ETV Bharat / state

ಎನ್‌ಇಪಿ 2020 ತತ್ವಶಾಸ್ತ್ರವಾಗಿದ್ದು, ಎನ್​ಸಿಎಫ್ ಮಾರ್ಗವಾಗಿದೆ: ಸಚಿವ ಧರ್ಮೇಂದ್ರ ಪ್ರಧಾನ್​​

author img

By

Published : Apr 29, 2022, 7:45 PM IST

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಶಿಫಾರಸ್ಸಿನ ಅನ್ವಯ ಶಾಲಾ ಶಿಕ್ಷಣ, ಆರಂಭಿಕ ಹಂತದಲ್ಲಿ ಮಕ್ಕಳ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ಮಕ್ಕಳ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್) ರೂಪಿಸಲಾಗಿದೆ.

Minister Dharmendra Pradhan
ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ ದಾಖಲೆ ಬಿಡುಗಡೆ ಕಾರ್ಯಕ್ರಮ

ಬೆಂಗಳೂರು: ಎನ್‌ಇಪಿ 2020 ತತ್ವಶಾಸ್ತ್ರವಾಗಿದ್ದು, ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್) ಒಂದು ಮಾರ್ಗವಾಗಿದೆ. 34 ವರ್ಷದ ಬಳಿಕ ಹೊಸ ಶಿಕ್ಷಣ ವ್ಯವಸ್ಥೆ ಬರುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಐಐಎಸ್ಸಿಯಲ್ಲಿ ನಡೆದ ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟಿನ (ಎನ್.ಸಿ.ಎಫ್) ದಾಖಲೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಈ ದಾಖಲೆ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಕೌಶಲ್ಯ ಅಭಿವೃದ್ಧಿ, ಉಪನ್ಯಾಸಕರ ಪಾತ್ರ, ಮಾತೃ ಭಾಷೆ ಕಲಿಕೆಗೆ ಆದ್ಯತೆ ನೀಡಲಿದೆ. ಕಡಿಮೆ ಸಮಯದಲ್ಲಿ ನಮ್ಮ ಟೀಂ ವೈಜ್ಞಾನಿಕ ಪಠ್ಯಪುಸ್ತಕದ ಚೌಕಟ್ಟನ್ನು ರೂಪಿಸಿದೆ. ಅನೇಕ ಸಮಾಲೋಚನೆ, ಭಾಗೀದಾರಿಕೆ ಮೂಲಕ ಎನ್​​ ಇಪಿ ಪಠ್ಯಪುಸ್ತಕದ ಚೌಕಟ್ಟನ್ನು ರೂಪಿಸಲಾಗಿದೆ. ಇದರಿಂದ ಮಧ್ಯಮ ವರ್ಗದವರು ತಮ್ಮ ಮಕ್ಕಳನ್ನು ಅಂಗನವಾಡಿ, ಪ್ಲೇ ಸ್ಕೂಲ್​ಗೆ ಕಳುಹಿಸಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ಸಮಾನತೆ ಎನ್​​ಇ‌ಪಿ ತರಲಿದೆ ಎಂದರು.

ರಾಷ್ಟ್ರೀಯ ಪಠ್ಯ ಕ್ರಮ ಚೌಕಟ್ಟು ಎಂದರೇನು?: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಶಿಫಾರಸ್ಸಿನ ಅನ್ವಯ ಶಾಲಾ ಶಿಕ್ಷಣ, ಆರಂಭಿಕ ಹಂತದಲ್ಲಿ ಮಕ್ಕಳ ಆರೈಕೆ ಮತ್ತು ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ಮಕ್ಕಳ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್.ಸಿ.ಎಫ್) ರೂಪಿಸಲಾಗಿದೆ. ನಾಲ್ಕು ಪಠ್ಯಕ್ರಮದ ಚೌಕಟ್ಟುಗಳನ್ನು ಒದಗಿಸಲು ಎನ್.ಇ.ಪಿ 2020 ಆಧಾರದ ಮೇಲೆ 25 ವಿಷಯಗಳನ್ನು ಮೂರು ವರ್ಗಗಳಡಿ ಗುರುತಿಸಲಾಗಿದೆ. ಪಠ್ಯಕ್ರಮ ಮತ್ತು ಶಿಕ್ಷಣ ಶಾಸ್ತ್ರ, ಸಂಕಲನದ ತಂತ್ರಗಳು, ಎನ್.ಇ.ಪಿಯ ಇತರ ಪ್ರಮುಖ ಕ್ಷೇತ್ರಗಳು, 2020 ರ ವ್ಯವಸ್ಥಿತ ಬದಲಾವಣೆಗಳು ಮತ್ತು ಸುಧಾರಣೆಗಳ ಮೇಲೆ ಇವುಗಳನ್ನು ಕೇಂದ್ರೀಕರಿಸಲಾಗಿದೆ.

ಇದನ್ನೂ ಓದಿ: ಭಾಷೆ ವಿವಾದದ ಕೇಂದ್ರ ಬಿಂದು ಆಗಬಾರದು, ಕೆಲವ್ರು ವಿವಾದ ಮಾಡ್ತಾರೆ : ಸಚಿವ ಧರ್ಮೇಂದ್ರ ಪ್ರಧಾನ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.