ETV Bharat / state

ನರೇಗಾ ಕೂಲಿ ವಿಳಂಬ ಆಕ್ಷೇಪಿಸಿ PIL : ಅರ್ಜಿ ವಜಾಗೊಳಿಸಿದ ಹೈಕೋರ್ಟ್

author img

By

Published : Nov 13, 2021, 5:19 PM IST

ನರೇಗಾ (nrega) ಅಡಿಯಲ್ಲಿ ದುಡಿಯುವ ಕಾರ್ಮಿಕರಿಗೆ ಕೂಲಿ ಪಾವತಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ..

public-interest-litigation-on-nrega-dismissed-in-high-court
ನರೇಗಾ ಕೂಲಿ ವಿಳಂಬ ಆಕ್ಷೇಪಿಸಿ PIL : ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು : ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (Mahatma Gandhi National Employment Guarantee Scheme) (ನರೇಗಾ) ಅಡಿಯಲ್ಲಿ ದುಡಿಯುವ ಕಾರ್ಮಿಕರಿಗೆ ಕೂಲಿ ಪಾವತಿಸಲು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(Public interest litigation) ಹೈಕೋರ್ಟ್ (High court) ವಜಾಗೊಳಿಸಿದೆ.

ಈ ವಿಚಾರವಾಗಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆ (nrega) ಉತ್ತಮವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. 2019-20ನೇ ಸಾಲಿನಲ್ಲಿ ಶೇ.95ರಷ್ಟು, 2020-21ನೇ ಸಾಲಿನಲ್ಲಿ ಶೇ.97ರಷ್ಟು ವೇತನ ಪಾವತಿಸಲಾಗಿದೆ. ವೇತನ ಪಾವತಿ (nrega wages) ವಿಳಂಬವಾದರೆ ಅದಕ್ಕೆ ದೂರು ಕೊಡುವ ವ್ಯವಸ್ಥೆ ಸಹ ಇದೆ ಎಂದು ನ್ಯಾಯಾಲಯ (High court)ದ ಗಮನಕ್ಕೆ ತಂದರು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೆಲಸ ಮುಗಿದ ವಾರದಲ್ಲಿ ವೇತನ ಕೊಡುವುದು ಕಡ್ಡಾಯ. ಆದರೆ, ರಾಜ್ಯದಲ್ಲಿ ವೇತನ ಪಾವತಿಯಲ್ಲಿ 6ರಿಂದ 8 ತಿಂಗಳು ವಿಳಂಬವಾಗುತ್ತಿದೆ. ಸರ್ಕಾರದ ಪರ ವಕೀಲರು ಹೇಳುತ್ತಿರುವುದು ಒಟ್ಟು ವೇತನ ಪಾವತಿ ಪ್ರಮಾಣ. ಆದರೆ, ಕಾರ್ಮಿಕರಿಗೆ ವೇತನ ನೀಡುವಲ್ಲಿ ವಿಳಂಬವಾಗುತ್ತಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠ, ವೇತನ ನೀಡಲು ವಿಳಂಬವಾದಲ್ಲಿ ದೂರು ನೀಡುವ ವ್ಯವಸ್ಥೆ ಇದೆ ಎಂದು ಸರ್ಕಾರದ ವಕೀಲರು ಹೇಳಿದ್ದಾರೆ. ಯಾರಿಗಾದರೂ ವೈಯಕ್ತಿಕವಾಗಿ ತೊಂದರೆ ಆದಲ್ಲಿ ಅವರು ದೂರು ನೀಡಬಹುದು ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public interest litigation) ವಜಾಗೊಳಿಸಿ ಆದೇಶಿಸಿತು.

ಇದನ್ನೂ ಓದಿ: ಪುನೀತ್ ಸ್ಫೂರ್ತಿ: ದೇಹದಾನದ ವಾಗ್ದಾನ ಮಾಡಿದ್ರು ಕಾಫಿ ನಾಡಿನ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.