ETV Bharat / state

ಸಂಕ್ರಾಂತಿ ಸಂಭ್ರಮ: ಸಿಲಿಕಾನ್ ಸಿಟಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ

author img

By ETV Bharat Karnataka Team

Published : Jan 13, 2024, 9:31 PM IST

ಸಂಕ್ರಾಂತಿ ಸಂಭ್ರಮದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕಬ್ಬು, ಕಡಲೇಕಾಯಿ, ಅವರೆಕಾಯಿ, ಗೆಣಸು, ಎಳ್ಳು , ಬೆಲ್ಲ ಮಾರಾಟದ ಭರಾಟೆ ಜೋರಾಗಿಯೇ ನಡೆಯುತ್ತಿದೆ.

ಸಂಕ್ರಾಂತಿ ಸಂಭ್ರಮ  ಸಿಲಿಕಾನ್ ಸಿಟಿ  ಮಾರಾಟದ ಭರಾಟೆ  Sankranti celebration  Silicon City markets
ಸಂಕ್ರಾಂತಿ ಸಂಭ್ರಮ: ಸಿಲಿಕಾನ್ ಸಿಟಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ

ಬೆಂಗಳೂರು: ವರ್ಷದ ಮೊದಲ ಸುಗ್ಗಿ ಹಬ್ಬವಾದ ಸಂಕ್ರಾಂತಿಯ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಮನೆ ಮಾಡಿದ್ದು, ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ. ಬೆಲೆ ಏರಿಕೆ ಬಿಸಿ ತಟ್ಟಿದ್ದರೂ ಹಬ್ಬಕ್ಕೆ ಬೇಕಾದ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸುಗಳ, ಎಳ್ಳು, ಬೆಲ್ಲಗಳನ್ನು ನಗರದ ಕೆ.ಆರ್. ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆಗಳು ಗಿಜಿಗುಡುತ್ತಿದೆ.

ಸಂಕ್ರಾಂತಿ ಸಂಭ್ರಮ  ಸಿಲಿಕಾನ್ ಸಿಟಿ  ಮಾರಾಟದ ಭರಾಟೆ  Sankranti celebration  Silicon City markets
ಮಾರುಕಟ್ಟೆಯಲ್ಲಿ ಖರೀದಿ ಜೋರು

ನಗರದ ಮಲ್ಲೇಶ್ವರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ 2 ರೀತಿಯ ಕಬ್ಬಿನ ತಳಿಗಳು ಕಂಡು ಬರುತ್ತಿದ್ದು, ಕಪ್ಪು ಕಬ್ಬಿಗೆ ಹೆಚ್ಚಿದ ಬೇಡಿಕೆ ಕಂಡು ಬರುತ್ತಿದೆ. ಒಂದು ಕಟ್ಟಿಗೆ 300 ರಿಂದ 500 ರೂಪಾಯಿ ನಿಗದಿಯಾಗಿದೆ. ಕಬ್ಬು ಜೋಡಿಗೆ 100 - 150 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಹೂವು ಹಣ್ಣುಗಳ ಬೆಲೆಯೂ ಸಹ ತುಸು ಹೆಚ್ಚಾಗಿದೆ.

ಮೊದಲೆಲ್ಲ ಹಬ್ಬಕ್ಕೆ ಇನ್ನೂ ಕೆಲ ದಿನ ಬಾಕಿ ಇರುವಾಗಲೆ ಹಿರಿಯರು ಮನೆಯಲ್ಲೆ ಕಡಲೆಬೀಜ, ಎಳ್ಳು, ಹುರಿದು, ಕೊಬ್ಬರಿ ಹಾಗೂ ಬೆಲ್ಲ ಹೆಚ್ಚಿಟ್ಟುಕೊಂಡು ಸಾಂಪ್ರದಾಯಿಕವಾಗಿ ಮಿಶ್ರಣ ಮಾಡಿ ಹಬ್ಬದ ದಿನ ಎಳ್ಳು - ಬೆಲ್ಲ ಬೀರುತ್ತಾರೆ. ಆದರೆ, ಇಂದು ತಯಾರಿಸುವ ಗೊಜಿಗೆ ಹೋಗದೇ, ಜನರು ಮಾರುಕಟ್ಟೆಯಲ್ಲಿ ಸಿದ್ಧ ಎಳ್ಳು- ಬೆಲ್ಲ ಮಿಶ್ರಣವನ್ನು ಕೆಜಿಗೆ 250 ರಿಂದ 360 ರೂ.ಗೆ ಖರೀದಿಸುತ್ತಿದ್ದಾರೆ.

ಸಂಕ್ರಾಂತಿ ಸಂಭ್ರಮ  ಸಿಲಿಕಾನ್ ಸಿಟಿ  ಮಾರಾಟದ ಭರಾಟೆ  Sankranti celebration  Silicon City markets
ಸಂಕ್ರಾಂತಿ ಹಿನ್ನಲೆ ಅಗತ್ಯ ವಸ್ತುಗಳ ಖರೀದಿ ಜೋರು

ಸೇವಂತಿಗೆ ಕೆಜಿಗೆ 400 ರಿಂದ 500 ರೂ, ಮೈಸೂರು ಮಲ್ಲಿಗೆ ಕೆಜಿಗೆ 600 ರಿಂದ 750 ರೂ. ಕಾಕಡಾ ಕೆಜಿಗೆ 100 ರಿಂದ 150ರೂ. ಚೆಂಡು ಹೂವು ಕೆಜಿಗೆ 100 ರಿಂದ 180 ರೂ. ಹಾಗೂ ಏಲಕ್ಕಿಬಾಳೆ 100 ರಿಂದ 120 ರೂ, ಸೇಬು ಹಣ್ಣು ಕೆಜಿಗೆ 100 ರಿಂದ 180 ರೂ.ಗೆ ಮಾರಾಟವಾಗುತ್ತಿದೆ.

ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ, ರಾಮನಗರ ತಾಲೂಕಿನ ಮಾಗಡಿ, ತಾಲೂಕುಗಳಲ್ಲಿ ಹೆಚ್ಚು ಅವರೆಕಾಯಿ, ಕಡಲೆಕಾಯಿ, ಗೆಣಸು ಬೆಳೆಯಲಾಗುತ್ತಿತ್ತು. ಆದರೆ, ಈ ಬಾರಿ ಮಳೆ ಬಾರದೆಯಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕೆಜಿಗೆ ಅವರೆಕಾಯಿ 70 ರಿಂದ 90 ರೂ. ಮತ್ತು ನೆಲಗಡಲೇಕಾಯಿ 100 ರಿಂದ 150 ರೂ. ವರೆಗೂ ಮರಾಟವಾಗುತ್ತಿದೆ.

ಸಂಕ್ರಾಂತಿ ಸಂಭ್ರಮ  ಸಿಲಿಕಾನ್ ಸಿಟಿ  ಮಾರಾಟದ ಭರಾಟೆ  Sankranti celebration  Silicon City markets
ಕಬ್ಬು ಮಾರಾಟ ಜೋರಾಗಿಯೇ ನಡೆಯಿತು

ವೆಂಕಟಸುಬ್ಬಯ್ಯ, ಕೆ.ಆರ್. ಮಾರುಕಟ್ಟೆ ವ್ಯಾಪಾರಿ

ಹಬ್ಬದ ಖರೀದಿಯ ದರ:

  • ಸಿದ್ಧ ಎಳ್ಳು- ಬೆಲ್ಲ- ಕೆಜಿಗೆ 250- 260 ರೂ.
  • ಸಕ್ಕರೆ ಅಚ್ಚು 250- 300 ರೂ.
  • ಬಿಳಿ ಕಬ್ಬು ಜೋಡಿಗೆ 80- 100 ರೂ.
  • ಕಪ್ಪ ಕಬ್ಬ ಜೋಡಿಗೆ 100- 180 ರೂ.
  • ಹಸಿ ಕಡಲೇಕಾಯಿ 100- 150 ರೂ.
  • ಅವರೆಕಾಳು 80- 90 ರೂ.

ಹೂವು- ಹಣ್ಣುಗಳು ದರ:

  • ಏಲಕ್ಕಿಬಾಳೆ 100 -120 ರೂ.
  • ಸೇಬು ಹಣ್ಣು ಕೆಜಿಗೆ 120 -180 ರೂ.
  • ಸೇವಂತಿ ಕೆಜಿಗೆ 450 -500 ರೂ.
  • ಮೈಸೂರು ಮಲ್ಲಿಗೆ ಕೆಜಿಗೆ 600- 750 ರೂ.
  • ಕಾಕಡಾ ಕೆಜಿಗೆ 120 -150 ರೂ.
  • ಚೆಂಡು ಹೂವು ಕೆಜಿಗೆ 150 - 180ರೂ.

ಇದನ್ನೂ ಓದಿ: ಶತಾಯುಷಿ ಶಿವಮ್ಮ ಸರಗಣಾಚಾರಿಗೆ ಜನ್ಮದಿನದ ಸಂಭ್ರಮ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.