ETV Bharat / state

ದೇಶದಲ್ಲಿ ಪ್ರತಿ ನಿಮಿಷಕ್ಕೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ?

author img

By

Published : Jan 4, 2020, 3:02 PM IST

ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.

Rate of death due to heart attack is unbelievable
ದೇಶದಲ್ಲಿ ಪ್ರತಿ ನಿಮಿಷಕ್ಕೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ....?!

ಬೆಂಗಳೂರು: ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸಿ.ಎನ್.ಮಂಜುನಾಥ್ ತಿಳಿಸಿದರು.

ದೇಶದಲ್ಲಿ ಪ್ರತಿ ನಿಮಿಷಕ್ಕೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಎಷ್ಟು ಗೊತ್ತಾ?

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ 105ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 45 ವರ್ಷ ದಾಟಿದ ಪುರುಷರು, 55 ವರ್ಷ ದಾಟಿದ ಮಹಿಳೆಯರು ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಹಿಂದೆ 65 ವರ್ಷದ ನಂತರದ ವಯೋಮಾನದವರಿಗೆ ಈ ಮಹಾಮಾರಿಯ ಆತಂಕ ಇತ್ತು ಎಂದು ಹೇಳಿದರು.

ಇನ್ನು ಹೃದಯಾಘಾತಕ್ಕೆ ಅತ್ಯಂತ ಪ್ರಮುಖ ಕಾರಣ ಕೌಟುಂಬಿಕ ಒತ್ತಡ. ಅದರಲ್ಲೂ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಹೃದಯಾಘಾತಕ್ಕೆ ತುತ್ತಾಗುವುದು ದಾಖಲೆಗಳಿಂದ ಸಾಬೀತಾಗಿದೆ. ಬರಬರುತ್ತಾ 35 ವರ್ಷದ ವ್ಯಕ್ತಿ ಕೂಡ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ನಮ್ಮ ಜೀವನ ಶೈಲಿ, ಆಹಾರ ಪದ್ಧತಿಯೇ ಇದಕ್ಕೆ ಕಾರಣ ಎಂದು ತಿಳಿಸಿದರು.

ಹೃದ್ರೋಗ ಸಮಸ್ಯೆ ಹಾಗೂ ಮಧುಮೇಹ ಒಂದು ನಾಣ್ಯದ ಎರಡು ಮುಖವಿದ್ದಂತೆ. ಇವೆರಡರಲ್ಲಿ ಯಾವುದೇ ಸಮಸ್ಯೆ ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದು. ಮಾದಕ ವಸ್ತು ಸೇವನೆ, ಮದುಮೇಹ, ಬೊಜ್ಜು ಕೂಡ ಪ್ರಮುಖ ಕಾರಣಳಾಗಿವೆ. ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ ಶೇ. 35ರಷ್ಟು ಮಂದಿ 35 ವರ್ಷ ಒಳಗಿನವರು ಎಂಬುದು ಆತಂಕಕಾರಿ. ಶೇ. 5ರಷ್ಟು 25ರಿಂದ 30 ವರ್ಷದ ಒಳಗಿನ ಯುವಕರು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.

ಹೃದಯಾಘಾತ ಲಕ್ಷಣಗಳು:

ಕನಿಷ್ಠ 30 ನಿಮಿಷಗಳ ನಿರಂತರ ಎದೆನೋವು‌ ಕಾಣಿಸಿದರೆ ಹೃದಯಾಘಾತ ಎಂದು ಭಾವಿಸಬಹುದು. ಎದೆಯ ಎಡ ಹಾಗೂ ಕೇಂದ್ರ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೀಗೆ ಕೆಲವೊಮ್ಮೆ ಸೂಚನೆಗಳಿಂದ ಹೃದಯಾಘಾತ ಸಂಭಿಸುವುದು ಗೊತ್ತಾಗುತ್ತದೆ. ಆದರೆ ಇನ್ನು ಕೆಲವರರಿಗೆ ಯಾವುದೇ ಲಕ್ಷಣ ತೋರಿಸಿಕೊಳ್ಳದೆ ಬರಬಹುದು ಎಂದರು.

Intro:newsBody:ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತಕ್ಕೆ ಬಲಿ: ಮಂಜುನಾಥ್


ಬೆಂಗಳೂರು: ದೇಶದಲ್ಲಿ ಪ್ರತಿ ನಿಮಿಷಕ್ಕೆ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ 105ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಜೀವನಶೈಲಿ ರೋಗಗಳು ಕಾರ್ಡಿಯಾಕ್ ವಿಜ್ಞಾನದಲ್ಲಿ ಇತ್ತೀಚಿನ ಆಧುನಿಕತೆಯ ಕುರಿತು ಮಾತನಾಡಿ, 45 ವರ್ಷ ದಾಟಿದ ಪುರುಷರು, 55 ವರ್ಷ ದಾಟಿದ ಮಹಿಳೆಯರು ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆ ಈ ದಿನಗಳಲ್ಲಿ ಹೆಚ್ಚಾಗಿದೆ. ಹಿಂದೆ ಈ ಆತಂಕ 65 ವರ್ಷಕ್ಕೆ ಬರುತ್ತಿತ್ತು. ಕೌಟುಂಬಿಕ ಒತ್ತಡದ ಯಾತಕ್ಕೆ ಅತ್ಯಂತ ಪ್ರಮುಖ ಕಾರಣ. ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರು ಹೃದಯಾಘಾತಕ್ಕೆ ತುತ್ತಾಗುವುದು ದಾಖಲೆಗಳಿಂದ ಸಾಬೀತಾಗಿದೆ. 35 ವರ್ಷದ ವ್ಯಕ್ತಿ ಕೂಡ ಹೃದಯಾಘಾತಕ್ಕೆ ತುತ್ತಾಗುವ ಸಾಧ್ಯತೆಗಳು ಕಂಡು ಬರುತ್ತಿವೆ. ಬದಲಾದ ಜೀವನಶೈಲಿ ಆಹಾರ ಪದ್ಧತಿ ಇದಕ್ಕೆ ಕಾರಣ ಎಂದು ತಿಳಿಸಿದರು.
ಹೃದ್ರೋಗ ಸಮಸ್ಯೆ ಹಾಗೂ ಮಧುಮೇಹ ಒಂದು ನಾಣ್ಯದ ಎರಡು ಮುಖವಿದ್ದಂತೆ. ಯಾವುದೇ ಸಮಸ್ಯೆ ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದು. ಇದರಿಂದ ಮಧುಮೇಹ ಹೃದಯಾಘಾತಕ್ಕೆ ಅತ್ಯಂತ ಪ್ರಮುಖ ಕಾರಣವಾಗುತ್ತದೆ. ಇದರ ನಂತರ ಬೊಜ್ಜು ಅತ್ಯಂತ ಪ್ರಮುಖ ಕಾರಣವಾಗಿದೆ. ಶೇ.70 ರಷ್ಟು ಕೊಲೆಸ್ಟ್ರಾಲ್ ವ್ಯಕ್ತಿಯ ಜಠರದಲ್ಲಿಯೇ ಉತ್ಪಾದನೆಯಾಗುತ್ತದೆ. ಶೇ.30 ರಷ್ಟು ಮಾತ್ರ ಕೊಲೆಸ್ಟರಾಲ್‌ ಪ್ರಮಾಣ ಆಹಾರದಿಂದ ಬರುತ್ತದೆ. ಬೊಜ್ಜಿಗೂ, ಕೊಲೆಸ್ಟ್ರಾಲ್ ಗೂ ಸಂಬಂಧ ಇರುವುದಿಲ್ಲ. ಬೊಜ್ಜು ಇರುವವರಿಗೆ ಕೊಲೆಸ್ಟ್ರಾಲ್ ಹೆಚ್ಚಿರುತ್ತದೆ ಎಂಬ ಭಾವನೆ ತಪ್ಪು ಎಂದು ವಿವರಿಸಿದರು.
ಹೃದಯಾಘಾತದ ಹೃದಯಸಂಬಂಧಿ ಸಮಸ್ಯೆಗೆ ಧೂಮಪಾನ ಅತ್ಯಂತ ಪ್ರಮುಖ ಕಾರಣ. ಇದನ್ನು ಹೊರತುಪಡಿಸಿದರೆ ಮದುವೆಯ ಕೊಲೆಸ್ಟ್ರಾಲ್ ಹೆಚ್ಚಾಗುವುದು, ಅಧಿಕ ರಕ್ತದೊತ್ತಡ, ಬೊಜ್ಜು, ವ್ಯಾಯಾಮದ ಕೊರತೆ, ಅಧಿಕ ಮದ್ಯಪಾನ ಹೃದಯ ಸಮಸ್ಯೆಗೆ ಪ್ರಮುಖ ಕಾರಣ. ಅಧಿಕ ಒತ್ತಡ ಕೂಡ ಹೃದಯ ಸಮಸ್ಯೆಗೆ ಕಾರಣ. ಒತ್ತಡ ಕೂಡ ಅತ್ಯಂತ ಪ್ರಮುಖ ಕಾರಣ. ಮಾನಸಿಕ ಇಲ್ಲವೇ ದೈಹಿಕ ಒತ್ತಡ ಕೂಡ ಕಾರಣವಾಗಿರುತ್ತದೆ.ಶೇ.1 ರಷ್ಟು ಕೊಲೆಸ್ಟ್ರಾಲ್ ಹೆಚ್ಚಳ ಹೃದಯ ಸಂಬಂಧಿ ಸಮಸ್ಯೆಯ ಶೇ.2 ಎಷ್ಟು ಹೆಚ್ಚಳಕ್ಕೆ ಕಾರಣ. ಹೊಟ್ಟಯಲ್ಲಿ ಸಂಗ್ರಹ ಆಗುವ ಬೊಜ್ಜು ಕೂಡ ಹೃದಯಾಘಾತಕ್ಕೆ ಕಾರಣ, ಪೌಷ್ಟಿಕ ಆಹಾರ ಕೊರತೆ ಕೂಡ ಕಾರಣ, ಒಂದು ಸಿಗರೇಟು ಸೇವನೆ ವ್ಯಕ್ತಿಯ 11 ನಿಮಿಷದ ಆಯಸ್ಸನ್ನು ಕಡಿಮೆ ಮಾಡಿದರೆ ಒಂದು ಗಂಟೆ ಕೂತು ಟಿವಿ ವೀಕ್ಷಿಸುವುದರಿಂದ 22 ನಿಮಿಷದ ಆಯಸ್ಸು ಕಡಿಮೆ ಆಗುತ್ತದೆ. ದಿನಕ್ಕೆ 45 ನಿಮಿಷದಿಂದ ಒಂದು ಗಂಟೆ ವಾಯು ವಿಹಾರ ಮಾಡುವುದು ಹೃದಯಕ್ಕೆ ಅನುಕೂಲಕಾರಿ. ವಾಯುಮಾಲಿನ್ಯದಿಂದ ವಿಶ್ವದಲ್ಲಿ ಏಳು ದಶಲಕ್ಷ ಮಂದಿಯ ಸಾವು ಸಂಭವಿಸುತ್ತದೆ. ಭಾರತದಲ್ಲಿ 1.3 ಮಿಲಿಯನ್ ಮಂದಿಯ ಸಾವಾಗುತ್ತಿದೆ. ದೇಶದ ಇತರೆ ನಗರಕ್ಕೆ ಹೋಲಿಸಿದರೆ ಬೆಂಗಳೂರಿನ ವಾತಾವರಣ ಉತ್ತಮವಾಗಿದೆ. ಆದರೆ ಇದು‌ಕೂಡ ಕಳೆದ ಹತ್ತು ವರ್ಷದಲ್ಲಿ ಸಾಕಷ್ಟು ಹಾಳಾಗಿದೆ ಎಂದರು.
ಶೇ.35 ರಷ್ಟುಮಂದಿ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ 35 ವರ್ಷ ಒಳಗಿನವರು ಎಂಬುದು ಆತಂಕಕಾರಿ. 25 ರಿಂದ 30 ವರ್ಷದ ಯುವಕರು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಪಾಲಿಕೆ ಕೆಲಸಗಾರನೊಬ್ಬ 16 ವ್ಷದವನು ಸಾವನ್ನಪ್ಪಿದ್ದಾನೆ. ಇದು ಅತ್ಯಂತ ಕಿರಿಯ ವ್ಯಕ್ತಿಯ ಸಾವಾಗಿದೆ. ಮಾದಕ ವಸ್ತು ಸೇವನೆ ಕೂಡ ಹೃದಯಾಘಾತಕ್ಕೆ ಕಾರಣ. 25 ವರ್ಷದೊಳಗಿನವರು ಸಾವನ್ನಪ್ಪುವುದು ಒಟ್ಟು ಹೃದಯಾಘಾತದಿಂದ ಸಾವನ್ನಪ್ಪುವವರಲ್ಲಿ ಶೇ.5 ರಷ್ಟಿದೆ. ಕನಿಷ್ಠ30 ನಿಮಿಷ ನಿರಂತರ ಎದೆ ನೋವು‌ಕಾಣಿಸಿದರೆ ಹೃದಯಾಘಾತ ಎಂದು ಭಾವಿಸಬಹುದು. ಎದೆಯ ಎಡ ಹಾಗೂ ಕೇಂದ್ರಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೃದಯಾಘಾತ ಕೆಲವೊಮ್ಮೆ ಗುರುತು ತೋರಿಸಿದರೆ, ಇನ್ನು ಕೆಲವರಲ್ಲಿ ಗೊತ್ತಾಗದೇ ಕಾಡಬಹುದು ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.