ETV Bharat / state

ಕೆಎಸ್‌ಎಚ್‌ಡಿಸಿಎಲ್‌ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಪಾಸ್‌ಪೋರ್ಟ್ ಜಪ್ತಿ

author img

By

Published : Nov 18, 2022, 12:08 PM IST

ಕೆಎಸ್‌ಎಚ್‌ಡಿಸಿಎಲ್‌ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಯವರ ಪಾಸ್​ಪೋರ್ಟ್​ನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ವಶಪಡಿಸಿಕೊಂಡಿದೆ.

Raghavendra Shetty passport confiscated
ಕೆಎಸ್‌ಎಚ್‌ಡಿಸಿಎಲ್‌ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಪಾಸ್‌ಪೋರ್ಟ್ ಜಪ್ತಿ

ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರ ಪಾಸ್​ಪೋರ್ಟ್​ನ್ನು ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ವಶಪಡಿಸಿಕೊಂಡಿದೆ.

ರಾಘವೇಂದ್ರ ಶೆಟ್ಟಿ ಅವರ ವಿರುದ್ಧ ಹಲವು ಪ್ರಕರಣಗಳಿದ್ದು, ಅವರ ಪಾಸ್‌ಪೋರ್ಟ್ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ರೂಪಾ ಡಿ ಮೌದ್ಗಿಲ್‌ ಅವರು ಪ್ರಾದೇಶಿಕ ಪಾಸ್‌ಪೋರ್ಟ್​ ಕಚೇರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ನ.17ರಂದು ಶೆಟ್ಟಿಯವರ ಪಾಸ್‌ಪೋರ್ಟ್‌ ವಶಕ್ಕೆ ಪಡೆಯಲಾಗಿದೆ.

ಕೆಎಸ್‌ಎಚ್‌ಡಿಸಿಎಲ್‌ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿಯವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ರಾಘವೇಂದ್ರ ಶೆಟ್ಟಿಯವರ ಡೈರೆಕ್ಟರ್‌ ಐಡೆಂಟಿಫಿಕೇಶನ್‌ ನಂಬರ್‌ ಅನರ್ಹವಾಗಿದ್ದರೂ ಈ ವಿಚಾರವನ್ನು ಮುಚ್ಚಿಟ್ಟು ನಿಗಮದ ಅಧ್ಯಕ್ಷರಾಗಿ ಮುಂದುವರೆದು ಲಕ್ಷಾಂತರ ರೂಪಾಯಿ ವೇತನ ಭತ್ಯೆ ಪಡೆದ ಆರೋಪವೂ ಕೇಳಿ ಬಂದಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಆಧಾರ್‌, ಪಾನ್‌ ಕಾರ್ಡ್‌, ಪಾಸ್‌ಪೋರ್ಟ್ ಎಲ್ಲವೂ ಅಕ್ರಮ: ಬೆಂಗಳೂರಿನಲ್ಲಿ ನೇಪಾಳಿ ಪ್ರಜೆ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.