ETV Bharat / state

ಇಂದು ಸಂಜೆ ಸಚಿವ ಸಂಪುಟದ ಉಪ ಸಮಿತಿ ಸಭೆ.. ಕಡಲೆಕಾಳು, ತೊಗರಿ ಖರೀದಿ ಕುರಿತು ಚರ್ಚೆ

author img

By

Published : Feb 4, 2021, 11:30 AM IST

ಇಂದು ಸಂಜೆ 4.30ಕ್ಕೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಸಚಿವ ಸಂಪುಟದ ಉಪಸಮಿತಿ ಸಭೆ ನಡೆಯಲಿದೆ.

Cabnet Sub-committee meeting
ಸಚಿವ ಸಂಪುಟದ ಉಪ ಸಮಿತಿ ಸಭೆ

ಬೆಂಗಳೂರು: ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಕುಸಿದಾಗ, ಬೆಲೆಗಳ ಸ್ಥಿರೀಕರಣಕ್ಕಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪಸಮಿತಿ ಸಭೆ ಇಂದು ನಡೆಯಲಿದೆ.

ಸಂಜೆ 4.30ಕ್ಕೆ ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ (ಕೊಠಡಿ ಸಂಖ್ಯೆ 313) ಕರೆಯಲಾಗಿದೆ. ಈ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಕಡಲೆಕಾಳು ಮತ್ತು ತೊಗರಿಯನ್ನು ಖರೀದಿಸುವ ಕುರಿತು ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.

Cabnet Sub-committee meeting
ಸಚಿವ ಸಂಪುಟದ ಉಪ ಸಮಿತಿ ಸಭೆಯ ಸೂಚನಾ ಪತ್ರ

ಓದಿ: ದೇಶದಲ್ಲಿ 1.55 ಲಕ್ಷ ಕೊರೊನಾ ಕೇಸ್​ಗಳು ಆ್ಯಕ್ಟಿವ್​.. 44 ಲಕ್ಷ ಮಂದಿಗೆ ಲಸಿಕೆ

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977 ರ ನಿಯಮ 13(5) ರನ್ವಯ ಸಹಕಾರ ಇಲಾಖೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳು ಈ ಉಪಸಮಿತಿಗೆ ಅವಶ್ಯ ನೆರವು ನೀಡುವುದು ಹಾಗೂ ಈ ಸಚಿವ ಸಂಪುಟ ಉಪಸಮಿತಿಗೆ ಅಗತ್ಯ ಹಿನ್ನೆಲೆ ಟಿಪ್ಪಣಿಯನ್ನು ತಯಾರಿಸಿ ಸಂಬಂಧಪಟ್ಟ ಸಚಿವರುಗಳಿಗೆ, ಅಧಿಕಾರಿಗಳಿಗೆ ಹಾಗೂ ಸಚಿವ ಸಂಪುಟ ಶಾಖೆಗೆ ಸಭೆಯ ಮುಂಚಿತವಾಗಿ ಒದಗಿಸಬೇಕೆಂದೂ ಮತ್ತು ಸಭೆಯ ನಂತರ ಸಭಾ ನಡವಳಿಗಳನ್ನು ತಯಾರಿಸಿ ಸಂಬಂಧಪಟ್ಟವರಿಗಾಗಿ ಕಳುಹಿಸಬೇಕೆಂದೂ ಕೋರಲಾಗಿದೆ ಎಂದು ಸಚಿವ ಸಂಪುಟದ ಸರ್ಕಾರದ ಉಪ ಕಾರ್ಯದರ್ಶಿ ಆರ್ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.