ETV Bharat / state

ರಾಜ್ಯ ವಿಧಾನಸಭೆಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಯ್ಕೆಗೆ ಬಿಜೆಪಿಗರ ಅಪಸ್ವರ!?

author img

By

Published : May 25, 2022, 6:15 PM IST

Updated : May 25, 2022, 8:44 PM IST

ರಾಜ್ಯದಲ್ಲಿ ವಿಧಾನಸಭೆಗೆ ಒಂದು ವರ್ಷದಲ್ಲಿ ಚುನಾವಣೆ ಇರುವುದರಿಂದ ಚುನಾವಣೆಯಲ್ಲಿ ಸಹಾಯಕವಾಗುವಂತಹ ಅಭ್ಯರ್ಥಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸುವುದು ಹೆಚ್ಚು ಸೂಕ್ತವೆನ್ನುವ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

state-bjp-opposes-to-nirmala-sitharaman-nomination-for-council
ರಾಜ್ಯ ವಿಧಾನಸಭೆಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಆಯ್ಕೆಗೆ ಬಿಜೆಪಿಗರ ಅಪಸ್ವರ..?

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪುನರಾಯ್ಕೆ ಮಾಡಲು ರಾಜ್ಯ ಬಿಜೆಪಿಯಲ್ಲಿ ಅಪಸ್ವರ ಕೇಳಿ ಬಂದಿದೆ. ತಮಿಳುನಾಡು ಮೂಲದವರಾದ ನಿರ್ಮಲಾ ಸೀತಾರಾಮನ್ ಅವರನ್ನು ರಾಜ್ಯ ವಿಧಾನಸಭೆಯಿಂದ ಸಂಸತ್ತಿಗೆ ಆಯ್ಕೆ ಮಾಡುವುದರಿಂದ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಗೆ ಯಾವ ಪ್ರಯೋಜನವೂ ಆಗದು ಎನ್ನುವ ವಾದವನ್ನು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ಇಟ್ಟಿದ್ದಾರೆನ್ನಲಾಗಿದೆ.

ರಾಜ್ಯದಲ್ಲಿ ವಿಧಾನಸಭೆಗೆ ಒಂದು ವರ್ಷದಲ್ಲಿ ಚುನಾವಣೆ ಇರುವುದರಿಂದ ಚುನಾವಣೆಯಲ್ಲಿ ಸಹಾಯಕವಾಗುವಂತಹ ಅಭ್ಯರ್ಥಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸುವುದು ಹೆಚ್ಚು ಸೂಕ್ತವೆನ್ನುವ ಅಭಿಪ್ರಾಯವನ್ನು ಹೈಕಮಾಂಡ್ ಮುಂದೆ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದ ಬದಲಿಗೆ ಈಗಾಗಲೇ ಚುನಾವಣೆ ಮುಗಿದಿರುವ ಉತ್ತರಪ್ರದೇಶ ಅಥವಾ ಬೇರೆ ರಾಜ್ಯಗಳ ವಿಧಾನಸಭೆಯಿಂದ ಆಯ್ಕೆ ಮಾಡುವ ಸಲಹೆಯನ್ನೂ ಸಹ ರಾಜ್ಯಕ್ಕೆ ಸೇರಿದ ಕೆಲವು ಬಿಜೆಪಿ ಮುಖಂಡರು ಕೇಂದ್ರದ ಬಿಜೆಪಿ ವರಿಷ್ಠರಿಗೆ ಸಲಹೆ ನೀಡಿದ್ದಾರೆಂದು ಹೇಳಲಾಗಿದೆ.

ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸಹಾಯಕವಾಗುವಂತೆ ಅಭ್ಯರ್ಥಿಯನ್ನು ಆಯ್ಕೆಮಾಡಿದರೆ ಉತ್ತಮವೆನ್ನುವ ಅಭಿಪ್ರಾಯವನ್ನು ಬಿಜೆಪಿ ನಾಯಕರು ನೀಡಿದ್ದಾರೆನ್ನಲಾಗಿದೆ. ನಿರ್ದಿಷ್ಟ ಸಮುದಾಯದವರಿಗೆ ಪ್ರಾತಿನಿಧ್ಯ ನೀಡಿದರೆ ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಮತಪಡೆಯಲು ಅನುಕೂಲವಾಗುತ್ತದೆ ಎನ್ನುವ ಅಂಶವನ್ನೂ ರಾಜ್ಯ ಬಿಜೆಪಿ ಮುಖಂಡರು ಪ್ರಸ್ಥಾಪಿಸಿದ್ದಾರೆಂದು ತಿಳಿದು ಬಂದಿದೆ.

ಪಕ್ಷದ ಹೈಕಮಾಂಡ್ ಶಿಫಾರಸ್ಸಿನಂತೆ ಈಗಾಗಲೇ ಒಮ್ಮೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದಿಂದ ಆಯ್ಕೆ ಮಾಡಲಾಗಿದೆ. ಮತ್ತೆ ಅವರನ್ನು ರಾಜ್ಯ ವಿಧಾನಸಭೆಯಿಂದ ಪುನರಾಯ್ಕೆ ಮಾಡುವುದು ಬೇಡ. ಈ ಬಾರಿ ಬೇರೆ ರಾಜ್ಯದಿಂದ ಆಯ್ಕೆ ಮಾಡುವಂತೆ ರಾಜ್ಯ ಬಿಜೆಪಿ ವಿನಂತಿಸಿದೆ. ಆದರೆ, ಹೈಕಮಾಂಡ್ ತೆಗೆದುಕೊಳ್ಳುವ ಅಂತಿಮ ನಿರ್ಧಾರಕ್ಕೆ ಬದ್ಧವೆನ್ನುವ ಸ್ಪಷ್ಟತೆಯನ್ನು ರಾಜ್ಯ ಬಿಜೆಪಿ ನೀಡಿದೆ ಎಂದು ಹೇಳಲಾಗಿದೆ.

ಕೋರ್ ಕಮಿಟಿ ಶಿಫಾರಸು : ರಾಜ್ಯಸಭೆಗೆ ಬಿಜೆಪಿಯು ತನ್ನ ಶಾಸಕರ ಸಂಖ್ಯಾಬಲಕ್ಕನುಗುಣವಾಗಿ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಆಯ್ಕೆ ಮಾಡಬಹುದಾಗಿದೆ. ಮೂರನೇ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಬೆಂಬಲ ನೀಡಿದರೆ ಮಾತ್ರ ಗೆಲ್ಲಲು ಸಾಧ್ಯವಿದೆ. ಕೋರ್ ಕಮಿಟಿಯು ಈಗಾಗಲೇ ಮೊದಲ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರ ಹೆಸರನ್ನು ಶಿಫಾರಸು ಮಾಡಿದೆ. ಎರಡನೇ ಸ್ಥಾನಕ್ಕೆ ನಿರ್ಮಲ ಕುಮಾರ ಸುರಾನ , ಕೆ.ಸಿ ರಾಮಮೂರ್ತಿ, ಪ್ರಕಾಶ ಶೆಟ್ಟಿ , ಲೆಹರ್ ಸಿಂಗ್ ಸೇರಿದಂತೆ ಹಲವರ ಹೆಸರನ್ನು ಶಿಫಾರಸು ಮಾಡಿದೆ.

ವೆಂಕಯ್ಯ ನಾಯ್ಡುಗೂ ವಿರೋಧಿಸಿದ್ದ ಬಿಜೆಪಿ : ಈ ಹಿಂದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನೂ ರಾಜ್ಯ ಬಿಜೆಪಿಯು ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ವಿರೋಧ ವ್ಯಕ್ತಪಡಿಸಿತ್ತು. ಒಂದೆರಡು ಬಾರಿ ರಾಜ್ಯಸಭೆಗೆ ಆಯ್ಕೆ ಮಾಡಿದ್ದ ಬಿಜೆಪಿ ಮುಖಂಡರು ಪುನರಾಯ್ಕೆ ಮಾಡುವಾಗ ಅಪಸ್ವರ ಎತ್ತಿದ್ದರು. ನಂತರ ಅವರನ್ನು ಬೇರೆ ರಾಜ್ಯದಿಂದ ರಾಜ್ಯಸಭೆಗೆ ಹೈಕಮಾಂಡ್ ಆಯ್ಕೆ ಮಾಡಿತ್ತು. ನಂತರ ವೆಂಕಯ್ಯ ನಾಯ್ಡು ಅವರ ಉಪರಾಷ್ಟ್ರಪತಿಗಳಾಗಿ ನೇಮಕ ಗೊಂಡಾಗ ಕೆಲವು ನಾಯಕರು ಪಶ್ಚಾತಾಪವನ್ನು ವ್ಯಕ್ತಪಡಿಸಿದ್ದರು.

ಓದಿ : ಶಿವಮೊಗ್ಗ ಕನ್ಸ್ಯೂಮರ್ ಕೋರ್ಟ್ ಜಡ್ಜ್​​​​ಗೆ ಅನಾರೋಗ್ಯ: ಸಿದ್ಧಗಂಗಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ

Last Updated : May 25, 2022, 8:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.