ETV Bharat / state

ಓದಿನಲ್ಲಿ ಆಸಕ್ತಿಯಿಲ್ಲ, ಕ್ರೀಡೆಯಲ್ಲಿ ಸಾಧಿಸಿ ಮನೆಗೆ ಬರ್ತೀವಿ.. ಪತ್ರ ಬರೆದಿಟ್ಟು 7 ಮಕ್ಕಳು ನಾಪತ್ತೆ..

author img

By

Published : Oct 10, 2021, 7:37 PM IST

ಮೂವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಸೋಲದೇವನಹಳ್ಳಿಯ ಎಜಿಬಿ ಲೇಔಟ್‌ನಲ್ಲಿರುವ ಕ್ರಿಸ್ಟಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಓರ್ವ ಯುವತಿ ಹಾಗೂ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ರಾಯನ್ ಸಿದ್ಧಾಂತ (12), ಅಮೃತವರ್ಷಿಣಿ (21) ಭೂಮಿ (12) ಹಾಗೂ ಚಿಂತನ್ (12) ನಾಪತ್ತೆಯಾದ ಮಕ್ಕಳು..

ಬೆಂಗಳೂರಿನಲ್ಲಿ ಪತ್ರ ಬರೆದು 7 ಮಕ್ಕಳು ನಾಪತ್ತೆ
ಬೆಂಗಳೂರಿನಲ್ಲಿ ಪತ್ರ ಬರೆದು 7 ಮಕ್ಕಳು ನಾಪತ್ತೆ

ಬೆಂಗಳೂರು : ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು‌ ಪತ್ರ ಬರೆದು ಯುವತಿ ಸೇರಿ‌ ಏಳು ಮಕ್ಕಳು ಮನೆ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆ ಪೋಷಕರು ನೀಡಿದ ದೂರಿನ ಮೇರೆಗೆ ಬಾಗಲಗುಂಟೆ‌ ಹಾಗೂ‌‌ ಸೋಲದೇವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ‌‌ ದಾಖಲಾಗಿವೆ.

ನಿನ್ನೆ ಬೆಳಗ್ಗೆ ವಾಕಿಂಗ್‌ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಮಕ್ಳಳು ಮನೆಗೆ ಬರದೇ ನಾಪತ್ತೆಯಾಗಿದ್ದಾರೆ ಎಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ‌.15 ವರ್ಷದ ಕಿರಣ್, ಪರಿಕ್ಷೀತ್ ಹಾಗೂ ನಂದನ್ ಎಂಬುವರು ಕಾಣೆಯಾಗಿರುವ ಮಕ್ಕಳಾಗಿದ್ದಾರೆ.

ಶೇಷಾದ್ರಿ ಲೇಔಟ್‌ನಲ್ಲಿರುವ ನಿವಾಸಿಯಾಗಿರುವ‌ ಮಕ್ಕಳು ಸೌಂದರ್ಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಬೆಳಗ್ಗೆ ವಾಕಿಂಗ್‌ಗೆ ತೆರಳಿದ್ದಾಗ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.

ಪೋಷಕರು ಶಾಲೆಗೆ ಹೋಗಿ ವಿಚಾರಿಸಿದಾಗ ಅಲ್ಲೂ ಕೂಡ ಹೋಗಿರಲಿಲ್ಲ. ಮನೆ ಬಿಡುವುದಕ್ಕೂ ಮುನ್ನ ಪತ್ರ ಬರೆದಿರುವ ಮಕ್ಕಳು, ತಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲಿ ಆಸಕ್ತಿ ಇದೆ, ಕ್ರೀಡೆಯಲ್ಲೇ ಸಾಧನೆ ಮಾಡಿ ವಾಪಸ್ ಬರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೂವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಸೋಲದೇವನಹಳ್ಳಿಯ ಎಜಿಬಿ ಲೇಔಟ್‌ನಲ್ಲಿರುವ ಕ್ರಿಸ್ಟಲ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಓರ್ವ ಯುವತಿ ಹಾಗೂ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ರಾಯನ್ ಸಿದ್ಧಾಂತ (12), ಅಮೃತವರ್ಷಿಣಿ (21) ಭೂಮಿ (12) ಹಾಗೂ ಚಿಂತನ್ (12) ನಾಪತ್ತೆಯಾದ ಮಕ್ಕಳು.

ಎಲ್ಲರೂ ಒಂದೇ ರೀತಿ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಸ್ಫೋಟ್ಸ್ ಐಟಂ ಜೊತೆಗೆ ಸ್ಲಿಪರ್, ಬ್ರಶ್, ಟೂತ್‌ಪೆಸ್ಟ್, ವಾಟರ್ ಬಾಟಲ್ ಜತೆಗೆ ಹಣವನ್ನೂ ತೆಗೆದುಕೊಂಡು ಹೋಗಿದ್ದಾರೆ. ನಾಪತ್ತೆಯಾದ ಮಕ್ಕಳ ಪೋಷಕರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.