ಸಂಕ್ರಾಂತಿ ಸಂಭ್ರಮದ ನಡುವೆ 2ನೇ ವಾರದ ವೀಕೆಂಡ್ ಕರ್ಫ್ಯೂ ಜಾರಿ: ಬೆರಳೆಣಿಕೆಯಷ್ಟು ಬಸ್​ ಸಂಚಾರ

author img

By

Published : Jan 15, 2022, 9:30 AM IST

Second Week Weekend Curfew
ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಬಸ್​ ಸಂಚಾರ ()

ರಾಜ್ಯದಲ್ಲಿ ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು ತುರ್ತು ಸೇವೆಗಷ್ಟೇ ಅವಕಾಶ ಕಲ್ಪಿಸಲಾಗಿದೆ. ನಿತ್ಯ ಜನಜಂಗುಳಿಯಿಂದ ಕೂಡಿದ್ದ ಮೆಜೆಸ್ಟಿಕ್ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್​ ಸೋಂಕಿನ 3 ನೇ ಅಲೆ ಹೆಚ್ಚಾಗುತ್ತಿದೆ. ಕೊರೊನಾಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯದಲ್ಲಿ ಸತತ ಎರಡನೇ ವಾರದ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳ ಖರೀದಿಗಷ್ಟೇ ಅವಕಾಶ ನೀಡಲಾಗಿದೆ. ಹೀಗಾಗಿ, ನಿತ್ಯ ಜನಜಂಗುಳಿಯಿಂದ ಕೂಡಿದ್ದ ಹಾರ್ಟ್ ಆಫ್ ದಿ ಸಿಟಿ‌ ಮೆಜೆಸ್ಟಿಕ್ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ.

ವೀಕೆಂಡ್ ಕರ್ಫ್ಯೂ ಜಾರಿಯಾದ ಹಿನ್ನೆಲೆ ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ತನಕ ಬಿಎಂಟಿಸಿ ಓಡಾಟ ಇರುವುದಿಲ್ಲ. ಕೇವಲ ತುರ್ತು ಸೇವೆಗಷ್ಟೇ ಅವಕಾಶ ಕಲ್ಪಿಸಲಾಗಿದ್ದು, ಭಾಗಶಃ ಬಸ್​ಗಳು ಡಿಪೋಗಳಲ್ಲಿ ನಿಂತಿವೆ.

ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಬಸ್​ ಸಂಚಾರ

ರಾಜಧಾನಿಯಲ್ಲಿ ಎಂದಿನಂತೆ ಕೆಎಸ್‌ಆರ್​ಟಿಸಿ ಬಸ್​ಗಳ ಸಂಚಾರ ಇರಲಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದಂದು ಪ್ರಯಾಣಿಕರಿಗಾಗಿ ಹೆಚ್ಚುವರಿ ಬಸ್​ಗಳನ್ನ ನಿಯೋಜನೆ ಮಾಡುತ್ತಿದ್ದ ನಿಗಮ, ಇದೀಗ ಪ್ರಯಾಣಿಕರು ಇದ್ದರಷ್ಟೇ ಬಸ್​ ಓಡಿಸಲು ಮುಂದಾಗಿದೆ‌. ಕಡಿಮೆ ಪ್ರಮಾಣದ ಕೆಎಸ್ಆರ್​ಟಿಸಿ ಬಸ್​ಗಳು ರಸ್ತೆಗಿಳಿದಿದ್ದರೂ ಕೂಡ ಪ್ರಯಾಣಿಕರೇ ಇಲ್ಲ.

ಮೆಟ್ರೋ ಸಂಚಾರ ಲಭ್ಯ:

ವೀಕೆಂಡ್ ಕರ್ಫ್ಯೂ ಇದ್ದರೂ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿಯಿಲ್ಲ. ಜನರ ತುರ್ತು ಸೇವೆಗಾಗಿ ಸಂಚಾರ ಇರಲಿದ್ದು, ಸಮಯ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಮೆಟ್ರೋ ಓಡಾಟ ಪ್ರಾರಂಭವಾಗಿದ್ದು, ರಾತ್ರಿ 9 ಗಂಟೆಯವರೆಗೆ ಇರಲಿದೆ. 20 ನಿಮಿಷಕ್ಕೊಂದು ಮೆಟ್ರೋ ಓಡಿಸಲಾಗುತ್ತಿದೆ.

ಓದಿ: ಇಂದು ಮಾಯಾವತಿ ಹುಟ್ಟುಹಬ್ಬ: ಬಿಎಸ್‍ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.