ETV Bharat / state

ಗೃಹ ಸಚಿವ ಆರಗ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

author img

By

Published : Dec 16, 2022, 8:18 PM IST

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕುಕ್ಕರ್ ಬಾಂಬ್ ಸ್ಫೋಟ ವಿಚಾರವಾಗಿ ಗೃಹ ಸಚಿವರ ವಿರುದ್ದ ಕಿಡಿಕಾಡಿದರು.

Ex minister Priyank Kharge
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಗೃಹ ಸಚಿವರು ಅವರ ಬೆನ್ನನ್ನು ಅವರೇ ಚಪ್ಪರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರುವಾರಿ ಶಂಕಿತ ಉಗ್ರ ಶಾರಿಕ್ ಆರಗ ಜ್ಞಾನೇಂದ್ರ ಅವರ ತಾಲ್ಲೂಕಿನಲ್ಲೇ ಬಾಂಬ್ ಸ್ಫೋಟದ ತರಬೇತಿ ನಡೆಸಿದ್ದ. ಹಾಗಾದರೆ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಎಂದು ಹೇಳಿದರು.

ಬಿಜೆಪಿಯವರು ಯಾವುದೋ ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಾಗ ಇಂಥವೆಲ್ಲ ಬೆಳಕಿಗೆ ಬರುತ್ತವೆ. ಬಹಳ ತರಾತುರಿಯಲ್ಲಿ ತನಿಖೆ ಮಾಡದೆಯೇ ಇದು ಭಯೋತ್ಪಾದನಾ ಕೃತ್ಯ ಎಂದು ಹೇಗೆ ಘೋಷಣೆ ಮಾಡುತ್ತಾರೆ ಅಂತಾ ನಮ್ಮ ಅಧ್ಯಕ್ಷರು ಕೇಳಿದ್ದಾರೆ ಎಂದು ಪರೋಕ್ಷವಾಗಿ ಡಿಕೆಶಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಪರೇಶ್ ಮೆಸ್ತಾ ಸಾವು ಪ್ರಕರಣದ ಬಗ್ಗೆ ಸಿಬಿಐ ರಿಪೋರ್ಟ್ ಬಂದಿದೆ. ಏಕೆ ಅದರ ಬಗ್ಗೆ ಇವರು ಮಾತಾಡ್ತಾ ಇಲ್ಲ?. ಗೃಹ ಸಚಿವರು ಅಸಮರ್ಥರು ಅಂತ ಅವರ ಶಾಸಕರೇ ಹೇಳಿದ್ದಾರೆ ಎಂದು ಗುಡುಗಿದರು.

ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಬೆಂಕಿ ಹೆಚ್ಚಿದ್ದು ಕೂಡ ಕಾಂಗ್ರೆಸ್ ವೈಫಲ್ಯವೇ?. ನಮ್ಮ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದಾಗಲೂ ಕೂಡ ಕಾಂಗ್ರೆಸ್ ಮೇಲೆ ಗೂಬೆ ಕೂರಿಸ್ತೀರಾ. ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅನ್ನೋದಾದರೆ ಯಾಕೆ ಗುಪ್ತಚರ ಇಲಾಖೆಯ ತಪ್ಪಿನ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಇವರ ಪಕ್ಷದವರೇ ಶಾಸಕರ ಭವನದಲ್ಲಿ ಲಂಚ ತೆಗೆದುಕೊಳ್ಳುವುದರ ಬಗ್ಗೆ ಹೇಳುತ್ತಾರೆ ಎಂದರು. ನಾವೂ ಜಾತಿ, ಧರ್ಮದ ಭಾವನೆಗಳ ಆಧಾರದ ಮೇಲೆ ಚುನಾವಣೆಗೆ ಹೋಗಲ್ಲ. ಮತ್ತೊಂದು ಕಡೆಯಲ್ಲಿ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವುದಕ್ಕೆ ಸ್ವತಃ ಬಿಜೆಪಿಯವರೇ ಹೊರಟಿದ್ದು ಅವರನ್ನು ಈಗಾಗಲೇ ಬಿಜೆಪಿಯವರು ಬಿಟ್ಟುಬಿಟ್ಟಿದ್ದಾರೆ. ಯಾವ ಕಾರ್ಯಕ್ರಮಕ್ಕೂ ಕೂಡ ಆಹ್ವಾನ ಕೊಡುತ್ತಿಲ್ಲ. ಫ್ರೀ ಫಾರ್ ಆಲ್ ಅನ್ನೋ ತರಹ ಆಗಿದೆ ಬಿಜೆಪಿ ಪಕ್ಷ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಲಬುರಗಿ: ಬಿಜೆಪಿ ವಿರುದ್ಧ ಪ್ರಿಯಾಂಕ್​ ಖರ್ಗೆ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.