕು ಇಲ್ಲದೇ ಇದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗಲಿದೆ ಎನ್ನುವ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಸಿಎಂಗೆ ಮನವಿ ಮಾಡಿದ ವಾಲ್ಮೀಕಿ ಶ್ರೀ ನೇತೃತ್ವದ ನಿಯೋಗ
ಸಿಎಂಗೆ ಮನವಿ ಮಾಡಿದ ವಾಲ್ಮೀಕಿ ಶ್ರೀ ನೇತೃತ್ವದ ನಿಯೋಗ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೀಸಲಾತಿ ಎನ್ನುವ ಬಿಸಿ ತುಪ್ಪ ಗಂಟಲು ಸುಡುತ್ತಿದೆ. ಒಂದು ಕಡೆ ಪಂಚಮಸಾಲಿ ಮತ್ತೊಂದು ಕಡೆ ವಾಲ್ಮೀಕಿ ಸಮುದಾಯ, ಯಾವುದೇ ತೀರ್ಮಾನ ಕೈಗೊಳ್ಳಲಾಗದೇ, ತಟಸ್ಥವಾಗಿ ಉಳಿಯಲೂ ಆಗದೇ ಒತ್ತಡಕ್ಕೆ ಸಿಲುಕಿದ್ದಾರೆ.

ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಯಲ್ಲಿ ಸೇರಿಸುವಂತೆ ಕೂಡಲಸಂಗಮ ಶ್ರೀಗಳು ಸೆಪ್ಟೆಂಬರ್ -15 ರ ಗಡುವು ನೀಡಿ ಸಿಎಂ ಬೊಮ್ಮಾಯಿ ಅವರಿಗೆ ಹೋರಾಟದ ಎಚ್ಚರಿಕೆ ನೀಡಿದ ಬೆನ್ನಲ್ಲೇ ವಾಲ್ಮೀಕಿ ಸಮುದಾಯ ಮೀಸಲಾತಿ ಹೆಚ್ಚಳದ ಬೇಡಿಕೆ ಇರಿಸಿದೆ. ಹರಿಹರ ತಾಲೂಕಿನ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳ ನೇತೃತ್ವದ ನಿಯೋಗ ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಸಿಎಂಗೆ ಮನವಿ ಮಾಡಿದ ವಾಲ್ಮೀಕಿ ಶ್ರೀ ನೇತೃತ್ವದ ನಿಯೋಗ
ಸಿಎಂಗೆ ಮನವಿ ಮಾಡಿದ ವಾಲ್ಮೀಕಿ ಶ್ರೀ ನೇತೃತ್ವದ ನಿಯೋಗ

ಮೀಸಲಾತಿ ಹೆಚ್ಚಳ ಸಂಬಂಧ ನ್ಯಾ. ನಾಗಮೋಹನ್ ದಾಸ್ ವರದಿ ಬಗ್ಗೆ ಪ್ರಸ್ತಾಪ ಮಾಡಿತು. ನ್ಯಾ.ನಾಗಮೋಹನದಾಸ್ ಅವರು ವರದಿ ಕೊಟ್ಟ ತಕ್ಷಣವೇ ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿಯಾಗಿದ್ದ ವೇಳೆ, ಯಡಿಯೂರಪ್ಪ ನೀಡಿದ್ದ ಭರವಸೆಯನ್ನು ನೆನಪಿಸಿ ಸರ್ಕಾರ ಮಾತು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಎಂ ಬೊಮ್ಮಾಯಿ ಅವರಿಗೆ ವಾಲ್ಮೀಕಿ ವಿಜಯ ಕೃತಿ ನೀಡಿದ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು, ವಾಲ್ಮೀಕಿ ಸಮುದಾಯ ಮೀಸಲಾತಿಯನ್ನು 7.5 ಹೆಚ್ಚಳ ಮಾಡಬೇಕು ಇಲ್ಲದೇ ಇದ್ದಲ್ಲಿ ಹೋರಾಟದ ಹಾದಿ ಹಿಡಿಯಬೇಕಾಗಲಿದೆ ಎನ್ನುವ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ನಿಯೋಗದಲ್ಲಿ ಸಾರಿಗೆ ಸಚಿವ ಬಿ ಶ್ರೀರಾಮುಲು, ಶಾಸಕರಾದ ಶಿವನಗೌಡ ನಾಯಕ್, ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಮತ್ತು ಹಿರಿಯರು ಮುಖ್ಯಮಂತ್ರಿಗಳ ಜೊತೆ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.