ETV Bharat / state

ಪ್ರಿಯಾಂಕ್ ಈ ಮೊದಲು ಬಿಡುಗಡೆ ಮಾಡಿದ್ದ ಆಡಿಯೋಗೆ  ಸ್ಪಷ್ಟನೆ ಕೊಟ್ಟಿಲ್ಲ: ಸಿಎಂ ಬೊಮ್ಮಾಯಿ

author img

By

Published : Dec 17, 2022, 6:18 PM IST

ಪಿಎಸ್​ಐ ಪರೀಕ್ಷೆ ನೇಮಕಾತಿ ಹಗರಣ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಪ್ರಿಯಾಂಕ್​ ಖರ್ಗೆ ಸುದ್ದಿಗೋಷ್ಠಿ ನಡೆಸಿ ಆಡಿಯೋ ಬಿಡುಗಡೆ ಮಾಡಿದ್ದಾರೆ.

CMBOMMAYI_BYTE
ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಬೆಂಗಳೂರು: ಪ್ರಿಯಾಂಕ್ ಖರ್ಗೆ ಈ ಮೊದಲು ಬಿಡುಗಡೆ ಮಾಡಿದ್ದ ಆಡಿಯೊಗೇ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ. ಈಗ ಯಾವ ಆಡಿಯೋ ಬಿಡುಗಡೆ ಮಾಡಿದ್ದಾರೋ ಗೊತ್ತಿಲ್ಲ ಎಂದು ಸಿಎಂ ಬೊಮ್ಮಾಯಿ‌ ತಿರುಗೇಟು ನೀಡಿದರು.

ಪ್ರಿಯಾಂಕ್ ಖರ್ಗೆ ಪಿಎಸ್​ಐ ಪರೀಕ್ಷೆ ನೇಮಕಾತಿ ಹಗರಣ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆಡಿಯೋ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ‌, ಈಗ ಅವರು ಯಾವ ಆಡಿಯೋ ಬಿಡುಗಡೆ ಮಾಡಿದ್ದಾರೋ ಗೊತ್ತಿಲ್ಲ. ಏನೇ ಆಡಿಯೋ ಇದ್ರೂ ಅದು ತನಿಖೆಗೆ ಒಳಪಡುತ್ತದೆ. ಆ ಆಡಿಯೋ ಸರಿ ಇದೆಯೋ ತಪ್ಪಿದ್ಯೋ ಎಂಬುದು ತನಿಖೆಯಲ್ಲಿ ಗೊತ್ತಾಗುತ್ತದೆ ಎಂದರು.

ಹಿಂದೆಯೂ ಪ್ರಿಯಾಂಕ್ ಖರ್ಗೆ ಅವರೇ ಆಡಿಯೋ ಬಿಡುಗಡೆ ಮಾಡಿದ್ದರು. ಅದರ ಬಗ್ಗೆಯೇ ಅವರು ಸ್ಪಷ್ಟನೆ ನೀಡಿಲ್ಲ. ಇನ್ನು ನಾನು ಆ ಹೊಸ ಆಡಿಯೋ ಬಗ್ಗೆ ಕೇಳಿಲ್ಲ. ಕೇಳಿದ ಬಳಿಕ ಮಾತನಾಡ್ತೀನಿ ಎಂದರು.

ಇದನ್ನೂ ಓದಿ: ಸಭಾಪತಿ ಅಭ್ಯರ್ಥಿ ಆಯ್ಕೆ ವಿಚಾರ: ನೀವು ಅಭ್ಯರ್ಥಿಗಳಾಗಿದ್ದೀರಿ, ಬಿಜೆಪಿಯಿಂದ ಬಸವರಾಜ ಹೊರಟ್ಟಿಗೆ ಮಾಹಿತಿ ಸಂದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.