ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಧ್ಯೆ ಪರಸ್ಪರ ಬಿತ್ತಿಪತ್ರ ಸಮರ

author img

By

Published : Sep 19, 2022, 9:01 PM IST

ವಿಧಾನಸಭೆಯಲ್ಲಿ ಭಿತ್ತಿಪತ್ರ ಸಮರ
ವಿಧಾನಸಭೆಯಲ್ಲಿ ಭಿತ್ತಿಪತ್ರ ಸಮರ ()

ವಿಧಾನಸಭೆಯಲ್ಲಿ ಅತಿವೃಷ್ಟಿ ಸಂಬಂಧ ಸರ್ಕಾರದ ಉತ್ತರಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು: ವಿಧಾನಸಭೆಯಲ್ಲಿ ಅತಿವೃಷ್ಟಿ ಸಂಬಂಧ ಸರ್ಕಾರದ ಉತ್ತರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು.‌ ಈ ವೇಳೆ, ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಪರಸ್ಪರ ಬಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಅತಿವೃಷ್ಟಿ ಸಂಬಂಧ ಸರ್ಕಾರದ ಉತ್ತರಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಉತ್ತರ ದಾರಿ ತಪ್ಪಿಸುವಂತದ್ದು, ಅತಿವೃಷ್ಟಿ ನಿರ್ವಹಣೆ ಸಂಬಂಧ ಸರ್ಕಾರ ತಪ್ಪು ಮಾಹಿತಿ ನೀಡಿದೆ. ಸರ್ಕಾರಕ್ಕೆ ಮಾನ‌ಮರ್ಯಾದೆ ಇಲ್ಲ.‌ ಈ ಸರ್ಕಾರ 50ರಷ್ಟು ಸರ್ಕಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಶೇ 40ರಷ್ಟು ಸರ್ಕಾರ ಎಂದು ಘೋಷಣೆ ಕೂಗಿದರು. ಶೇ 40ರಷ್ಟು ಕಮಿಷನ್ ಸರ್ಕಾರ ಎಂಬ ಬಿತ್ತಿಪತ್ರ ಹಿಡಿದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಇತ್ತ ಬಿಜೆಪಿ ಸದಸ್ಯರು‌ ಹಾಗೂ ಕಾಂಗ್ರೆಸ್ ಸದಸ್ಯರ‌ ಮಧ್ಯೆ ವಾಕ್ಸಮರ ನಡೆಯಿತು. ಯಾರ ಕಾಲದಲ್ಲಿ ಎಷ್ಟು ತೆರವು ಆಗಿದೆ, ಆಗಿಲ್ಲ ಅಂತ ಪರಸ್ಪರ ಆರೋಪ ಮಾಡಿದರು. 2019 ರವರೆಗೂ1500 ಒತ್ತುವರಿ ತೆರವು ಮಾಡಿಸಿದ್ದೀರ‌ ಅಷ್ಟೇ ಅಂತ ಸಿಎಂ ಟಾಂಗ್ ನೀಡಿದರು.

ರಾಜಕಾಲುವೆ ಒತ್ತುವರಿ ತನಿಖೆ: 2008-12 ರವರೆಗೆ ನೀವು ಅಧಿಕಾರದಲ್ಲಿದ್ದಾಗ ಎಷ್ಟು ತೆರವು ಮಾಡಿದ್ದೀರಾ ಅಂತ ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದೇ ವೇಳೆ, ಸಿಎಂ ದಾಖಲೆ‌ ಪ್ರದರ್ಶಿಸಿ ನಿಮ್ಮ ಕಾಲದಲ್ಲಿ ಆದ ರಾಜಕಾಲುವೆ ಒತ್ತುವರಿಯನ್ನು ತನಿಖೆ ಮಾಡುತ್ತೇವೆ ಎಂದು ಗುಡುಗಿದರು.

ಭಿತ್ತಿಪತ್ರಗಳ ಪ್ರದರ್ಶನ: ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಉಂಟಾಯಿತು. ಅತ್ತ ಕಾಂಗ್ರೆಸ್ ಬಿತ್ತಿಪತ್ರ ಪ್ರದರ್ಶನಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿರುದ್ಧ ಆಡಳಿತ ಪಕ್ಷ ಸದಸ್ಯರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಶಿಕ್ಷಕರ ನೇಮಕಾತಿ ಅಕ್ರಮ, ಸಿದ್ದರಾಮಯ್ಯ ಕಾಲದ ಅಕ್ರಮಗಳ ಕುರಿತ ಭಿತ್ತಿಪತ್ರಗಳ ಪ್ರದರ್ಶನ ಮಾಡಿದರು.

ಅರ್ಕಾವತಿ ರಿ‌ಡೂ ಹಗರಣ, ಸಮಾಜವಾದಿ‌ ಮಜಾವಾದಿ, ಭ್ರಷ್ಟರಾಮಯ್ಯ, ಕೆಪಿಎಸ್​ಸಿ ನೇಮಕಾತಿ‌ ಹಗರಣ, 300 ಕೋಟಿ ರೂ.‌ ಹಗರಣ, ಗುತ್ತಿಗೆದಾರರಿಂದ 2500 ಕೋಟಿ ಲಂಚ ಹಗರಣ ಎಂಬ ಬಿತ್ತಿ ಪತ್ರ ಪ್ರದರ್ಶಿಸಿದರು‌.

ಧಿಕ್ಕಾರ ಘೋಷಣೆ: ಪರಸ್ಪರರ ಸರ್ಕಾರಗಳ ವಿರುದ್ಧ ಸದನದಲ್ಲಿ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಗದ್ದಲದ ಮಧ್ಯೆ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಹಾಗೂ 2020ನೇ ಸಾಲಿನ ಕೈಗಾರಿಕಾ ವಿವಾದಗಳ ತಿದ್ದುಪಡಿ ವಿಧೇಯಕ ಹಿಂಪಡೆಯಲಾಯಿತು.

ಓದಿ: ಪ್ರಶ್ನೆ ಹಾಕಿದ ಶಾಸಕರೇ ಗೈರು : ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.