ETV Bharat / state

ಓಲಾ ಉಬರ್ ಆಟೋಗಳಿಗೆ ದರ ನಿಗದಿ ಮಾಡಿ ಸಾರಿಗೆ ಇಲಾಖೆ ಆದೇಶ

author img

By

Published : Nov 25, 2022, 8:34 PM IST

ವಿಧಾನಸೌಧ
ವಿಧಾನಸೌಧ

ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಲೈಸೆನ್ಸ್ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ. 5 ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿ ಎಸ್ ಟಿ ತೆರಿಗೆ ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ಕರ್ನಾಟಕ ರಾಜ್ಯದ ಎಲ್ಲ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ.

ಬೆಂಗಳೂರು: ಓಲಾ, ಉಬರ್, ರಾಪಿಡೋ ಆಟೋಗಳಿಗೆ ದರ ನಿಗದಿ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಬೇಕಾಬಿಟ್ಟಿ ದರ ವಸೂಲಿ ಮಾಡುತ್ತಿದ್ದ ಓಲಾ, ಉಬರ್ ಆಟೋಗೆ ಹೈಕೋರ್ಟ್ ಅಂಕುಶ ಹಾಕಿತ್ತು.‌ ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ಅಗ್ರಿಗೇಟರ್ಸ್ ಆಟೋಗಳಿಗೆ ದರ ನಿಗದಿ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಲೈಸೆನ್ಸ್ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ. 5 ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿ ಎಸ್ ಟಿ ತೆರಿಗೆ ಸೇರಿಸಿ ಅಂತಿಮ ಪ್ರಯಾಣದರ ನಿಗದಿಪಡಿಸಲು ಕರ್ನಾಟಕ ರಾಜ್ಯದ ಎಲ್ಲ ಸಾರಿಗೆ ಪ್ರಾಧಿಕಾರಗಳಿಗೆ ನಿರ್ದೇಶಿಸಲಾಗಿದೆ.

ಹೈಕೋರ್ಟ್‌ ಸೂಚನೆಯಂತೆ ಶುಕ್ರವಾರ ನಡೆದ ಸಭೆಯಲ್ಲಿ ಸಾರಿಗೆ ಇಲಾಖೆ ದರವನ್ನು ಫಿಕ್ಸ್‌ ಮಾಡಿದೆ. ಕನಿಷ್ಠ ದರದ ಜೊತೆಗೆ ಶೇ. 5 ದರವನ್ನು ಫಿಕ್ಸ್‌ ಮಾಡಿ ಸಾರಿಗೆ ಇಲಾಖೆ ಆದೇಶ ಪ್ರಕಟಿಸಿದೆ. ಮೊದಲ 2 ಕಿ. ಮೀಗೆ 30 ರಿಂದ 33 ರೂ. ಏರಿಕೆಯಾಗಲಿದೆ. ಜಿಎಸ್‌ಟಿ ಸೇರ್ಪಡಿಸಿ ಶೇ 5 ರಷ್ಟು ಮಾತ್ರ ದರ ಏರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಪ್ರಯಾಣಿಕರಿಗೆ ಹೊರೆಯಾಗದಂತೆ ದರ ನಿಗದಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ದರ ನಿಗದಿ ಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಕೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರದೊಳಗೆ ದರ ನಿಗದಿ ಮಾಡುವುದಾಗಿ ಸರ್ಕಾರ ಹೈಕೋರ್ಟ್​ಗೆ ಭರವಸೆ ನೀಡಿತ್ತು.‌ ಈ ಹಿನ್ನೆಲೆ ಸಾರಿಗೆ ಇಲಾಖೆ ದರ ನಿಗದಿ‌ ಮಾಡಿ ಆದೇಶ ಹೊರಡಿಸಿದೆ. ಆಟೋ ಅಗ್ರಿಗೇಟರ್ಸ್ ತಮ್ಮ ಸೇವೆ ಸ್ಥಗಿತಗೊಳಿಸುವಂತೆ ನಿರ್ದೇಶಿಸಿ ಸಾರಿಗೆ ಇಲಾಖೆ ಅ. 6ಕ್ಕೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್ ಹೈಕೋರ್ಟ್ ಮೊರೆ ಹೋಗಿತ್ತು.

ಓದಿ: ನೋಟಿಸ್ ನೀಡಿದ ಬಳಿಕವೂ ಸಂಚರಿಸುವ ಓಲಾ, ಉಬರ್, ಆಟೋ ಜಪ್ತಿಗೆ ಸೂಚನೆ: ಸಚಿವ ಶ್ರೀರಾಮುಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.