ETV Bharat / state

ಧಾರಾಕಾರ ಮಳೆ ಹಿನ್ನೆಲೆ ನಗರ ವ್ಯಾಪ್ತಿಯ ಕೆಳ ಸೇತುವೆಗಳು ಬಂದ್: ತುಷಾರ್ ಗಿರಿನಾಥ್

author img

By

Published : May 22, 2023, 4:58 PM IST

ನೀರು ಸುಗಮವಾಗಿ ಹೋಗದ ಬೆಂಗಳೂರಿನ ಎಲ್ಲ ಮಾದರಿಯ ಕೆಳ ಸೇತುವೆಗಳನ್ನು ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

underpasses-across-the-city-are-closed-due-to-rain-said-tushar-girinath
ಧಾರಾಕಾರ ಮಳೆಯ ಹಿನ್ನೆಲೆ ನಗರ ವ್ಯಾಪ್ತಿಯ ಕೆಳ ಸೇತುವೆಗಳು ಬಂದ್: ತುಷಾರ್ ಗಿರಿನಾಥ್

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ನೀರು ಸುಗಮವಾಗಿ ಹೋಗದ ನಗರ ವ್ಯಾಪ್ತಿಯ ಎಲ್ಲ ಮಾದರಿಯ ಕೆಳ ಸೇತುವೆಗಳನ್ನು ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಕೆಆರ್ ಸರ್ಕಲ್‌ನ ಕೆಳ ಸೇತುವೆಯಲ್ಲಿ ಯುವತಿ ಸಾವಿನ ಪ್ರಕರಣ ಸಂಬಂಧ ಈಗಾಗಲೇ ನಗರದಲ್ಲಿರುವ ಎಲ್ಲ ಮಾದರಿಯ ಕೆಳಸೇತುವೆಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಯಾವ ಕೆಳಸೇತುವೆಯಲ್ಲಿ ನೀರು ಸುಗಮವಾಗಿ ಹೋಗುವುದಿಲ್ಲವೂ, ಆ ಕೆಳಸೇತುವೆಗಳನ್ನು ತಾತ್ಕಲಿಕವಾಗಿ ಬಂದ್ ಮಾಡಲಾಗುವುದು ಎಂದರು.

ನಿನ್ನೆ 3.15 ರಿಂದ 4 ಗಂಟೆ ವೇಳೆಗೆ 50 ಮಿ. ಮೀಟರ್ ಮಳೆ ಸುರಿದಿದೆ. 45 ನಿಮಿಷದ ಅವಧಿಯಲ್ಲೇ ಭಾರಿ ಮಳೆ ಬಂದಿದ್ದರಿಂದ ಅವಾಂತರ ಆಗಿದೆ. ಕೆಲವು ಅಹಿತರ ಘಟನೆ ನಡೆದಿದೆ. ಈಗ ಕೆಳ ಸೇತುವೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯಾವ ಯಾವ ಕೆಳ ಸೇತುವೆಗಳಲ್ಲಿ ಒಳಚರಂಡಿ ಇಲ್ಲವೂ ಅಥವಾ ನೀರು ಸುಗಮವಾಗಿ ಹರಿಯುವುದಿಲ್ಲವೋ ಅದನ್ನು ಬಂದ್ ಮಾಡುತ್ತೇವೆ. ಇಂದು ಸಂಜೆಯೊಳಗೆ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.

ಇದನ್ನೂ ಓದಿ:ರಾಜಧಾನಿಯಲ್ಲಿ ಮಳೆ ಅವಾಂತರ: ಮಳೆ ನೀರಲ್ಲಿ ಮುಳುಗಿದ ಜಗ್ಗೇಶ್​ BMW ಕಾರು

ಸೂಕ್ಷ್ಮ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ: ಮಳೆ ನೀರಿಗಿಂತ ಸುತ್ತಮುತ್ತಲಿನ ಪ್ರದೇಶದಿಂದ ಬರುವಂತಹ ನೀರು ಹೆಚ್ಚಿದ್ದು, ಇದರಿಂದ ಕೆಳಸೇತುವೆಗಳಲ್ಲಿ ನೀರು ತುಂಬುವ ಪರಿಸ್ಥಿತಿ ಎದುರಾಗಿದೆ. ಇದು ಮಳೆ ಅನಾಹುತಕ್ಕೆ ಕಾರಣವಾಗಿದೆ. ಇನ್ನೂ ಪೊಲೀಸ್ ಇಲಾಖೆಯಿಂದ ನೀಡಿದ್ದ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ದುರಸ್ತಿ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.

ಹೆಚ್ಚು ಕಡೆ ನೆಡೆಯದ ಅವಘಡ: ನಗರದಲ್ಲಿ ಒಟ್ಟು 115 ಕಡೆ ದುರಸ್ತಿ ಕಾರ್ಯ ನಡೆದಿದ್ದು, ಅಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದ ಅವರು, ಉಳಿದ 25 ಕಡೆ ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛ ಮಾಡಬೇಕಿದೆ ಅಲ್ಲಿ ಕೆಲಸ ನಡೆಯುತ್ತಿದೆ. ನಾವು ನಿರಂತರವಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೀವೆ. ರಾಜಕಾಲುವೆ ಕೆಲಸಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ನಿರಂತರವಾಗಿ ಕೆಲಸ ನಡೆಸಿದ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ಮಳೆ ಆದರೂ ಹೆಚ್ಚುಕಡೆ ಅವಘಡಗಳು ನಡೆದಿಲ್ಲ ಎಂದು ತಿಳಿಸಿದರು.

500 ಕಡೆ ರಾಜಕಾಲುವೆ ಒತ್ತುವರಿ ತೆರವು: ರಾಜಕಾಲುವೆ ಒತ್ತುವರಿ ತೆರವು ವಿಚಾರ ಕುರಿತು ಪ್ರತಿಕ್ರಿಯಿಸಿದ ತುಷಾರ್ ಗಿರಿನಾಥ್, 607 ಪ್ರದೇಶಗಳಲ್ಲಿ ರಾಜಕಾಲುವೆ ತೆರವು ವಿರುದ್ದ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಉಳಿದ 500 ಕಡೆ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಮಹಾದೇವಪುರ ವಲಯದಲ್ಲಿ ಈಗಾಗಲೇ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ ಎಂದು ನುಡಿದರು.

ಇದನ್ನೂ ಓದಿ:ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಭಾನುರೇಖಾ ಕುಟುಂಬಸ್ಥರಿಂದ ಬಿಬಿಎಂಪಿ ವಿರುದ್ಧ FIR ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.