ETV Bharat / state

ಏರೋ ಇಂಡಿಯಾ 2021: ಕರ್ನಾಟಕ, ಸಿಎಂ ಯಡಿಯೂರಪ್ಪ ಪ್ರಶಂಸಿದ ರಾಷ್ಟ್ರಪತಿ ಕೋವಿಂದ್

author img

By

Published : Feb 5, 2021, 4:38 PM IST

Updated : Feb 5, 2021, 5:55 PM IST

ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಏರ್ ಶೋದ ಗೌರವವನ್ನು ಎತ್ತಿ ಹಿಡಿಯಲಾಗಿದೆ. 530 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಹೈಬ್ರಿಡ್ ಫಾರ್ಮ್ಯಾಟ್​ನಲ್ಲಿ ಆಗಿರುವ ಮೊದಲ ಕಾರ್ಯಕ್ರಮ ಇದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಕರ್ನಾಟಕ ಮತ್ತು ಸಿಎಂ ಯಡಿಯೂರಪ್ಪ ಅವರನ್ನು ಪ್ರಶಂಸಿದರು.

President Ramanath Kovind
ಏರೋ ಇಂಡಿಯಾ 2021ರ ಸಮಾರೋಪ ಸಮಾರಂಭ

ಬೆಂಗಳೂರು: ಭೀಮ್ ಫಾರ್ಮೇಶನ್ ಮೂಲಕ ಏರೋ ಇಂಡಿಯಾ 2021ರ ಸಮಾರೋಪ ಸಮಾರಂಭ ಕಾರ್ಯಕ್ರಮ ಆರಂಭಗೊಂಡಿತು. ಭಾರತದಲ್ಲೇ ತಯಾರಾಗಿರುವ 4 ಹೆಲಿಕಾಪ್ಟರ್​ಗಳಿಂದ ಭೀಮ್ ಫಾರ್ಮೇಶನ್ ಮಾಡಲಾಯಿತು.

ಏರೋ ಇಂಡಿಯಾ 2021

ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಮುಖ್ಯ ಅತಿಥಿಯಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು. ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಏರ್ ಶೋದ ಗೌರವವನ್ನು ಎತ್ತಿ ಹಿಡಿಯಲಾಗಿದೆ. 530 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಹೈಬ್ರಿಡ್ ಫಾರ್ಮ್ಯಾಟ್​ನಲ್ಲಿ ಆಗಿರುವ ಮೊದಲ ಕಾರ್ಯಕ್ರಮ ಇದು ಎಂದು ಕರ್ನಾಟಕ ಮತ್ತು ಸಿಎಂ ಯಡಿಯೂರಪ್ಪ ಅವರನ್ನು ಪ್ರಶಂಸಿದರು.

48 ಸಾವಿರ ಕೋಟಿ ರೂಪಾಯಿಯ ಆರ್ಡರ್ (ತೇಜಸ್) ಎಚ್​ಎಎಲ್‌ಗೆ ದೊರೆತಿರುವುದು ಸಂತಸ ತಂದಿದೆ. ತಯಾರಕರಾಗಿ ಮತ್ತು ಸ್ವಾವಲಂವನೆಯ ಪ್ರತೀಕವಾಗಿ ಏರ್ ಶೋ ನಡೆದಿದೆ ಎಂದು ಕೋವಿಂದ್ ಹೇಳಿದರು.

ಇದೇ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, 1996 ರಲ್ಲಿ ಏರೋ ಇಂಡಿಯಾ ಆರಂಭವಾಯ್ತು. ಇಷ್ಟು ವರ್ಷಗಳಲ್ಲಿ ಏರ್ ಶೋ ಡಿಫೆನ್ಸ್ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೊಸ ತಂತ್ರಜ್ಞಾನಗಳ ಪರಿಚಯ ಮತ್ತು ವಹಿವಾಟಿಗೆ ಇದೊಂದು ಅತ್ಯುತ್ತಮ ವೇದಿಕೆ. ಇದೊಂದು ಐತಿಹಾಸಿಕ ‌ಕಾರ್ಯಕ್ರಮ, 16 ಸಾವಿರ ಜನ ದೈಹಿಕವಾಗಿ ಮತ್ತು 4.5 ಲಕ್ಷ ಜನ ಆನ್ ಲೈನ್ ಮೂಲಕ ಏರೋ ಇಂಡಿಯಾ ವೀಕ್ಷಿಸಿದ್ದಾರೆ. 19 ರಾಷ್ಟ್ರಗಳ ಸೇನಾ ಮುಖ್ಯಸ್ಥರು ಏರ್ ಶೋನಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.

ಇಂಡೋ ಪೆಸಿಫಿಕ್ ರೀಜನ್​ನಲ್ಲಿ ಶಾಂತಿ ಕಾಪಾಡಲು ಸಾಕಷ್ಟು ಚರ್ಚೆಗಳಾಗಿವೆ. ಅನೇಕ ಸಭೆಗಳು ಆನ್​ಲೈನ್ ಮೂಲಕವೇ ಆಗಿವೆ. ಮುಂದಿನ ಏಳೆಂಟು ವರ್ಷಗಳಲ್ಲಿ ರಕ್ಷಣಾ ವಿಭಾಗದಲ್ಲಿ 130 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಆಲೋಚನೆ ನಮ್ಮ ದೇಶಕ್ಕಿದೆ. ರಾಜ್ಯ ಸರ್ಕಾರ ಮತ್ತು ಸಿಎಂ ಯಡಿಯೂರಪ್ಪಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಧನ್ಯವಾದ

ಆತ್ಮನಿರ್ಭರ ಫಾರ್ಮೇಶನ್ ಜೊತೆಗೆ ರಾಷ್ಟ್ರಗೀತೆ ಮೂಲಕ ಏರ್​ ಶೋ 2021ಕ್ಕೆ ತೆರೆ ಎಳೆಯಲಾಯಿತು.

Last Updated : Feb 5, 2021, 5:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.