ETV Bharat / state

Watch.. ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿನ ಅಪಘಾತದಲ್ಲಿ ಯುವಕ-ಯುವತಿ ಸಾವು: ಭಯಾನಕ ದೃಶ್ಯ CCTVಯಲ್ಲಿ ಸೆರೆ

author img

By

Published : Sep 15, 2021, 11:59 AM IST

Updated : Sep 15, 2021, 3:27 PM IST

ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಬೈಕ್​ಗೆ ಕಾರು ಡಿಕ್ಕಿಯಾದ ರಭಸಕ್ಕೆ ಫ್ಲೆಓವರ್​ ಮೇಲಿಂದ ಕೆಳಗೆ ಬಿದ್ದು ತಮಿಳುನಾಡು ಮೂಲದ ಯುವಕ ಮತ್ತು ಯುವತಿ ಸಾವನ್ನಪ್ಪಿದ ಭೀಕರ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

video
ಅಪಘಾತದ ಭೀಕರ ದೃಶ್ಯ

ಆನೇಕಲ್/ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಮೇಲೆ ಬೈಕ್​ಗೆ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೇಲ್ಸೇತುವೆ ಮೇಲಿಂದ ಕೆಳಗೆ ಬಿದ್ದು ಯುವಕ ಮತ್ತು ಯುವತಿ ಸಾವನ್ನಪ್ಪಿದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸ್ಪೀಡ್​ ಆಗಿ ಬಂದು ಕಾರು ಗುದ್ದಿದ ರಭಸಕ್ಕೆ ತಮಿಳುನಾಡಿನ ಚೆನ್ನೈ ಮೂಲದ ಪ್ರೀತಮ್(30) ಹಾಗೂ ಕೃತಿಕಾ(28) ಫ್ಲೈಓವರ್ ಮೇಲಿಂದ ಕೆಳಗೆ ಹಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಗಳವಾರ ರಾತ್ರಿ 9:20 ರ ಸಮಯದಲ್ಲಿ ಸಿಲ್ಕ್ ಬೋರ್ಡ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗವಾಗಿ ಬರುತ್ತಿದ್ದ ಕಾರು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ಇಬ್ಬರೂ ಟೆಕ್ಕಿಗಳು ಸಾವನ್ನಪ್ಪಿದ್ದಾರೆ. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಇಬ್ಬರ ಮೃತದೇಹ ಇರಿಸಲಾಗಿದ್ದು, ಚೆನ್ನೈನಿಂದ ಮೃತರ ಸಂಬಂಧಿಕರು ಧಾವಿಸಿದ ಕೂಡಲೇ ಶವಗಳನ್ನು ಅವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಭೀಕರ ಅಪಘಾತದ ದೃಶ್ಯ

ಇದನ್ನೂ ಓದಿ:Watch.. ಮೇಲ್ಸೇತುವೆ ಮೇಲೆ ಯುವಕ - ಯುವತಿಗೆ ಕಾರು ಡಿಕ್ಕಿ: ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಸಾವು

ಭಯಾನಕ ದೃಶ್ಯ CCTVಯಲ್ಲಿ ಸೆರೆ

ಬುಲೆಟ್​​ನಲ್ಲಿ ಪೆಟ್ರೋಲ್ ಹಾಗೂ ಬ್ರೇಕ್ ಇಲ್ಲದೆ ಇದ್ದದ್ದೇ ಸಾವಿಗೆ ಕಾರಣ..?

ವೇಗವಾಗಿ ಮೇಲೆರಗಿದ ಬೊಲೆರೊ ಕಾರು ಬುಲೆಟ್​ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರು ಕೆಳಗೆ ಹಾರಿ ಬಿದ್ದ ದೃಶ್ಯಗಳು ಇದೀಗ ವೈರಲ್ ಆಗ್ತಿವೆ. ಬುಲೆಟ್ ಸಮೇತ ಕೃತಿಕಾ ಹಾಗೂ ಪ್ರೀತಮ್​ಗೆ ಕಾರು ಡಿಕ್ಕಿ ಹೊಡೆದಿದೆ. ಬುಲೆಟ್ ಸಮೇತ ಇಬ್ಬರೂ ಮೇಲ್ಸೇತುವೆ ತಡೆಗೋಡೆಗೆ ಸಿಕ್ಕಿ ಮೇಲಿಂದ ಕೆಳಗೆ ಹಾರಿ ಬಿದ್ದಿದ್ದಾರೆ ಎಂದು ಮೇಲ್ನೋಟದ ತನಿಖೆಯಲ್ಲಿ ಹೊರಬಿದ್ದಿದೆ. ಇನ್ನೂ ಮೇಲ್ಸೇತುವೆ ಲೇಬೇನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡದಂತೆ ಸಂಚಾರ ಪೊಲೀಸ್ ಇಲಾಖೆ ತಾಕೀತು ಮಾಡಿರುವುದರಿಂದ ನಿಖರವಾದ ವರದಿ ಲಭ್ಯವಾಗಬೇಕಾಗಿದೆ.

Last Updated : Sep 15, 2021, 3:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.