ETV Bharat / state

ಕೇಂದ್ರ ಸರ್ಕಾರವನ್ನ ಟ್ವೀಟ್​​ ಮೂಲಕ ಲೇವಡಿ ಮಾಡಿದ ರಾಜ್ಯ ಕಾಂಗ್ರೆಸ್

author img

By

Published : May 24, 2020, 9:14 AM IST

ಬಿಜೆಪಿಗರೇ, ಹೊಣೆಗಾರಿಕೆಯನ್ನು ಪ್ರದರ್ಶಿಸಿ ಜನತೆಗಾಗಿ ಕೆಲಸ ಮಾಡಿ. ಏಸಿ ರೂಮು​​ಗಳಲ್ಲಿ ಕುಳಿತು ಅಧಿಕಾರದ ಮದವೇರಿಸಿಕೊಂಡು ಸದಾ ಪ್ರಚಾರ ಪ್ರವಾಸ ಚುನಾವಣೆಗಳಲ್ಲಿ ಮಗ್ನರಾಗಿರುವ ರಾಷ್ಟ್ರೀಯ ಬಿಜೆಪಿ ನಾಯಕರೇ ಬವಣೆಯಲ್ಲಿ ಬಳಲಿರುವ ಬಡವರ ರೈತರ ಕಾರ್ಮಿಕರ ಸಂಕಷ್ಟಕ್ಕೆ ರಸ್ತೆಗಿಳಿದು ಸ್ಪಂದಿಸಿರಿ. ಲಾಕ್ ಡೌನ್, ಪೂರ್ವ ಯೋಜನೆಗಳನ್ನು ರೂಪಿಸದೆ ಮಾಡಿದ ಧೃತರಾಷ್ಟ್ರ ನಿರ್ಧಾರ ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್​ ಟೀಕಿಸಿದೆ.

State Congress, which teased the central government with a tweet
ಟ್ವೀಟ್​​ ಮೂಲಕ ಲೇವಡಿ ಮಾಡಿದ ರಾಜ್ಯ ಕಾಂಗ್ರೆಸ್

ಬೆಂಗಳೂರು: ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯ ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ.

ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಆಡಳಿತವನ್ನು ಅವಹೇಳನ ಮಾಡಿರುವ ಕಾಂಗ್ರೆಸ್ ಪಕ್ಷ, ದೃಷ್ಟಿಹೀನ ಸರ್ಕಾರದ ಆಡಳಿತವಿದ್ದರೂ ಇಂದು ದೇಶವನ್ನು ರಕ್ಷಿಸುತ್ತಿರುವುದು ಕಾಂಗ್ರೆಸ್ ಸರ್ಕಾರಗಳು ಕೊಟ್ಟ ಆಹಾರ ಭದ್ರತಾ ಕಾಯ್ದೆ, ಆರೋಗ್ಯ ಯೋಜನೆಗಳು ಮತ್ತು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳೇ ಹೊರತು, ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಪ್ರಹಸನವಲ್ಲ ಎಂದಿದೆ.

State Congress, which teased the central government with a tweet
ಟ್ವೀಟ್​​ ಮೂಲಕ ಲೇವಡಿ ಮಾಡಿದ ರಾಜ್ಯ ಕಾಂಗ್ರೆಸ್

ಬಿಜೆಪಿಗರೇ, ಹೊಣೆಗಾರಿಕೆಯನ್ನು ಪ್ರದರ್ಶಿಸಿ ಜನತೆಗಾಗಿ ಕೆಲಸ ಮಾಡಿ ಏಸಿ ರೂಮು​​ಗಳಲ್ಲಿ ಕುಳಿತು ಅಧಿಕಾರದ ಮದವೇರಿಸಿಕೊಂಡು ಸದಾ ಪ್ರಚಾರ ಪ್ರವಾಸ ಚುನಾವಣೆಗಳಲ್ಲಿ ಮಗ್ನರಾಗಿರುವ ರಾಷ್ಟ್ರೀಯ ಬಿಜೆಪಿ ನಾಯಕರೇ ಬವಣೆಯಲ್ಲಿ ಬಳಲಿರುವ ಬಡವರ ರೈತರ ಕಾರ್ಮಿಕರ ಸಂಕಷ್ಟಕ್ಕೆ ರಸ್ತೆಗಿಳಿದು ಸ್ಪಂದಿಸಿರಿ. ಲಾಕ್​ಡೌನ್, ಪೂರ್ವ ಯೋಜನೆಗಳನ್ನು ರೂಪಿಸದೆ ಮಾಡಿದ ಧೃತರಾಷ್ಟ್ರ ನಿರ್ಧಾರವೆಂದು ಕಾಲೆಳೆದಿದೆ.

State Congress, which teased the central government with a tweet
ಟ್ವೀಟ್​​ ಮೂಲಕ ಲೇವಡಿ ಮಾಡಿದ ರಾಜ್ಯ ಕಾಂಗ್ರೆಸ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.