ದೇಗುಲ ಕೆಡವಿದ ವಿಚಾರ.. ವಿವಿಧ ಪಕ್ಷಗಳ ನಾಯಕರ ಪ್ರತಿಕ್ರಿಯೆ ಹೀಗಿವೆ..

author img

By

Published : Sep 14, 2021, 3:18 PM IST

ದೇಗುಲ
ದೇಗುಲ ()

ರಾತ್ರೋರಾತ್ರಿ ದೇಗುಲ ಕೆಡವಿದ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪಕ್ಷಗಳ ನಾಯಕರು ನೀಡಿರುವ ಪ್ರತಿಕ್ರಿಯೆಗಳು ಹೀಗಿವೆ..

ಬೆಂಗಳೂರು : ಸುಪ್ರೀಂಕೋರ್ಟ್ ಆದೇಶ ‌ಪಾಲಿಸಬೇಕು. ಹಾಗಂತಾ, ದೇವಸ್ಥಾನ ಕೆಡುವೋದು ಸರಿಯಲ್ಲ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.

ದೇಗುಲ ಕೆಡುವೋದರ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್​ಡಿಕೆ ಪ್ರತಿಕ್ರಿಯೆ

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಂಜನಗೂಡಿಗೆ ನೂರಾರು ವರ್ಷಗಳ ಇತಿಹಾಸವಿದೆ. ಬೇರೆ ದೇವಸ್ಥಾನ ನಿರ್ಮಿಸಿ ಈ ದೇವಸ್ಥಾನವನ್ನು ತೆಗೆಯಬೇಕಿತ್ತು. ಬಿಜೆಪಿಯವರು ಮಾತೆತ್ತಿದ್ರೆ ಹಿಂದೂ ಪರ ಅಂತಾರೆ. ಬೇಕಾಗಿದ್ದೂ ಉಳಿಸಿಕೊಳ್ತಾರೆ, ಬೇಡವಾಗಿದ್ದು ಒಡಿತಾರೆ. ಇದೇನಾ ಹಿಂದೂ ಧರ್ಮದ ರಕ್ಷಣೆ ಎಂದು ಪ್ರಶ್ನಿಸಿದ್ರು.

ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ನಿರ್ಧಾರ ಕೈಗೊಳ್ಳಬೇಕಿತ್ತು. ರಾತ್ರೋರಾತ್ರಿ ದೇಗುಲ ಕೆಡವಿದ್ದು ಸರಿಯಿಲ್ಲ. ಬೇರೆ ವ್ಯವಸ್ಥೆ ಮಾಡಿ ದೇವಸ್ಥಾನ ತೆರವು ಮಾಡಬೇಕಿತ್ತು. ದೇವಾಲಯ ಯಾವುದೇ ಇರಲಿ ಅಭಿವೃದ್ಧಿ ಮಾಡುವುದು ಮುಖ್ಯ ಎಂದರು.

ಪ್ರತಾಪ್ ಸಿಂಹ ಹೋರಾಟ ಮಾಡುವ ವಿಚಾರ ಕುರಿತು ಮಾತನಾಡಿ, ಅವರು ಯಾವ ಹೋರಾಟ ಮಾಡ್ತಾರೆ ಗೊತ್ತಿಲ್ಲ. ಅದೇನು ರಾತ್ರೋರಾತ್ರಿ ಕಟ್ಟಿದ ದೇಗುಲವಲ್ಲ ಎಂದು ಹೇಳಿದರು.

2023ರಲ್ಲಿ ನಿರ್ಣಾಯಕ : ಕಲಬುರಗಿ ಪಾಲಿಕೆ ಹೊಂದಾಣಿಕೆ ವಿಚಾರ ಕುರಿತು ಮಾತನಾಡಿ, ದೇವೇಗೌಡರು ಖರ್ಗೆಯವರ ಜೊತೆ ಮಾತನಾಡಿದ್ದಾರೆ. ಜೆಡಿಎಸ್ ಮುಗಿಸೋಕೆ ಯಾರಿಗೂ ಆಗಲ್ಲ. ಜೆಡಿಎಸ್ ಹಡಗಲ್ಲ, ಸಬ್ ಮರಿನ್. ಯಾವಾಗ ಬೇಕಾದ್ರೂ‌ ಮೇಲಕ್ಕೇಳುತ್ತೆ. ಜೆಡಿಎಸ್ ಮುಳಗುವ ದೋಣಿ ಎನ್ನುತ್ತಿದ್ದರು. ಮುಳಗುವಾಗ ಹೇಗೆ ಮೇಲೆತ್ತುವುದು‌ ಗೊತ್ತಿದೆ.

ಸಮುದ್ರದ ಸಬ್‌ಮೆರಿನ್ ಮಷಿನ್ ನಮ್ಮ‌ ಬಳಿ ಇದೆ. ಯಾವಾಗ ಹಡಗು ಮೇಲೆತ್ತಬೇಕೆನ್ನುವುದು ನಮಗೆ ತಿಳಿದಿದೆ. ಯಾವಾಗ ಮೇಲೆತ್ತಬೇಕು, ಯಾವಾಗ ಮುಳುಗಿಸಬೇಕು ಅನ್ನೋದು ನಮಗೆ ಚೆನ್ನಾಗಿ ಗೊತ್ತಿದೆ. ಸಬ್‌ಮರಿನ್ ಯಂತ್ರ ರಿಪೇರಿ ಮಾಡಿದ್ದೇವೆ. ದೇವೇಗೌಡರು, ಕುಮಾರಸ್ವಾಮಿ ಅದನ್ನು ನೋಡಿಕೊಳ್ಳುತ್ತಾರೆ. 2023ಕ್ಕೆ‌ ಜೆಡಿಎಸ್ ಸಹಾಯವಿಲ್ಲದೆ ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.

‘ಪರಂಪರೆ, ಸಂಸ್ಕೃತಿ ಬಿಂಬಿಸುವುದು ಬಿಜೆಪಿ’ : ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಶಾಸಕ ರೇಣುಕಾಚಾರ್ಯ, ನಮ್ಮ ದೇಶದ ಪರಂಪರೆ, ಸಂಸ್ಕೃತಿಯನ್ನು ಬಿಂಬಿಸುವುದು ಬಿಜೆಪಿ ಪಕ್ಷ. ಧರ್ಮದ ತಳಹದಿ ಮೇಲೆ ಕೆಲಸ ಆಗುತ್ತಿವೆ. ಸುಪ್ರೀಂ ಆದೇಶದಂತೆ ದೇಗುಲ ಒಡೆದಿದ್ದೇವೆ ಅಷ್ಟೇ.. ಬಿಜೆಪಿ ಹಿಂದೂ ಧರ್ಮ ವಿರೋಧಿಯಲ್ಲ. ದೇಗುಲವನ್ನ ಒಡೆದಿದ್ದು ಸರಿಯಲ್ಲ. ಇದರ ಬಗ್ಗೆ ಸಿಎಂ ಕೂಡ ಹೇಳಿದ್ದಾರೆ ಎಂದರು.

‘ನಾವು ದೇಗುಲ ಕೆಡವಿದ್ರೆ, ಹಿಂದೂ ವಿರೋಧಿ’ : ಮಾಜಿ ಸಚಿವ ವೆಂಕಟ್ ರಾವ್ ನಾಡಗೌಡ ಮಾತನಾಡಿ, ಸುಪ್ರೀಂಕೋರ್ಟ್ ಆದೇಶವಿದೆ ಅಂತಾ ದೇವಾಲಯ ಒಡೆದಿದ್ದಾರೆ. ಬಿಜೆಪಿ ಸರ್ಕಾರವೇ ರಾಜ್ಯದಲ್ಲಿದೆ. ನಾವೇನಾದ್ರು ದೇವಸ್ಥಾನ ಕೆಡವಿದ್ರೆ ಹಿಂದೂ ವಿರೋಧಿ ಅಂತಿದ್ರು. ದೇವಸ್ಥಾನ ತೆಗೆಯುವ ಮುನ್ನ ಸ್ಥಳಾಂತರ ಮಾಡಬೇಕು.

ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯಬೇಕು. ಏಕಾಏಕಿ ಮಾಡುತ್ತಿರುವುದರಿಂದ ಗಲಭೆ ಸೃಷ್ಟಿಯಾಗಿವೆ. ಹಾಗಾಗಿ, ಬೇರೆ ವ್ಯವಸ್ಥೆ ‌ಮಾಡಿ ತೆರವು ಮಾಡಬೇಕಿತ್ತು. ಈ ರೀತಿಯಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು ಸರಿಯಲ್ಲ. ಸರ್ಕಾರವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.

‘ಇದ್ದಕ್ಕಿದ್ದಂತೆ ದೇಗುಲ ತೆರವುಗೊಳಿಸುವುದು ಸರಿಯಲ್ಲ’
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ, ನಂಜನಗೂಡು ದೇವಸ್ಥಾನಗಳನ್ನು ಇದ್ದಕ್ಕಿದ್ದಂತೆ ತೆರವುಗೊಳಿಸುವುದು ಸರಿಯಲ್ಲ. ದೇಗುಲಗಳನ್ನು ಒಡೆಯುವ ಮುನ್ನ ಸ್ಥಳೀಯರ ಅಭಿಪ್ರಾಯ ಪಡೆಯಬೇಕು. ಎಲ್ಲರ ಮನವೊಲಿಸಿ ಕ್ರಮ ಕೈಗೊಳ್ಳಬೇಕಿತ್ತು ಎಂದರು.

‘ದೇಗಲು ಒಡೆದಿರುವುದಕ್ಕೆ ಮೂಲ ಕಾರಣ ಬಿಜೆಪಿ’ : ದೇವಾಲಯಗಳನ್ನು ಒಡೆದಿದ್ದಾರೆ ಅಂದ್ರೆ ಅದಕ್ಕೆ ಮೂಲ ಕಾರಣ ಬಿಜೆಪಿ. ಹಿಂದುತ್ವದ ಹೆಸರಲ್ಲೇ ದೇಶವನ್ನು ಆವರಿಸಿಕೊಳ್ಳುವುದಕ್ಕೆ ಬಿಜೆಪಿ ಹೊರಟಿದೆ ಎ‌ಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದರು.

ನಂಜನಗೂಡಿನಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ಗಮನಿಸಿದ್ದೇನೆ. ಹಿಂದೂಪರ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹಿಂದೂಗಳ ರಕ್ಷಣೆ ಹಾಗೂ ಹಿಂದೂ ಧಾರ್ಮಿಕ ರಕ್ಷಣೆಯ ಪೇಟೆಂಟ್ ಅನ್ನು ಬಿಜೆಪಿ ತೆಗೆದುಕೊಂಡಿದೆ. ಜಿಲ್ಲಾಡಳಿತ ಕೂಡ ಸರ್ಕಾರದ ಅಧೀನದಲ್ಲೇ ಬರುವುದು.

ಸರ್ಕಾರಕ್ಕಿಂತ ಜಿಲ್ಲಾಡಳಿತ ದೊಡ್ಡದಲ್ಲ. ಒಂದು ವೇಳೆ ಜಿಲ್ಲಾಡಳಿತವೇ ಒಡೆಯುತ್ತಿದ್ದರೂ, ಅದು ಕೂಡ ಸರ್ಕಾರದ ಭಾಗವೇ ಆಗಿದೆ. ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡ್ತಿದೆ. ಆದ್ರೆ, ಹಿಂದೂ ಜಾಗರಣ ವೇದಿಕೆ ಕೂಡ ಬಿಜೆಪಿಯ ಅಂಗ ಸಂಸ್ಥೆ. ಬಿಜೆಪಿಯ ಅಂಗಸಂಸ್ಥೆಯಿಂದಲೇ ಪ್ರತಿಭಟನೆ ಮಾಡಿಸೋಕೆ ಹೊರಟಿದೆ. ಸರ್ಕಾರ ಮನಸ್ಸು ಮಾಡಿದ್ರೆ ಒಂದು ಕ್ಷಣದಲ್ಲಿ ಒಡೆಯೋದನ್ನ ನಿಲ್ಲಿಸಬಹುದಿತ್ತು ಎಂದರು.

ತೀರ್ಪುಗಳು ಏನೇ ಬರಲಿ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶವನ್ನು ರಾತ್ರೋರಾತ್ರಿ ಪಾಲಿಸಿದ್ದಾರಾ? ಹಲವಾರು ಘಟನೆಗಳಲ್ಲಿ ತೀರ್ಪುಗಳು ಬಂದಾಗಲೂ ಸರ್ಕಾರ ರಕ್ಷಣೆ ಕೊಟ್ಟಿದೆ. ಹಿಂದೂ ದೇವಾಲಯಗಳ ರಕ್ಷಣೆ ಮಾಡೋಕೆ ಸರ್ಕಾರಕ್ಕೆ ಅವಕಾಶವಿತ್ತು. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ, ದೇವಾಸ್ಥಾನ ಒಡೆಯೋಕೆ ಸರ್ಕಾರವೇ ಮೂಲ ಕಾರಣ. ಇದರ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.