ETV Bharat / state

ಬೆಂಗಳೂರಲ್ಲಿ ಭೀಕರ ಅಪಘಾತ.. ಬಸ್​ಗೆ ಕಾರು​ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ದುರ್ಮರಣ

author img

By

Published : May 5, 2022, 8:22 PM IST

ಸಿಲಿಕಾನ್​ ಸಿಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಅಸುನೀಗಿದ್ದಾರೆ.

two killed as car rams into the bus in bengaluru
ಬೆಂಗಳೂರಲ್ಲಿ ಭೀಕರ ಅಪಘಾತ.. ಕಾರಿಗೆ ಬಸ್​ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ದುರ್ಮರಣ

ಬೆಂಗಳೂರು: ವೇಗವಾಗಿ ಕಾರು ಚಲಾಯಿಸಿದ‌ ಪರಿಣಾಮ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಬಸ್​​ಗೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಗರದ ಬಿಡಿಎ ಟೋಲ್ ಬಳಿ ಘಟನೆ ಸಂಭವಿಸಿದೆ.

two killed as car rams into the bus in bengaluru
ನುಜ್ಜುಗುಜ್ಜಾದ ಕಾರು

ಸುಮುಖ್ (22) ಹಾಗೂ ಲೀನಾನಾಯ್ದು (19) ಎಂಬುವರೆ ಸಾವನ್ನಪ್ಪಿದ್ದವರು. ಕಾರು ಚಲಾಯಿಸುತ್ತಿದ್ದ ಸುಮುಖ್ ತನ್ನ ಸ್ನೇಹಿತೆ ಲೀನಾನಾಯ್ಡುರನ್ನು ಕರೆದುಕೊಂಡು ನೈಸ್ ರಸ್ತೆಯಲ್ಲಿ ಪಿಇಎಸ್ ಕಾಲೇಜ್ ಕಡೆಯಿಂದ ಸೋಂಪುರ ಕಡೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಅತಿ ವೇಗದ ಚಾಲನೆಯೇ ಅವಘಡಕ್ಕೆ ಕಾರಣವಾಗಿದ್ದು, ಎದುರಿನಿಂದ ಬರುತ್ತಿದ್ದ ಬಸ್​​ಗೆ ಕಾರು ಡಿಕ್ಕಿ ಹೊಡೆದು, ಎರಡೂ ವಾಹನಗಳು ಪಲ್ಟಿಯಾಗಿವೆ.

two killed as car rams into the bus in bengaluru
ಪಲ್ಟಿಯಾದ ಬಸ್​

ಕಾರಿನಲ್ಲಿದ್ದ ಇಬ್ಬರೂ ತೀವ್ರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಸ್ ಚಾಲಕನ ಕಾಲಿಗೂ ಗಂಭೀರ ಗಾಯಗಳಾಗಿದ್ದು, ಇತರ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

two killed as car rams into the bus in bengaluru
ಅಪಘಾತಕ್ಕೀಡಾದ ಕಾರು

ಕಾರು ಡಿಕ್ಕಿಯಾದ ರಭಸಕ್ಕೆ ಟೈರ್ ಕಳಚಿಕೊಂಡು ಮುಂದೆ ಹೋಗುತ್ತಿದ್ದ ಮತ್ತೊಂದು ಕಾರಿನ ಹಿಂಭಾಗಕ್ಕೆ ತಗುಲಿ ಜಖಂ ಆಗಿದೆ. ಸದ್ಯ ಕೆಂಗೇರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿವಾಹ ನೋಂದಣಿ ಕಚೇರಿ ಸಮೀಪಿಸುತ್ತಿದ್ದಂತೆ ಯುವಕ ಪರಾರಿ.. ಪ್ರೀತಿಸಿದಾಕೆ ಕಂಗಾಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.