ETV Bharat / state

ನಾವು ಸರ್ಕಾರಕ್ಕೆ ನಾಳೆವರೆಗೂ ಅವಕಾಶ ಕೊಡ್ತೇವೆ: ಜಯಮೃತ್ಯುಂಜಯ ಸ್ವಾಮೀಜಿ

author img

By

Published : Nov 27, 2020, 1:35 PM IST

Updated : Nov 27, 2020, 3:44 PM IST

ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ
ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ

13:25 November 27

ನಿಮ್ಮ ಅಧಿಕಾರ ಬಳಸಿ ವೀರಶೈವ ಲಿಂಗಾಯತರನ್ನು 2 A, ಕೇಂದ್ರದ OBC ಪಟ್ಟಿಗೆ ಸೇರಿಸಲು ಆಗ್ರಹಿಸಿದ್ದೆವು. ಒಂದು ವೇಳೆ, ಇದು ಆಗಲಿಲ್ಲ ಅಂದರೆ ಡಿ. 23 ರಿಂದ ಕೂಡಲ ಸಂಗಮದಿಂದ ಬೃಹತ್ ಪಾದಯಾತ್ರೆ ಮಾಡುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿಗಳು ವೀರಶೈವ - ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸುವ ತೀರ್ಮಾನ ಮಾಡಿದ್ದಾರೆ. ಆದ್ರೆ ಈ ವಿಷಯ ಸಚಿವ ಸಂಪುಟದ ಚರ್ಚೆ ವೇಳೆ ಪ್ರಸ್ತಾಪ ಆಗಿಲ್ಲ. ಇದರಿಂದ ನಮಗೇನೂ ಬೇಸರವಾಗಿಲ್ಲ, ನಮಗೆ ಇನ್ನೂ ಆಶಾಭಾವನೆ ಇದೆ. ನಾವು ಸರ್ಕಾರಕ್ಕೆ ನಾಳೆವರೆಗೂ ಅವಕಾಶ ಕೊಡುತ್ತೇವೆ ಎಂದು ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಒಂದು ವೇಳೆ ಇದು ಆಗಲಿಲ್ಲ ಅಂದರೆ ಡಿ. 23 ರಿಂದ ಕೂಡಲ ಸಂಗಮದಿಂದ ಬೃಹತ್ ಪಾದಯಾತ್ರೆ ಮಾಡುತ್ತೇವೆ. ಕೆಲ ಕಾನೂನು ತೊಡಕುಗಳು ಇರುವ ಬಗ್ಗೆ ಮಾತನಾಡಿದ್ದಾರೆ, ಅದನ್ನ ನಿವಾರಿಸಿಕೊಳ್ಳಲಿ ಎಂದರು.

ನೇಕಾರ ಅಭಿವೃದ್ಧಿ ನಿಗಮ ಸ್ಥಾಪಸಿ, ಅನುದಾನ ಮೀಸಲಿಡಿ: ನೇಕಾರ ಸ್ವಾಮೀಜಿ, ಮುಖಂಡರ ಒತ್ತಾಯ

ರಾಜಕೀಯ ಕಾರಣಕ್ಕಾಗಿ ಮೀಸಲಾತಿಗೆ ತಡೆಯೊಡ್ಡುವ ಕೆಲಸ ಮಾಡಬಾರದು. ಕೇಂದ್ರ ಸರ್ಕಾರ ಲಿಂಗಾಯತರ ಋಣ ಸಂದಾಯ ಮಾಡಲು ಇದೊಂದು ಒಳ್ಳೆ ಅವಕಾಶವಾಗಿದೆ ಎಂದು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

Last Updated : Nov 27, 2020, 3:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.