ETV Bharat / state

ಚುನಾವಣಾ ರಣಕಣದಲ್ಲಿ ಹಲವರಿಗೆ ಹೀನಾಯ ಸೋಲು: ಠೇವಣಿ ಕಳೆದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳೆಷ್ಟು?

author img

By

Published : May 15, 2023, 6:51 PM IST

Updated : May 17, 2023, 12:04 PM IST

ಈ ಬಾರಿ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರ ಸ್ವಾರಸ್ಯಕರ ಅಂಕಿ- ಅಂಶ ಇಲ್ಲಿದೆ. ವಿಶೇಷ ಎಂದರೆ ಕನಕಪುರದಲ್ಲಿ ಸ್ಪರ್ಧಿಸಿದ್ದ ಮಾಜಿ ಸಚಿವ ಆರ್ ಅಶೋಕ್​ ಡಿ ಕೆ ಶಿವಕುಮಾರ್ ವಿರುದ್ಧ ಕೇವಲ 19 ಸಾವಿರ ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ.

ಚುನಾವಣಾ ರಣಕಣದಲ್ಲಿ ಹಲವರಿಗೆ ಹೀನಾಯ ಸೋಲು  ಠೇವಣಿ ಕಳೆದ ಜೆಡಿಎಸ್  ಚುನಾವಣೆ  ಬೆಂಗಳೂರು  ರಾಜ್ಯ ಚುನಾವಣೆ ಮುಕ್ತಾಯ  ಬಿಜೆಪಿ ಹಾಗೂ ಜೆಡಿಎಸ್ ಪಕ್ಷ  ಕಾಂಗ್ರೆಸ್ ಅಭೂತವೂರ್ವ ವಿಜಯ  ಭದ್ರತಾ ಠೇವಣಿ ಮೊತ್ತ  ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್  Statistics of those who lost their deposits  election deposit loss information  bengaluru  election officer  Candidate of Congress Party  karnataka CM  chief minster of karnataka  DK shivakumar
ಚುನಾವಣಾ ರಣಕಣದಲ್ಲಿ ಹಲವರಿಗೆ ಹೀನಾಯ ಸೋಲು: ಠೇವಣಿ ಕಳೆದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳೆಷ್ಟು?

ಬೆಂಗಳೂರು: ಜಿದ್ದಾಜಿದ್ದಿನ ರಾಜ್ಯ ಚುನಾವಣೆ ಮುಕ್ತಾಯವಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿರುವ ಕಾಂಗ್ರೆಸ್ ಅಭೂತಪೂರ್ವ ವಿಜಯದೊಂದಿಗೆ ರಾಜ್ಯದ ಗದ್ದುಗೆ ಹಿಡಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಘಟಾನುಘಟಿಗಳು ಸೇರಿ ಹಲವರು ಹೀನಾಯ ಸೋಲು ಕಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ 12 ಸಚಿವರು ಸೇರಿ ಘಟಾನುಘಟಿಗಳು ಮಂಡಿಯೂರಿದ್ದಾರೆ. ಇತ್ತ ಅದೆಷ್ಟೂ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ. ಹಲವು ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದಾರೆ . ಕನಕಪುರದಲ್ಲಿ ಆಗ ಸಚಿವರಾಗಿದ್ದ ಆರ್​ ಅಶೋಕ್​ ಸಹ ಬಿಜೆಪಿಯಿಂದ ಠೇವಣಿ ಕಳೆದುಕೊಂಡಿದ್ದಾರೆ.

ಠೇವಣಿ ಮುಟ್ಟುಗೋಲು ಎಂದರೇನು?: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ ಭದ್ರತಾ ಠೇವಣಿ ಮೊತ್ತವನ್ನು ನಾಮಪತ್ರ ಸಲ್ಲಿಕೆ ವೇಳೆ ಕ್ಷೇತ್ರದ ಚುನಾವಣಾಧಿಕಾರಿಗೆ ಪಾವತಿಸಬೇಕು. ಪ್ರತಿ ಅಭ್ಯರ್ಥಿ 10 ಸಾವಿರ ರೂ. ಭದ್ರತಾ ಠೇವಣಿ ಇಡಬೇಕು. ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳು 5,000 ರೂ. ಠೇವಣಿ ಪಾವತಿಸಬೇಕು. ಅಭ್ಯರ್ಥಿ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಅರ್ಹ ಮತಗಳ 1/6 ಗಿಂತ ಹೆಚ್ಚಿಗೆ ಮತ ಗಳಿಸಬೇಕು.

ಅಷ್ಟು ಮತಗಳಿಸಿದರೆ ಚುನಾವಣಾಧಿಕಾರಿಗೆ ಪಾವತಿಸಿದ ಠೇವಣಿ ಹಣ ಅಭ್ಯರ್ಥಿಗೆ ಮರಳಿಸಲಾಗುತ್ತದೆ.‌ ಒಂದು ವೇಳೆ ಅಭ್ಯರ್ಥಿ 1/6 ಗಿಂತ ಕಡಿಮೆ ಮತಗಳಿಸಿದರೆ ಆತನ ಠೇವಣಿಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕುತ್ತದೆ. ಅಂದರೆ ಠೇವಣಿ ಮೊತ್ತವನ್ನು ಅಭ್ಯರ್ಥಿಗಳಿಗೆ ಮರುಪಾವತಿಸುವುದಿಲ್ಲ. ಅಭ್ಯರ್ಥಿಯೊಬ್ಬನ ಚುನಾವಣಾ ಠೇವಣಿ ಮುಟ್ಟುಗೋಲಾದರೆ ಆತನನ್ನು ಕ್ಷೇತ್ರದ ಜನರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅರ್ಥ.

ಚುನಾವಣಾ ರಣಕಣದಲ್ಲಿ ಹಲವರಿಗೆ ಹೀನಾಯ ಸೋಲು  ಠೇವಣಿ ಕಳೆದ ಜೆಡಿಎಸ್  ಚುನಾವಣೆ  ಬೆಂಗಳೂರು  ರಾಜ್ಯ ಚುನಾವಣೆ ಮುಕ್ತಾಯ  ಬಿಜೆಪಿ ಹಾಗೂ ಜೆಡಿಎಸ್ ಪಕ್ಷ  ಕಾಂಗ್ರೆಸ್ ಅಭೂತವೂರ್ವ ವಿಜಯ  ಭದ್ರತಾ ಠೇವಣಿ ಮೊತ್ತ  ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್  Statistics of those who lost their deposits  election deposit loss information  bengaluru  election officer  Candidate of Congress Party  karnataka CM  chief minster of karnataka  DK shivakumar
ಠೇವಣಿ ಕಳೆದುಕೊಂಡ ವಿವರ ಹೀಗಿದೆ..

ಈ ಬಾರಿ ಮುಟ್ಟುಗೋಲಾದ ಠೇವಣಿ ಎಷ್ಟು?: ಈ ಬಾರಿ ಚುನಾವಣೆ ಹಲವು ಅಚ್ಚರಿ, ಆಘಾತಗಳನ್ನು ನೀಡಿದೆ.‌ ಚುನಾವಣಾ ಅಖಾಡದಲ್ಲಿ ಈ ಬಾರಿ ಸುಮಾರು 2,613 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು. ಆ ಪೈಕಿ ಬಿಜೆಪಿ 224 ಅಭ್ಯರ್ಥಿಗಳನ್ನು, ಕಾಂಗ್ರೆಸ್ 223 ಹಾಗೂ ಜೆಡಿಎಸ್ 207 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. 918 ಪಕ್ಷೇತರರು ಹಾಗೂ ನೋಂದಾಯಿತ ಪಕ್ಷಗಳಿಂದ 685 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಸುಮಾರು 2,389 ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದರಲ್ಲಿ ಸುಮಾರು 2,120 ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ.

ಜೆಡಿಎಸ್​​ನಲ್ಲಿ ಒಟ್ಟು 207 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಅದರಲ್ಲಿ 19 ಮಂದಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಗಿದೆ. ಇನ್ನು 136 ಜೆಡಿಎಸ್ ಅಭ್ಯರ್ಥಿಗಳು ಹೀನಾಯ ಸೋಲು ಕಂಡು ಠೇವಣಿ ಕಳೆದುಕೊಂಡಿದ್ದಾರೆ. ಕಡೂರಿನಲ್ಲಿ ಸ್ಪರ್ಧಿಸಿದ್ದ ವೈ.ಎಸ್.ವಿ.ದತ್ತಾ ಕೇವಲ 26,837 ಮತ ಗಳಿಸಿ ತಮ್ಮ ಠೇವಣಿ ಕಳೆದುಕೊಂಡಿದ್ದಾರೆ. ಇತ್ತ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೀನಾಯ ಸೋಲು ಕಂಡು ಠೇವಣಿ ಕಳೆದುಕೊಂಡಿದ್ದಾರೆ.

ಠೇವಣಿ ಕಳೆದುಕೊಂಡ ಆರ್​​.ಅಶೋಕ್​​: ಬಿಜೆಪಿ 224 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ 66 ಅಭ್ಯರ್ಥಿಗಳು ಗೆಲುವು ಕಂಡರೆ ಉಳಿದವರು ಸೋಲಿನ ರುಚಿ ಕಂಡರು. ಈ ಪೈಕಿ 31 ಅಭ್ಯರ್ಥಿಗಳು ತಮ್ಮ ಠೇವಣಿಯನ್ನೇ ಕಳೆದು ಕೊಂಡಿದ್ದಾರೆ. ಈ ಪೈಕಿ ಕನಕಪುರದಲ್ಲಿ ಡಿಕೆಶಿ ವಿರುದ್ಧ ಸ್ಪರ್ಧಿಸಿದ್ದ ಆರ್.ಅಶೋಕ್ ತಮ್ಮ ಠೇವಣಿ ಕಳಕೊಂಡು ಹೀನಾಯ ಸೋಲು ಕಂಡಿದ್ದಾರೆ. ಆರ್.ಅಶೋಕ್ ಕನಕಪುರದಲ್ಲಿ ಕೇವಲ 19,753 ಮತ ಗಲಿಸಲು ಸಾಧ್ಯವಾಗಿದೆ.

ಇನ್ನು 135 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಲ್ಲೂ ಸುಮಾರು 12 ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದಾರೆ. ಕರುನಾಡಾದ್ಯಂತ ಕಾಂಗ್ರೆಸ್ ಸುನಾಮಿ ಮಧ್ಯೆಯೂ 12 ಕೈ ಅಭ್ಯರ್ಥಿಗಳಿಗೆ ತಮ್ಮ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

2018ರಲ್ಲಿ ಠೇವಣಿ ಮುಟ್ಟುಗೋಲು ಏನು?: 2018ರ ಚುನಾವಣೆಯಲ್ಲಿ 224 ಕ್ಷೇತ್ರಗಳಲ್ಲಿ ಒಟ್ಟು 2,892 ಅಭ್ಯರ್ಥಿಗಳು ಸ್ಪರ್ಧೆ ಎದುರಿಸಿದ್ದರು. ಈ ಪೈಕಿ ಒಟ್ಟು 1,146 ಅಭ್ಯರ್ಥಿಗಳ ಠೇವಣಿ ಜಪ್ತಿಯಾಗಿದೆ. 1,146 ಅಭ್ಯರ್ಥಿಗಳು ಠೇವಣಿ ಕಳೆದು ಹೀನಾಯ ಸೋಲು ಕಂಡಿದ್ದರು. 2018ರಲ್ಲಿ ಬಿಜೆಪಿ ಪಕ್ಷ ತನ್ನ 224 ಅಭ್ಯರ್ಥಿಗಳ ಪೈಕಿ 104 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ, 39 ಬಿಜೆಪಿ ಅಭ್ಯರ್ಥಿಗಳು ತಮ್ಮ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಾಣಬೇಕಾಯಿತು.

ಇತ್ತ ಕಾಂಗ್ರೆಸ್ ಪಕ್ಷ ಸ್ಪರ್ಧಿಸಿದ್ದ ತನ್ನ 223 ಅಭ್ಯರ್ಥಿಗಳ ಪೈಕಿ 80 ಕೈ ಅಭ್ಯರ್ಥಿಗಳು ಗೆದ್ದಿದ್ದರು. 13 ಕೈ ಅಭ್ಯರ್ಥಿಗಳ ಠೇವಣಿ ಮುಟ್ಟುಗೋಲಾಗಿದೆ. 202 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ 37 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಆದರೆ ಒಟ್ಟು 107 ತೆನೆ ಅಭ್ಯರ್ಥಿಗಳ ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡಿದ್ದರು. ಇನ್ನು ಒಟ್ಟು 1,153 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಈ ಪೈಕಿ 1,138 ಪಕ್ಷೇತರರು ಠೇವಣಿ ಕಳಕೊಂಡಿದ್ದರು.

ಇದನ್ನೂ ಓದಿ: ಹೈಕಮಾಂಡ್​ ಮುಂದೆ ಸಿಎಂ ಸ್ಥಾನದ ಆಯ್ಕೆ ಸವಾಲು: ಸಿದ್ದು- ಡಿಕೆ ಪ್ರಸ್ತಾಪಗಳೇನು?

Last Updated : May 17, 2023, 12:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.