ETV Bharat / state

ಸ್ಯಾಂಡಲ್​ವುಡ್​ಗೆ ಡ್ರಗ್​ ಜಾಲದ ನಂಟು ಆರೋಪ ಪ್ರಕರಣ: ಕೈ-ಕಮಲದ ನಡುವೆ ಹಗ್ಗಜಗ್ಗಾಟ

author img

By

Published : Sep 9, 2020, 10:52 AM IST

ಡ್ರಗ್​​​​ ಜಾಲದಲ್ಲಿ ಸಿಲುಕಿರುವ ನಟ-ನಟಿಯರು ಈ ಹಿಂದೆ ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸಿದ್ದರು. ಮುಖಂಡರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಉಭಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಟ್ವಿಟರ್​ನಲ್ಲಿ ಹಗ್ಗಜಗ್ಗಾಟ ಮುಂದುವರೆದಿದೆ.

tweet-war-between-congress-bjp-on-sandalwood-drug-case
ಕೈ-ಕಮಲದ ಟ್ವೀಟ್​ ವಾರ್​ನಲ್ಲಿ ಗೆಲ್ಲೋರು ಯಾರು.?

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ ಜಾಲದ​ ನಂಟು ಆರೋಪ ಪ್ರಕರಣದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ಟ್ವೀಟ್ ವಾರ್ ನಡೆದಿದೆ. ಚಿತ್ರರಂಗದ ನಟ-ನಟಿಯರು ಇದೀಗ ಡ್ರಗ್​​​ ವಿಚಾರದಲ್ಲಿ ಸಾಕಷ್ಟು ದೊಡ್ಡ ಸುದ್ದಿಯಾಗುತ್ತಿದ್ದಾರೆ.

ಡ್ರಗ್​ ಜಾಲದಲ್ಲಿ ಸಿಲುಕಿರುವ ನಟ-ನಟಿಯರು ಈ ಹಿಂದೆ ರಾಜಕೀಯ ಪಕ್ಷಗಳ ಪರ ಪ್ರಚಾರ ನಡೆಸಿದ್ದರು. ಮುಖಂಡರನ್ನು ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಉಭಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದು, ಟ್ವಿಟರ್​​​ನಲ್ಲಿ ಹಗ್ಗಜಗ್ಗಾಟ ಮುಂದುವರಿದಿದೆ.

  • ಮಾದಕ‌ವಸ್ತು ಮಾರಾಟ ಮಾಡುತ್ತಿರುವವರ ವಿರುದ್ಧ ರಾಜ್ಯ @BSYBJP ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.

    ಬಂಧಿತರಲ್ಲಿ ಕೆಲವರಿಗೆ @BJP4Karnataka ನಂಟಿದೆ, ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಈ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಯಬೇಕು.#DrugsMukthaKarnataka

    — Karnataka Congress (@INCKarnataka) September 6, 2020 " class="align-text-top noRightClick twitterSection" data=" ">

2 ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಪಕ್ಷ, ಮಾದಕ ‌ವಸ್ತು ಮಾರಾಟ ಮಾಡುತ್ತಿರುವವರ ವಿರುದ್ಧ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಂಧಿತರಲ್ಲಿ ಕೆಲವರಿಗೆ ರಾಜ್ಯ ಬಿಜೆಪಿ ಜೊತೆ ನಂಟಿದೆ. ಕೆಲವು ಸಚಿವರು ಆರೋಪಿಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿತ್ತು.

  • ಮಾದಕ ವಸ್ತು ದಂಧೆ ಪ್ರಕರಣ ತನಿಖೆಯ ಹಂತದಲ್ಲಿದ್ದು ಬಿಜೆಪಿ ಸರ್ಕಾರ ಕಠಿಣ ನಿಲುವು ತಾಳಿದೆ, @INCKarnataka ವೃಥಾ ಆರೋಪ ಮಾಡಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ.

    ನಟನಟಿಯರು ಎಲ್ಲಾ ಪಕ್ಷದವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಪಕ್ಷದ ಜೊತೆಗಿನ ಸಂಬಂಧ ಎಂದು ಬಿಂಬಿಸಿ ಆರೋಪಿಸುವುದು ಹಾಸ್ಯಾಸ್ಪದ.

    ಈ ನಂಟಿನ ಬಗ್ಗೆ ಏನು ಹೇಳುತ್ತೀರಿ? pic.twitter.com/43BEPIGwFK

    — BJP Karnataka (@BJP4Karnataka) September 8, 2020 " class="align-text-top noRightClick twitterSection" data=" ">

ಇದಕ್ಕೆ ಟ್ವೀಟ್ ಮೂಲಕವೇ ಪ್ರತ್ಯುತ್ತರ ನೀಡಿದ ರಾಜ್ಯ ಬಿಜೆಪಿ, ಮಾದಕ ವಸ್ತು ದಂಧೆ ಪ್ರಕರಣ ತನಿಖೆಯ ಹಂತದಲ್ಲಿದ್ದು ಬಿಜೆಪಿ ಸರ್ಕಾರ ಕಠಿಣ ನಿಲುವು ತಾಳಿದೆ. ರಾಜ್ಯ ಕಾಂಗ್ರೆಸ್ ಸುಮ್ಮನೆ ಆರೋಪ ಮಾಡಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ. ನಟ-ನಟಿಯರು ಎಲ್ಲಾ ಪಕ್ಷದವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇದನ್ನೇ ಪಕ್ಷದ ಜೊತೆಗಿನ ಸಂಬಂಧ ಎಂದು ಬಿಂಬಿಸಿ ಆರೋಪಿಸುವುದು ಹಾಸ್ಯಾಸ್ಪದ. ಈ ನಂಟಿನ ಬಗ್ಗೆ ಏನು ಹೇಳುತ್ತೀರಿ? ಎಂದು ಕೇಳಿ ಕೆಲ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿತ್ತು.

  • ಸಮಯಸಾದಕ @BJP4Karnatakaಯವರೇ

    ನಟನಟಿಯರು ಎಲ್ಲಾ ಪಕ್ಷದವರೊಂದಿಗೆ ಕಾಣಿಸಿಕೊಳ್ಳುತ್ತಾರೆ ನಿಜ,

    ಆದರೆ ಪಕ್ಷದ ಪ್ರಚಾರಕ್ಕೆ ಬಾವುಟ ಹೆಗಲೇರಿಸಿ ಮತ ಕೇಳಿರುವುದು,

    ಆರೋಪಿ ಕಾರ್ತಿಕ್ ರಾಜ್ ನಿಮ್ಮವನಾಗಿರುವುದು,

    ಹಾಗೂ ನಿಮ್ಮ ಪಕ್ಷದ @CTRavi_BJPಯವರೇ ತನಿಖಾ ತಂಡಕ್ಕೆ ಒತ್ತಡವಿದೆ ಎಂದಿರುವುದು,

    ನಿಮ್ಮತ್ತಲೇ ಬೆಟ್ಟು ತೋರಿಸುತ್ತಿದೆ, pic.twitter.com/MKp49zRMHQ

    — Karnataka Congress (@INCKarnataka) September 8, 2020 " class="align-text-top noRightClick twitterSection" data=" ">

ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಮಯ ಸಾಧಕ ರಾಜ್ಯ ಬಿಜೆಪಿ ನಾಯಕರೇ ನಟ-ನಟಿಯರು ಎಲ್ಲಾ ಪಕ್ಷದವರೊಂದಿಗೆ ಕಾಣಿಸಿಕೊಳ್ಳುತ್ತಾರೆ ನಿಜ. ಆದರೆ ಪಕ್ಷದ ಪ್ರಚಾರಕ್ಕೆ ಬಾವುಟ ಹೆಗಲೇರಿಸಿ ಮತ ಕೇಳಿರುವುದು, ಆರೋಪಿ ಕಾರ್ತಿಕ್ ರಾಜ್ ನಿಮ್ಮವನಾಗಿರುವುದು ಹಾಗೂ ನಿಮ್ಮ ಪಕ್ಷದ ಸಚಿವ ಸಿ.ಟಿ.ರವಿಯವರೇ ತನಿಖಾ ತಂಡಕ್ಕೆ ಒತ್ತಡವಿದೆ ಎಂದಿರುವುದು, ನಿಮ್ಮತ್ತಲೇ ಬೆಟ್ಟು ತೋರಿಸುತ್ತಿದೆ ಎಂದು ತಿರುಗೇಟು ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.