ETV Bharat / state

ಅತ್ಯಾಚಾರ ಆರೋಪ: ಡ್ಯಾನ್ಸ್ ಮಾಸ್ಟರ್ ಸೇರಿ ಮೂವರ ಬಂಧನ

author img

By

Published : Aug 1, 2023, 12:53 PM IST

ಯುವತಿಯೊಂದಿಗೆ ಸೆರೆ ಹಿಡಿದಿದ್ದ ಖಾಸಗಿ ಫೋಟೋ, ವಿಡಿಯೋ ಹಿಡಿದು ಆರೋಪಿ ಬ್ಲ್ಯಾಕ್​ಮೇಲ್​ ಮಾಡಿದ್ದರು.

Rape accused
ಅತ್ಯಾಚಾರ ಆರೋಪಿಗಳು

ಡಿಸಿಪಿ ಲಕ್ಷ್ಮೀ ಪ್ರಸಾದ್​

ಬೆಂಗಳೂರು: ಕಿರುಕುಳದಿಂದಾಗಿ ದೂರ ಸರಿದಿದ್ದ ಪ್ರೀತಿಸಿದ್ದ ಯುವತಿಯೊಂದಿಗೆ ಸೆರೆ ಹಿಡಿದಿದ್ದ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿ ಮಾಜಿ ಪ್ರಿಯಕರ ಹಾಗೂ ಆತನ ಇಬ್ಬರು ಸ್ನೇಹಿತರು ಯುವತಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಡ್ಯಾನ್ಸ್ ಮಾಸ್ಟರ್ ಸೇರಿ ಮೂವರನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ದೂರಿನಲ್ಲಿ ಯುವತಿ ಹೇಳಿದ್ದೇನು?: ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಆ್ಯಂಡಿ ಜಾರ್ಜ್, ಸಂತೋಷ್ ಹಾಗೂ ಶಶಿ ಎಂಬುವರನ್ನು ಬಂಧಿಸಲಾಗಿದೆ‌. ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆಗೆ ಸೋಷಿಯಲ್ ಮೀಡಿಯಾ ಮುಖಾಂತರ ಪ್ರಮುಖ ಆರೋಪಿ‌ ಆ್ಯಂಡಿ ಜಾರ್ಜ್ ಪರಿಚಯವಾಗಿ ನಂತರ ಪ್ರೇಮಕ್ಕೆ ತಿರುಗಿತ್ತು‌. ಆರೋಪಿಯು ಖಾಸಗಿ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕನಾಗಿ ಕೆಲಸ ಮಾಡಿಕೊಂಡಿದ್ದರು.‌ ಇಬ್ಬರು ಸಹ ಎರಡು ವರ್ಷಗಳ ಕಾಲ ಜೊತೆಯಲ್ಲಿ ಓಡಾಡಿಕೊಂಡಿದ್ದರು. ಈ ಮಧ್ಯೆ ಆಕೆ ಜೊತೆ ತೆಗೆಸಿಕೊಂಡಿದ್ದ ಫೋಟೊ ಹಾಗೂ ವಿಡಿಯೋ ಸೆರೆ ಹಿಡಿದು ಬ್ಲ್ಯಾಕ್ ಮೇಲ್ ಮಾಡಿದ್ದ‌ು. ಕಿರುಕುಳಕ್ಕೆ ಬೇಸತ್ತು ಕಳೆದ ಎರಡು ವರ್ಷಗಳ ಹಿಂದೆ ಅಂತರ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಹಳೆಯ ಫೋಟೊ - ವಿಡಿಯೋ ತೋರಿಸಿ ಬೆದರಿಕೆ ಹಾಕಿ ತನ್ನ ಮೇಲೆ ಆತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಹಳೆಯ ವಿಡಿಯೋಗಳನ್ನು ಆ್ಯಂಡಿ, ಸ್ನೇಹಿತರಿಗೆ ಕಳುಹಿಸಿದ್ದ. ಅವರು ಸಹ ತಮ್ಮ ಮೇಲೆ‌ ಒತ್ತಡ ಹಾಕಿ‌ ಇಬ್ಬರು ಅನ್ಯ ಸಂದರ್ಭಗಳಲ್ಲಿ ರೇಪ್ ಮಾಡಿದ್ದಾರೆ. ಕೆಲ ದಿನಗಳ ನಂತರ ಆ್ಯಂಡಿ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿ ವೈರಲ್​ ಮಾಡಲು ಕಾರಣನಾಗಿದ್ದಾನೆ. ಅತ್ಯಾಚಾರ ಎಸಗುವುದಲ್ಲದೆ, ತಮ್ಮ ಘನತೆಗೆ‌ ಧಕ್ಕೆ ತಂದಿದ್ದಾರೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.

ಪೊಲೀಸ್​​ ಅಧಿಕಾರಿ ಹೇಳಿದ್ದೇನು?: ’’ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಪೆಂಡ್ರೈವ್ ವಶಕ್ಕೆ ಪಡೆದುಕೊಳ್ಳಲಾಗಿದೆ‌. ಡ್ಯಾನ್ಸ್ ಮಾಸ್ಟರ್ ಆಗಿರುವ ಆ್ಯಂಡಿ, ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೂ ಅಸಭ್ಯ ವರ್ತನೆ ತೋರಿದ್ದಾನಾ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ‘‘ ನಗರ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಅತ್ಯಾಚಾರ ಆರೋಪಿಯನ್ನು ಕೊಂದ ಸಂತ್ರಸ್ತೆಯ ತಂದೆ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ 35 ವರ್ಷದ ಆರೋಪಿಯನ್ನು ಸಂತ್ರಸ್ತ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಕೊಲೆ ಮಾಡಿ, ನಂತರ ಪೊಲೀಸ್​ ಠಾಣೆಗೆ ಬಂದು ಶರಣಾಗಿರುವ ಘಟನೆ ಇತ್ತೀಚೆಗೆ ಒಡಿಶಾದ ಕಂಧಮಾಲ್​ ಜಿಲ್ಲೆಯಲ್ಲಿ ನಡೆದಿತ್ತು. ಘಟನೆಯಿಂದ ಆಕ್ರೋಶಗೊಂಡ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ದೊಣ್ಣೆಯಿಂದ ಆರೋಪಿಗೆ ಹೊಡೆದು ಸ್ಥಳದಲ್ಲೇ ಕೊಲೆ ಮಾಡಿದ್ದರು.

ಇದನ್ನೂ ಓದಿ : Bidar crime: ಪುಟ್ಟ ಮಗಳ ಮೇಲೆ ತಂದೆಯಿಂದ ಅತ್ಯಾಚಾರ; ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.