ETV Bharat / state

ಬಾರ್​ನಲ್ಲಿ ಲಾಂಗ್ ಹಿಡಿದು ಪುಂಡಾಟಿಕೆ ಮೆರೆದಿದ್ದ ಇಬ್ಬರು ಅಂದರ್​..!

author img

By

Published : Sep 2, 2021, 1:01 PM IST

ಮಚ್ಚು - ಲಾಂಗು ಹಿಡಿದು ಬಾರ್ ಒಳಗೆ ನುಗ್ಗಿದ್ದ ಪುಡಿರೌಡಿಗಳು ಅಲ್ಲಿದ್ದ ಗ್ರಾಹಕರಿಗೆ ಬೆದರಿಕೆ ಹಾಕಿದ್ದಲ್ಲದೇ. ಗ್ಲಾಸ್​​ ಒಡೆದು ಪರಾರಿಯಾಗಿದ್ದರು, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Two arrested for assaulting costumers at Bar
ಲಾಂಗ್ ಹಿಡಿದು ಬಾರ್​ನಲ್ಲಿ ಪುಂಡಾಟಿಕೆ ಮೆರೆದಿದ್ದ ಇಬ್ಬರು ಅಂದರ್​..!

ಬೆಂಗಳೂರು: ಕಳೆದೆರಡು ದಿನದ ಹಿಂದೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಇಟ್ಟಮಡು ಬಳಿಯ ಎಸ್ಎಲ್​ವಿ ಬಾರ್​ಗೆ ನುಗ್ಗಿದ ಕಿಡಿಗೇಡಿಗಳಿಬ್ಬರು ಲಾಂಗ್ ಹಿಡಿದು ಗಲಾಟೆ ಮಾಡಿದ್ದರು. ಇದೀಗ ಆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ತೇಜಸ್ ಹಾಗೂ ತೇಜಸ್ ಬಂಧಿತ ಆರೋಪಿಗಳು. ಇಟ್ಟಮಡುಗು ಬಳಿಯ ಎಸ್ಎಲ್​ವಿ ಬಾರ್‌ನಲ್ಲಿ ಮಚ್ಚು ಲಾಂಗು ಹಿಡಿದು ಈ ಪುಂಡರು ಆರ್ಭಟ ನಡೆಸಿದ್ದರು, ಈ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ಜೊತೆಗೆ ಪಕ್ಕದ ಬಾರ್​ನಲ್ಲಿಯೂ ಗ್ಲಾಸ್‌ಗಳನ್ನ ಒಡೆದು ಹಾಕಿ ಪರಾರಿಯಾಗಿದ್ದರು. ಪುಡಿರೌಡಿಗಳ ಹೆಡೆಮುರಿಕಟ್ಟಲು ಪಣ ತೊಟ್ಟ ಪೊಲೀಸರು ಕೊನೆಗೂ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬಾರ್​ಗೆ ನುಗ್ಗಿ ಪುಡಿರೌಡಿಗಳ ದಾಂಧಲೆ: ಪುಂಡರ ಕೃತ್ಯ ಸಿಸಿಟಿವಿಯಲ್ಲಿ‌ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.