ETV Bharat / state

ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ: ಉದ್ಯಮಿ, ಪ್ರಭಾವಿ ರಾಜಕಾರಣಿಗಳ ಪುತ್ರರು ಭಾಗಿ ಆರೋಪ

author img

By

Published : Sep 16, 2022, 8:45 PM IST

ಬೆಂಗಳೂರು ಹೊರವಲಯದ ರೆಸಾರ್ಟ್​​ನಲ್ಲಿ ರೇವ್ ಪಾರ್ಟಿ. ಪ್ರಭಾವಿ ಮಕ್ಕಳು ಭಾಗಿಯಾಗಿರುವ ಆರೋಪ.

ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ Bengaluru rave party
ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ

ದೇವನಹಳ್ಳಿ: ಪೊಲೀಸರು ದಾಳಿ ಮಾಡಿದ್ದ ಬೆಂಗಳೂರು ಹೊರವಲಯದ ಸಾದಹಳ್ಳಿಯ ಜೆಡಿ ಗಾರ್ಡನ್ ರೆಸಾರ್ಟ್​​ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿಯಲ್ಲಿ ಬಳ್ಳಾರಿ ಗಣಿ ಉದ್ಯಮಿ ಪುತ್ರ ಮತ್ತು ಪ್ರಭಾವಿ ರಾಜಕಾರಣಿಗಳ ಪುತ್ರರು ಭಾಗಿಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬೆಂಗಳೂರು ಹೊರವಲಯದಲ್ಲಿ ರೇವ್ ಪಾರ್ಟಿ: ಸೆಪ್ಟೆಂಬರ್ 6 ರಂದು ಜೆಡಿ ಗಾರ್ಡನ್ ರೆಸಾರ್ಟ್​​ನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿರುವ ಮಾಹಿತಿ ಮೇಲೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ದಾಳಿ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲಾಗಿತ್ತು. ಬಳಿಕ ಪ್ರಕರಣವನ್ನ ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಪ್ರಭಾವಿಗಳನ್ನ ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿ ಗಾರ್ಡನ್ ರೆಸಾರ್ಟ್ ಮಾಲೀಕ ಶ್ರೀನಿವಾಸ್ ಸೇರಿ 9 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ. ಆದರೆ ಪ್ರಭಾವಿ ಪುತ್ರರ ಹೆಸರು ನಾಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.

(ಇದನ್ನೂ ಓದಿ: 500 ಯುವಕರಿದ್ದ ರೇವ್​ ಪಾರ್ಟಿಯಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್​ ವಶ.. ಮಕ್ಕಳಿಗೆ ಬುದ್ಧಿ ಹೇಳಿದ ಪೊಲೀಸ್​ ಕಮಿಷನರ್​)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.