ETV Bharat / state

ನೆರೆ ಹಾನಿಗೆ ಪರಿಹಾರ ಹಣ ಹೊಂದಿಸುವುದು ಕಷ್ಟ: ಡಿಸಿಎಂ ಗೋವಿಂದ ಕಾರಜೋಳ

author img

By

Published : Oct 15, 2019, 5:46 PM IST

ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಬೆಂಗಳೂರು-ಮೈಸೂರು ನಡುವಣ ದಶಪಥ ರಸ್ತೆಯ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು: ರಾಜ್ಯದಲ್ಲಾಗಿರುವ ನೆರೆ ಹಾನಿಗೆ ಪರಿಹಾರ ಹಣ ಹೊಂದಿಸುವುದು ಕಷ್ಟಕರವಾದ ಕೆಲಸ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ, ಅತಿವೃಷ್ಟಿಯಿಂದ ರಾಜ್ಯದಲ್ಲಿ 4,200 ಕಿಮೀಗಳಷ್ಟು ರಸ್ತೆಗೆ ಹಾನಿಯಾಗಿದ್ದು, ಸೇತುವೆ, ಕಟ್ಟಡಗಳು ಸೇರಿದಂತೆ ಪರಿಹಾರ ಕಾರ್ಯಕ್ಕಾಗಿ ಒಟ್ಟು 7,600 ಕೋಟಿ ರೂ. ಅಗತ್ಯವಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ರಸ್ತೆ, ಸೇತುವೆ, ಕಟ್ಟಡ ದುರಸ್ತಿ ಕಾರ್ಯಕ್ಕೆ ನಾವು 500 ಕೋಟಿ ರೂ. ಒದಗಿಸಿದ್ದು, ಉಳಿದ ಹಣ ಹೊಂದಿಸುವ ಮಾರ್ಗವನ್ನು ನೋಡುತ್ತಿದ್ದೇವೆ. ಇಷ್ಟಾದರೂ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಕಟ್ಟಡಗಳ ದುರಸ್ತಿ ಕಾರ್ಯಕ್ಕೆ ಹಣ ಒದಗಿಸುವುದು ಕಷ್ಟದ ಕೆಲಸ ಎಂದರು.

ಇನ್ನು 32 ರಾಜ್ಯ ಹೆದ್ದಾರಿಗಳಲ್ಲಿರುವ ಮಾನವಟೋಲ್ ಗೇಟ್‍ಗಳನ್ನು ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರದ ನೆರವು ಪಡೆಯಲಾಗುವುದು. ಆ ಮೂಲಕ ವಾಹನಗಳ ಶುಲ್ಕ ಸಂಗ್ರಹಣೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಬಹುದು. ಸಮಾಜಘಾತಕ ಶಕ್ತಿಗಳು ಟೋಲ್‍ಗೇಟ್ ಮುಖಾಂತರ ಸಾಗುತ್ತಿದ್ದರೆ ಅವರ ಭಾವಚಿತ್ರ ದಕ್ಕುತ್ತದೆ. ಹಾಗೆಯೇ ನಕಲಿ ನಂಬರ್ ಪ್ಲೇಟ್​ಗಳಿರುವ ವಾಹನವನ್ನು ಸುಲಭವಾಗಿ ಪತ್ತೆ ಮಾಡಬಹುದು. ಇಂತಹ ಟೋಲ್‍ಗೇಟ್‍ಗಳನ್ನು ನಿರ್ಮಿಸುವ ಮೂಲಕ ದೇಶಾದ್ಯಂತ ಏಕರೂಪದ ಶುಲ್ಕ ವಿಧಿಸುವುದು ಕೇಂದ್ರ ಸರ್ಕಾರದ ಉದ್ದೇಶ ಎಂದ ಅವರು,ಇಂತಹ ಟೋಲ್‍ಗೇಟ್‍ಗಳ ವ್ಯಾಪ್ತಿಯಲ್ಲಿ ನೈಸ್ ರಸ್ತೆಯ ಟೋಲ್‍ಗೇಟ್‍ನ್ನು ಒಳಪಡಿಸುವುದು ಸಾಧ್ಯವಿಲ್ಲದ ಕೆಲಸ ಎಂದಿದ್ದಾರೆ ಕಾರಜೋಳ.

Intro:ಬೆಂಗಳೂರು : ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಬೆಂಗಳೂರು-ಮೈಸೂರು ನಡುವಣ ದಶಪಥ ರಸ್ತೆಯ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ್ ಹೇಳಿದ್ದಾರೆ.Body:ವಿಧಾನಸೌಧದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದ್ದು, ಪರಿಹಾರ ಕಾರ್ಯಕ್ಕೆ ಹಣ ಹೊಂದಿಸುವ ಕಡೆ ಗಮನ ನೀಡಬೇಕಿರುವುದರಿಂದ ಬೆಂಗಳೂರು-ಮೈಸೂರು ನಡುವಣ ದಶಪಥ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.
ಬೆಂಗಳೂರು-ಮೈಸೂರು ನಡುವಣ ದಶಪಥ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ನೆರವು ನೀಡುತ್ತಿದೆಯಾದರೂ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಹಲವು ಉದ್ದೇಶಗಳಿಗೆ ರಾಜ್ಯ ಸರ್ಕಾರ ಕೂಡಾ ಹಣ ಹೊಂದಿಸಿಕೊಡಬೇಕಿದೆ. ಆದರೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಅಗತ್ಯವಾದ ಭೂಸ್ವಾಧೀನ ಕಾರ್ಯ ಪೂರ್ಣವಾಗಿಲ್ಲ.ಅದೇ ರೀತಿ ಇನ್ನೂ ಹಲವು ಕಾರ್ಯಗಳಿಗೆ ಹಣ ನೀಡಬೇಕಿದೆಯಾದರೂ ಸದ್ಯಕ್ಕೆ ಅದು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಅತಿವೃಷ್ಟಿಯಿಂದ ರಾಜ್ಯದಲ್ಲಿ ನಾಲ್ಕು ಸಾವಿರದ 200 ಕಿಮೀಗಳಷ್ಟು ರಸ್ತೆಗೆ ಹಾನಿಯಾಗಿದ್ದು, ಸೇತುವೆ, ಕಟ್ಟಡಗಳು ಸೇರಿದಂತೆ ಪರಿಹಾರ ಕಾರ್ಯಕ್ಕಾಗಿ ಒಟ್ಟು 7600 ಕೋಟಿ ರೂ.ಗಳ ಅಗತ್ಯವಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ರಸ್ತೆ, ಸೇತುವೆ, ಕಟ್ಟಡ ದುರಸ್ಥಿ ಕಾರ್ಯಕ್ಕೆ ನಾವು 500 ಕೋಟಿ ರೂ.ಗಳನ್ನು ಒದಗಿಸಿದ್ದು, ಉಳಿದ ಹಣ ಹೊಂದಿಸುವ ಮಾರ್ಗವನ್ನು ನೋಡುತ್ತಿದ್ದೇವೆ. ಇಷ್ಟಾದರೂ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಕಟ್ಟಡಗಳ ದುರಸ್ಥಿ ಕಾರ್ಯಕ್ಕೆ ಹಣ ಒದಗಿಸುವುದು ಕಷ್ಟದ ಕೆಲಸ ಎಂದು ಹೇಳಿದರು.
ಕೇಂದ್ರ ಸರ್ಕಾರ ಈಗ ಪರಿಹಾರ ಕಾರ್ಯಕ್ಕೆ ನೀಡಿರುವ ಹಣವೇ ಇರಬಹುದು, ಪೂರಕ ಧನವಿನಿಯೋಗ ಮಸೂದೆಯಡಿ ಒದಗಿಸಲು ಉದ್ದೇಶಿಸಿರುವ ಹಣವೇ ಇರಬಹುದು. ಅದೆಲ್ಲವೂ ಪರಿಹಾರ ಕಾರ್ಯಕ್ಕೆ ದೊಡ್ಡ ಮಟ್ಟದಲ್ಲಿ ಹಣ ಹೊಂದಿಸುವುದು ಕಷ್ಟ. ಯಾಕೆಂದರೆ ಅತಿವೃಷ್ಟಿಯಿಂದ ರಾಜ್ಯದಲ್ಲಿ ಆಗಿರುವ ನಷ್ಟದ ಪ್ರಮಾಣ 38 ಸಾವಿರ ಕೋಟಿ ರೂ. ಹೀಗಾಗಿ ಇರುವುದರಲ್ಲೇ ಹೊಂದಿಸುವ ಕೆಲಸ ಮಾಡಬೇಕಿದೆ ಎಂದು ಡಿಸಿಎಂ ನುಡಿದರು.
ಎಲೆಕ್ಟ್ರಾನಿಕ್ ಟೋಲ್ ಗೇಟ್ : ರಾಜ್ಯದಲ್ಲಿ 32 ರಾಜ್ಯ ಹೆದ್ದಾರಿಗಳಲ್ಲಿರುವ ಮಾನವಟೋಲ್ ಗೇಟ್‍ಗಳನ್ನು ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನಾಗಿ ಪರಿವರ್ತಿಸಲಾಗುವುದು, ಇದಕ್ಕಾಗಿ ಕೇಂದ್ರ ಸರ್ಕಾರದ ನೆರವು ಪಡೆಯಲಾಗುವುದು ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‍ಗೇಟ್‍ಗಳನ್ನು ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನಾಗಿ ಕೇಂದ್ರ ಸರ್ಕಾರ ಪರಿವರ್ತಿಸುತ್ತದೆ. ರಾಜ್ಯ ಹೆದ್ದಾರಿಗಳಲ್ಲಿ 32 ಟೋಲ್‍ಗೇಟ್‍ಗಳನ್ನು ನಾವು ಎಲೆಕ್ಟ್ರಾನಿಕ್ ಟೋಲ್‍ಗೇಟ್‍ಗಳನ್ನಾಗಿ ಪರಿವರ್ತಿಸುತ್ತೇವೆ. ಆ ಮೂಲಕ ವಾಹನಗಳ ಶುಲ್ಕ ಸಂಗ್ರಹಣೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಬಹುದು. ಸಮಾಜಘಾತಕ ಶಕ್ತಿಗಳು ಟೋಲ್‍ಗೇಟ್ ಮುಖಾಂತರ ಸಾಗುತ್ತಿದ್ದರೆ ಅವರ ಬಾವಚಿತ್ರ ದಕ್ಕುತ್ತದೆ. ಹಾಗೆಯೇ ನಕಲಿ ನಂಬರ್ ಪ್ಲೇಟುಗಳಿರುವ ವಾಹನವನ್ನು ಸುಲಭವಾಗಿ ಪತ್ತೆ ಮಾಡಬಹುದು. ಇಂತಹ ಟೋಲ್‍ಗೇಟ್‍ಗಳನ್ನು ನಿರ್ಮಿಸುವ ಮೂಲಕ ದೇಶಾದ್ಯಂತ ವಾಹನಗಳಿಗೆ ಏಕರೂಪದ ಶುಲ್ಕವನ್ನು ವಿಧಿಸುವುದು ಕೇಂದ್ರ ಸರ್ಕಾರದ ಉದ್ದೇಶ ಎಂದ ಅವರು ಇಂತಹ ಟೋಲ್‍ಗೇಟ್‍ಗಳ ವ್ಯಾಪ್ತಿಯಲ್ಲಿ ನೈಸ್ ರಸ್ತೆಯ ಟೋಲ್‍ಗೇಟ್‍ನ್ನು ಒಳಪಡಿಸುವುದು ಸಾಧ್ಯವಿಲ್ಲದ ಕೆಲಸ ಎಂದರು.
ನೈಸ್ ರಸ್ತೆಗೆ ಸಂಬಂಧಿಸಿದಂತೆ ಏನೇ ವಿವಾದಗಳಿದ್ದರೂ ಅದನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬೇಕಿದೆ. ಹೀಗಾಗಿ ನೈಸ್ ರಸ್ತೆಯಲ್ಲಿ ರಾಜ್ಯ ಹೆದ್ದಾರಿಯ ಟೋಲ್‍ಗೇಟ್‍ಗಳ ಮಾದರಿಯಲ್ಲಿ ಶುಲ್ಕ ನಿಗದಿಪಡಿಸಲು ಸಾಧ್ಯವಿಲ್ಲ. ನೈಸ್ ರಸ್ತೆಯಲ್ಲಿರುವ ಟೋಲ್‍ಗೇಟ್ ಶುಲ್ಕ ಇದೇ ಕಾರಣಕ್ಕಾಗಿ ಉಳಿದ ಟೋಲ್‍ಗೇಟ್‍ಗಳಿಗಿಂತ ಹೆಚ್ಚಾಗುತ್ತಿದೆ ಎಂದ ಅವರು, ಈ ಕುರಿತಂತೆ ಹೆಚ್ಚಿನ ವಿವರ ನೀಡಲು ಡಿಸಿಎಂ ನಿರಾಕರಿಸಿದರು.
ಶಿರಾಡಿ ಘಾಟ್ ರಸ್ತೆಯ ದುರಸ್ಥಿತಿ ಕಾರ್ಯವೂ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.