ETV Bharat / state

ಯುವಕರ ಏಳಿಗೆ, ದೇಶದ ಅಭಿವೃದ್ಧಿಯೇ ಡಬಲ್​ ಎಂಜಿನ ಸರ್ಕಾರದ ಪ್ರಮುಖ ಉದ್ದೇಶ.. ಮೋದಿ ಘೋಷಣೆ

author img

By

Published : Apr 27, 2023, 11:56 AM IST

Updated : Apr 27, 2023, 12:11 PM IST

ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ವರ್ಚ್ಯುವಲ್​ ಮೂಲಕ ಸಂವಾದ​ ನಡೆಸಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭಾಷಣ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ವರ್ಚುಯಲ್​ ಮೂಲಕ ಸಂವಾದ​ ನಡೆಸಿದ್ದಾರೆ. ಈ ವೇಳೆ ಡಬಲ್​ ಎಂಜಿನ ಸರ್ಕಾರದ ಯೋಜನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಯಕರ್ತರು ಕೇಳದ ಪ್ರಶ್ನೆಗೆ ಉತ್ತರಿಸಿದರು.

ಯುವಕರ ಸಬಲೀಕರಣವೇ ನಮ್ಮ ಉದ್ದೇಶ: ಕಾಯಕರ್ತರೊಬ್ಬರು ಡಬಲ್​ ಎಂಜಿನ ಸರ್ಕಾರದ ಮೂಲ ಉದ್ದೇಶ ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಉದ್ದೇಶ ದೇಶದ ಯುವಕರನ್ನು ಬಲಿಷ್ಠಗೊಳಿಸುವುದು, ದೇಶವನ್ನು ಅಭಿವೃದ್ಧಿ ಪಡಿಸುವುದಾಗಿದೆ. ರಾಜ್ಯ ಸೇರಿದಂತೆ ದೇಶ ಅಭಿವೃದ್ದಿ ಹೊಂದಬೇಕಾದರೆ ಡಬಲ್​ ಎಂಜಿನ ಸರ್ಕಾರ ಆಯ್ಕೆ ಮಾಡಬೇಕಾಗಿದೆ. ಏಕೆಂದರೆ ಟ್ರ್ಯಾಕ್ಟರ್​ಗೆ ಕಾರಿನ ಚಕ್ರ ಅಳವಡಿಸಿದರೇ ಹೇಗೆ ಅದು ಅಪಾಘಾತಕ್ಕಿಡಾಗುತ್ತದೋ ಹಾಗೆಯೇ ಬೇರೆ ಪಕ್ಷವನ್ನು ಅಧಿಕಾರಕ್ಕೆ ತರವುದರಿಂದ ಆಗುತ್ತದೆ. ಈ ಹಿನ್ನೆಲೆ ಡಬಲ್​ ಇಂಜಿನ ಸರ್ಕಾರ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಕಾರ್ಯಗಳು ವೇಗಾವಗಿ ಆಗುತ್ತವೆ ಎಂದು ಹೇಳಿದರು.

ಈ ಹಿಂದೆ ಆರೋಗ್ಯ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಇದೀಗ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್​ ಆಡಳಿತದಲ್ಲಿದ್ದಾಗ 1956ರಲ್ಲಿ ದೇಶದಲ್ಲಿ ಮೊದಲ ಏಮ್ಸ್​ ಆಸ್ಪತ್ರೆ ಸ್ಥಾಪನೆ ಮಾಡಲಾಗಿತ್ತು. ಅದಾದನಂತರ ಎರಡನೇ ಏಮ್ಸ್​ ಸ್ಥಾಪನೆ ಮಾಡಲು 50 ರಿಂದ 60 ವರ್ಷಗಳ ಸಮಯ ಬೇಕಾಯಿತು. ಅದರಲ್ಲೂ 2003ರಲ್ಲಿ ಅಟಲ್​ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಏಮ್ಸ್ ಯೋಜನೆ ವೇಗ ಪಡೆದುಕೊಂಡಿತು.

2014ರ ವರೆಗೂ ದೇಶದಲ್ಲಿ ಏಮ್ಸ್​ ಆಸ್ಪತ್ರೆ ಸಂಖ್ಯೆ 7 ಮಾತ್ರ ಇದ್ದವು. 2014ರಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಏಮ್​ ಸಂಖ್ಯೆ 3 ಪಟ್ಟು ಹೆಚ್ಚಿಸಿದೆ. ಪ್ರಸ್ತುತ ದೇಶದಲ್ಲಿ 20 ಏಮ್ಸ್​​ಗಳನ್ನ ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಇನ್ನೂ 3 ಏಮ್ಸ್​ ನಿರ್ಮಾಣ ಕಾರ್ಯ ವೇಗವಾಗಿ ಸಾಗಿದೆ. ಈ ಬಗ್ಗೆ ಕಾಂಗ್ರೆಸ್​ಗೆ ಪ್ರಶ್ನಿಸಿದರೆ ಉತ್ತರ ಕೊಡಲ್ಲ. ಅಲ್ಲದೇ ಮೆಡಿಕಲ್​ ಕಾಲೇಜಗಳ ಸಂಖ್ಯೆಯೂ ವಿರಳವಾಗಿತ್ತು. ಅವೆಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಬಗೆ ಹರಿಸುತ್ತಿದ್ದೇವೆ, ಸ್ವಾತಂತ್ರ ಸಿಕ್ಕಾಗಿನಿಂದಲೂ 2014ರ ವರೆಗೆ ದೇಶದಲ್ಲಿ ಮೆಡಿಕಲ್​ ಕಾಲೇಜುಗಳ ಸಂಖ್ಯೆ 380 ಇದ್ದವು. ನಾವು ಅಧಿಕಾರಕ್ಕೆ ಬಂದ ನಂತರ ಕಳೆದ 9 ವರ್ಷಗಳಲ್ಲಿ ಮೆಡಿಕಲ್​ ಕಾಲೇಜುಗಳ ಸಂಖ್ಯೆ 600ಕ್ಕೂ ಹೆಚ್ಚಾಗಿವೆ. ಇದು ಡಬಲ್​ ಎಂಜಿನ್​ ಸಕಾರ್ರದ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಮೋದಿ ಬಣ್ಣಿಸಿದರು.

ಅಲ್ಲದೇ ಕೆಲವು ರಾಜ್ಯಗಳು ಕೇಂದ್ರದ ಯೋಜನೆಗಳ ಪಡೆದುಕೊಂಡು ಬಳಿಕ ಆ ಯೋಜನೆಯ ಹೆಸರನ್ನೇ ಬದಲಿಸುತ್ತವೆ. ಕಾರಣ ಬಿಜೆಪಿ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ಹಾಗೇ ಮಾಡುತ್ತಿವೆ ಎಂದು ಇದೇ ವೇಳೆ ಮೋದಿ ಹೇಳಿದರು.

ನಂತರ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ನ ವ್ಯಾರಂಟಿ ಎಂದೋ ಎಕ್ಸಪೈರ್​ ಆಗಿದೆ. ಎಕ್ಸ್​ಪೈರ್​ ಆದ ಪಕ್ಷದ ಗ್ಯಾರಂಟಿ ಯೋಜನೆಯ ಪ್ರಯೋಜನವಾದರೂ ಏನು ಎಂದು ಮೋದಿ ಮರು ಪ್ರಶ್ನೆ ಹಾಕಿದರು. ಇಂದು ಕರ್ನಾಟಕದಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಿದ್ದಾವಾಗಿದೆ. ಶಿವಮೊಗ್ಗದಲ್ಲೂ ವಿಮಾನ ನಿಲ್ದಾಣ ಆರಂಭಗೊಂಡಿದೆ, ತುಮಕೂರಿನಲ್ಲಿ ಹೆಚ್​ಎಎಲ್​ ಘಟಕವನ್ನು ಸ್ಥಾಪಿಸಲಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಯೋಜನೆಗಳನ್ನು ಬಿಜೆಪಿ ಯಶಸ್ವಿಗೊಳಿಸಿದೆ. ಡಬಲ್​ ಎಂಜಿನ ಸರ್ಕಾರ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಕರ್ನಾಟಕದ ಚಿತ್ರಣವನ್ನು ​ಬದಲಿಸಿದೆ ಎಂದು ರಾಜ್ಯದ ಜನರಲ್ಲಿ ಮೋದಿ ವಿಶ್ವಾಸ ತುಂಬಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರ ಸಂವಾದವನ್ನು ರಾಜ್ಯದ ಸುಮಾರು 50 ಲಕ್ಷ ಕಾರ್ಯಕರ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಸಂವಾದವನ್ನು 50 ಲಕ್ಷ ಜನರಿಗೆ ತಲುಪಿಸುವ ಮೂಲಕ ರಾಜ್ಯದ ಮೂಲೆ ಮೂಲೆಯಲ್ಲೂ ಮೋದಿ ಅಲೆ ಪಸರಿಸುವಂತೆ ಮಾಡುವುದೇ ರಾಜ್ಯ ಬಿಜೆಪಿ ಉದ್ದೇಶವಾಗಿತ್ತು.

ಇದನ್ನೂ ಓದಿ: Karnataka Election: ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರಿಂದ ಪೊಲೀಸರಿಗೆ ದೂರು

Last Updated : Apr 27, 2023, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.