ವಸತಿರಹಿತರಿಗೆ ಸಿಹಿಸುದ್ದಿ: 4 ಲಕ್ಷ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಸಿಎಂ ಸೂಚನೆ

author img

By

Published : Sep 10, 2021, 5:15 PM IST

ಸಿಎಂ ಸೂಚನೆ

ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ವಸತಿರಹಿತರಿಗಾಗಿ ವಸತಿ ಯೋಜನೆಯಡಿ ನಾಲ್ಕು ಲಕ್ಷ ಹೊಸ ಮನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು: ವಿವಿಧ ವಸತಿ ಯೋಜನೆಗಳಡಿ ನಾಲ್ಕು ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ಹೊಸ ಮನೆಗಳನ್ನು ನೀಡುವ ಯೋಜನೆಗೆ ಅನುಮೋದನೆ ದೊರೆಯದೇ ಇದ್ದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮನೆಗಳಿಗೆ ಅನುಮೋದನೆ ದೊರೆತಲ್ಲಿ ಉಳಿದ ಮನೆಗಳನ್ನು ರಾಜ್ಯದ ವಸತಿ ಯೋಜನೆಗಳಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿತ್ತು.

ಅದರಂತೆ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ವಸತಿರಹಿತರಿಗಾಗಿ ವಸತಿ ಯೋಜನೆಯಡಿ ನಾಲ್ಕು ಲಕ್ಷ ಹೊಸ ಮನೆಗಳಿಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿಎಂ ಸೂಚಿಸಿದ್ದಾರೆ.

ಇದನ್ನೂ ಓದಿ: ಬಿಟ್ಟೇನೆಂದ್ರೂ ಬಿಡದು ಈ 'ಗೃಹ'ವ್ಯಾದಿ.. ಇಷ್ಟದ ಮನೆಗಾಗಿ ಸಚಿವರುಗಳಿಂದ ಸಿಎಂಗೆ ದುಂಬಾಲು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.