ETV Bharat / state

ಒನ್ ವರ್ಲ್ಡ್​ ಒನ್ ಫ್ಯಾಮಿಲಿ ಕಪ್: ಒಂದು ಎಸೆತ ಬಾಕಿಯಿರುವಂತೆ ಜಯಶಾಲಿಯಾದ ಸಚಿನ್ ನಾಯಕತ್ವದ ತಂಡ

author img

By ETV Bharat Karnataka Team

Published : Jan 18, 2024, 4:39 PM IST

Updated : Jan 18, 2024, 5:35 PM IST

ಒನ್ ವರ್ಲ್ಡ್​ ಒನ್ ಫ್ಯಾಮಿಲಿ ಹೆಸರಿನ ಟಿ-20 ಕ್ರಿಕೆಟ್‌ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಒನ್ ವರ್ಲ್ಡ್ ತಂಡ ಗೆಲುವು ಕಂಡಿದೆ.

ಜಯಶಾಲಿಯಾದ ಸಚಿನ್ ನಾಯಕತ್ವದ ತಂಡ
ಜಯಶಾಲಿಯಾದ ಸಚಿನ್ ನಾಯಕತ್ವದ ತಂಡ

ಚಿಕ್ಕಬಳ್ಳಾಪುರ: ಸಾಮಾಜಿಕ‌ ಉದ್ದೇಶದಿಂದ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಒನ್ ವರ್ಲ್ಡ್​ ಒನ್ ಫ್ಯಾಮಿಲಿ ಕಪ್ ಟ್ವಿ-20 ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಒನ್ ವರ್ಲ್ಡ್​ ತಂಡ ವಿಜೇತವಾಗಿದೆ. ಇಲ್ಲಿನ ಸಾಯಿಕೃಷ್ಣ ಕ್ರೀಡಾಂಗಣದಲ್ಲಿ‌ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಸಚಿನ್ ನಾಯಕತ್ವದ ತಂಡವು ಒನ್ ಫ್ಯಾಮಿಲಿ ತಂಡ ನೀಡಿದ್ದ 182 ರನ್​​ಗಳ ಗುರಿಯನ್ನು ಇನ್ನೂ ಒಂದು ಎಸೆತ ಬಾಕಿಯಿರುವಂತೆ ಜಯಶಾಲಿಯಾಯಿತು. ಕೊನೆಯ ಎರಡು ಎಸೆತಗಳಲ್ಲಿ ಮೂರು ರನ್ ಇರುವಾಗ ಸ್ಟ್ರೈಕ್​​ನಲ್ಲಿದ್ದ ಇರ್ಫಾನ್ ಪಠಾಣ್ ಸಿಕ್ಸರ್​ ಅಟ್ಟಿ ಗೆಲುವಿನ ದಡ ಸೇರಿಸಿದರು.

ಟಾಸ್​ ಮಾಡುತ್ತಿರುವುದು
ಟಾಸ್​ ಮಾಡುತ್ತಿರುವುದು

ಇದಕ್ಕೂ ಮುನ್ನ ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡವು ಬ್ಯಾಟಿಂಗ್ ಮಾಡಿ 181 ರನ್​ಗಳ ಸ್ಪರ್ಧಾತಕ ಮೊತ್ತ ಕಲೆ ಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ಡಾರೇನ್ ಮ್ಯಾಡಿ ಹಾಗೂ ರಮೇಶ್ ಕಲವಿತರಂಗ ಉತ್ತಮ ಆರಂಭ ಒದಗಿಸಿದರು. ತಂಡವು 39 ರನ್‌ ಗಳಿಸಿದ್ದಾಗ ರಮೇಶ್ ಔಟಾದರು. ಕ್ರೀಸ್​ಗೆ ಇಳಿದ ಮೊಹಮ್ಮದ್ ಕೈಫ್ 8 ರನ್​ ಗಳಿಸಿ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಇನ್ನೊಂದು ತುದಿಯಲ್ಲಿ ಡಾರೇನ್ ಮ್ಯಾಡಿ ಸೊಗಸಾದ ಅರ್ಧಶತಕ ಗಳಿಸಿ ಪೆವಿಲಿಯನ್ ಸೇರಿದರು‌. ಪಾರ್ಥಿವ್ ಪಟೇಲ್ (19) ಹೆಚ್ಚು ಒತ್ತು ನಿಲ್ಲಲಿಲ್ಲ. ಈ ವೇಳೆ, ಯುಸೂಫ್ ಪಠಾಣ್ ಹಾಗೂ ಯುವರಾಜ್ ಸಿಂಗ್ ರನ್ ಗತಿ ಹೆಚ್ಚಿಸಿದರು. ಯೂಸುಫ್ ಆಕರ್ಷಕ ಸಿಕ್ಸರ್​ಗಳನ್ನ ಸಿಡಿದು 38 ರನ್ ಗಳಿಸಿ ಔಟಾದರೆ, ನಾಯಕ ಯುವರಾಜ್ ಸಿಂಗ್ 23 ರನ್ ಹೊಡೆದು ಅಶೋಕ್ ದಿಂಡಾ ಬೌಲಿಂಗ್​​ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡ
ಯುವರಾಜ್ ಸಿಂಗ್ ನಾಯಕತ್ವದ ಒನ್ ಫ್ಯಾಮಿಲಿ ತಂಡ

182 ರನ್ ಗಳ ಗುರಿ ಬೆನ್ನಟ್ಟಿದ ಒನ್ ವರ್ಲ್ಡ್​ ತಂಡವು ಸಚಿನ್ ಹಾಗೂ ನಮನ್ ಒಜಾ ಆರಂಭದಲ್ಲಿ ಭದ್ರ ಬುನಾದಿ ಹಾಕಿಕೊಟ್ಟರು‌. ರನ್ ಗತಿ ಹೆಚ್ಚಿಸುವ ಭರದಲ್ಲಿ 28 ರನ್ ಗಳಿಸಿದ್ದ ನಮನ್ ಒಜಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಫಲರಾದರು. ಇನ್ನೊಂದೆಡೆ ತಮ್ಮದೆ ಸ್ಟೈಲ್​​ನಲ್ಲಿ ಬೌಂಡರಿ ಮತ್ತು ಸಿಕ್ಸರ್ ಅಟ್ಟಿ ಉತ್ತಮ ಅಡಿಪಾಯ ಹಾಕಿದ್ದ ಸಚಿನ್, ಮುತ್ಯಯ್ಯ ಮುರುಳಿಧರನ್ ಬೌಲಿಂಗ್​ನ ಮೊದಲ ಎಸೆತದಲ್ಲೇ ಮೊಹಮ್ಮದ್ ಕೈಫ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು‌.

ಸಚಿನ್ ತೆಂಡೂಲ್ಕರ್ ನಾಯಕತ್ವದ ಒನ್ ವರ್ಲ್ಡ್​ ತಂಡ
ಸಚಿನ್ ತೆಂಡೂಲ್ಕರ್ ನಾಯಕತ್ವದ ಒನ್ ವರ್ಲ್ಡ್​ ತಂಡ

ನಂತರ ಕ್ರೀಸ್​ಗೆ ಬಂದ ಆಲ್ಫೇರ್ ಪಿಟರ್ಸ್​ನ್​ ಕ್ರೀಸ್​ನಲ್ಲಿ ಅಂಟಿಕೊಂಡು ಉತ್ತಮ ರನ್ ಗಳಿಸಿದರು‌‌. ಈ ವೇಳೆ, ಉಪುಲ್ ತರಂಗ 23 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯ ಎರಡು ಓವರ್​​ಗಳಲ್ಲಿ 17 ರನ್ ಇದ್ದಾಗ ಚಮಿಂಡಾ ವಾಸ್ ಬೌಲಿಂಗ್​​​ನಲ್ಲಿ ಎರಡನೇ ಎಸೆತದಲ್ಲಿ ಸಿಕ್ಸರ್​ಗೆ ಅಟ್ಟಿದರು. ನಂತರ ದೊಡ್ಡ ಶಾಟ್​ಗೆ ಕೈ ಹಾಕಿದ ಪಿಟರ್ಸ್​ನ್ (74) ಕೈಫ್​ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕೊನೆಯ ಓವರ್​​ನಲ್ಲಿ 7 ರನ್ ಇದ್ದಾಗ ಕ್ರೀಸ್​ಗೆ ಬಂದ ಇರ್ಫಾನ್ ಪಠಾಣ್ ಸಿಕ್ಸ್ ಹೊಡೆದು ಗೆಲುವಿಗೆ ಕಾರಣರಾದರು. ಪಂದ್ಯ ಪುರುಷೋತ್ತಮರಾಗಿ ಆಲ್ಪೇರ್ ಪಿಟರ್ಸ್​ನ್, ಬೆಸ್ಟ್ ಬ್ಯಾಟರ್ ಆಗಿ ಡಾರೇನ್ ಮ್ಯಾಡಿ ಹಾಗೂ ಬೆಸ್ಟ್ ಬೌಲರ್ ಆಗಿ ಚಮಿಂಡ ವಾಸ್ ಪಡೆದರು.

ಕ್ರೀಡಾಂಗಣದ ಗ್ಯಾಲರಿಯಲ್ಲಿ ಜನಸ್ತೋಮ
ಕ್ರೀಡಾಂಗಣದ ಗ್ಯಾಲರಿಯಲ್ಲಿ ಜನಸ್ತೋಮ

ಇದನ್ನೂ ಓದಿ: 'ಒನ್ ವಲ್ಡ್ ಒನ್‌ ಫ್ಯಾಮಿಲಿ ಕಪ್': ಯುವರಾಜ್‌ ಸಿಂಗ್, ವೆಂಕಟೇಶ್‌ ಪ್ರಸಾದ್ ಹೇಳಿದ್ದೇನು?

Last Updated :Jan 18, 2024, 5:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.