ETV Bharat / state

ಕೆಂಪೇಗೌಡ ಟರ್ಮಿನಲ್​ 2ಗೆ​​​​ 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಪ್ರಶಸ್ತಿ

author img

By ETV Bharat Karnataka Team

Published : Dec 21, 2023, 4:14 PM IST

Updated : Dec 21, 2023, 4:49 PM IST

ಜಾಗತಿಕವಾಗಿ ಅತ್ಯುತ್ತಮ ವಿಮಾನ ನಿಲ್ದಾಣಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಈ ಪ್ರಶಸ್ತಿಗೆ ಪ್ರಿಕ್ಸ್​ ವರ್ಸೈಲ್ಸ್ ಎಂಬ ಸಂಸ್ಥೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್​ 2 ಅನ್ನು ಆಯ್ಕೆ ಮಾಡಿದೆ.

Terminal 2 at Bengalurus Kempegowda as one of Worlds Most Beautiful Airports
Terminal 2 at Bengalurus Kempegowda as one of Worlds Most Beautiful Airports

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯುನೆಸ್ಕೋನ ಪ್ರಿಕ್ಸ್​ ವರ್ಸೈಲ್ಸ್ 2023 ಪುರಸ್ಕಾರಕ್ಕೆ ಪಾತ್ರವಾಗಿದೆ. ಟರ್ಮಿನಲ್​ 2 (ಟಿ2) 'ವಿಶ್ವದ ಅತಿ ಸುಂದರ ವಿಮಾನ ನಿಲ್ದಾಣ' ಮತ್ತು ಒಳಾಂಗಣ ವಿನ್ಯಾಸಕ್ಕೆ 2023ರ ವಿಶ್ವದ ವಿಶೇಷ ಪ್ರಶಸ್ತಿ ಲಭ್ಯವಾಗಿದೆ.

ತೀರ್ಪು ಸಮಿತಿಯಲ್ಲಿ ಖ್ಯಾತ ಫ್ಯಾಷನ್​ ಡಿಸೈನರ್​​ ಎಲಿ ಸಬಾ ನೇತೃತ್ವವಹಿಸಿದ್ದರು. ಫ್ರಿಕ್ಸ್​​ ವರ್ಸೈಲ್ಸ್ ಸಂಸ್ಥೆಯು ವಿಮಾನ ನಿಲ್ದಾಣದಲ್ಲಿನ​​ ಸಮಕಾಲೀನ ವಾಸ್ತುಶಿಲ್ಪದಲ್ಲಿನ ಅತ್ಯುತ್ತಮ ಸಾಧನೆ ಗುರುತಿಸಿ ಪ್ರಶಸ್ತಿ ಘೋಷಿಸುತ್ತದೆ. ನಿಲ್ದಾಣಗಳಲ್ಲಿರುವ ಸೌಲಭ್ಯ, ಒಳಾಂಗಣ ವಿನ್ಯಾಸ, ಸೌಕರ್ಯ ಮತ್ತು ವಾಸ್ತುಶಿಲ್ಪ ಪ್ರಮುಖ ಮಾನದಂಡವಾಗಿದೆ.

ಈ ಪ್ರಶಸ್ತಿ ದಕ್ಕಿಸಿಕೊಂಡ ಭಾರತದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೂ ಬೆಂಗಳೂರು ಏರ್​ಪೋರ್ಟ್​​​ ಪಾತ್ರವಾಗಿದೆ. ಪ್ರಶಸ್ತಿ ಘೋಷಿಸಿರುವ ಪ್ರಿಕ್ಸ್​ ವರ್ಸೈಲ್ಸ್​​, ಈ ವಿಮಾನ ನಿಲ್ದಾಣದ ಅದ್ಭುತ ವಿನ್ಯಾಸ ಮತ್ತು ವಾಸ್ತುಶಿಲ್ಪ ಜಾಗತಿಕ ಮಟ್ಟದಲ್ಲಿದೆ ಎಂದು ತಿಳಿಸಿದೆ.

ಜಾಗತಿಕ ಪ್ರಮುಖ ಏರ್​ಪೋರ್ಟ್​​ಗಳ ಸಾಲಿನಲ್ಲಿ ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದ ಸ್ಥಾನ ಕುರಿತು ಮಾತನಾಡಿರುವ ಬೆಂಗಳೂರು ಇಂಟರ್​ನ್ಯಾಷನಲ್​ ಏರ್​ಪೋರ್ಟ್​ ಲಿಮಿಡೆಟ್​​ನ ಎಂಡಿ ಮತ್ತು ಸಿಒಒ ಹರಿ ಮಾರರ್​​, ಪ್ರಿಕ್ಸ್​ ವರ್ಸೈಲ್ಸ್​​​ ಪ್ರಶಸ್ತಿಗೆ ಟರ್ಮಿನಲ್​ 2 ನಾಮನಿರ್ದೇಶನವಾಗಿದ್ದು ಹೆಮ್ಮೆಯ ಸಂಗತಿ ಎಂದರು.

ಟರ್ಮಿನಲ್​ 2 ಇಂಡಿಯನ್​​ ಗ್ರೀನ್​ ಬಿಲ್ಡಿಂಗ್​ ಕೌನ್ಸಿಲ್​ನ ಐಜಿಬಿಸಿ ಪ್ಲಾಟಿನಂ ಪ್ರಶಸ್ತಿಯನ್ನೂ ಪಡೆದಿದೆ. ಟಿ2 ವಾರ್ಷಿಕವಾಗಿ 25 ಮಿಲಿಯನ್​ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು ಇದು ವಿಶ್ವದ ಅತಿ ದೊಡ್ಡ ಟರ್ಮಿನಲ್‌ಗಳಲ್ಲಿ ಒಂದು. ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಟರ್ಮಿನಲ್‌ ಬಿಂಬಿಸುತ್ತದೆ. ಕೃತಕ ಜಲಪಾತ, ಆಕರ್ಷಕ ಗಿಡಗಳು, ಆಧುನಿಕ ತಂತ್ರಜ್ಞಾನ, ಹ್ಯಾಂಗಿಂಗ್​ ಗಾರ್ಡನ್​ ಅನ್ನು ಇದು ಹೊಂದಿದೆ. ಟರ್ಮಿನಲ್​ 2ದಿಂದ ಅಂತರರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತವೆ.(ಎಎನ್​ಐ)

ಇದನ್ನೂ ಓದಿ: ಕೆಂಪೇಗೌಡ ವಿಮಾನ ನಿಲ್ದಾಣದ ಸೊಬಗು ಹೆಚ್ಚಿಸಿದ ಹೊಸ ಟರ್ಮಿನಲ್ 2: ಮನ ತುಂಬುವ ಸುಂದರ ಫೋಟೋಗಳು

Last Updated :Dec 21, 2023, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.