ETV Bharat / state

ಮಕ್ಕಳ ಪಾಲನೆಗೆ ನಿರ್ದೇಶನ ಕೋರಿ ಸ್ವಯಂಪ್ರೇರಿತ ಅರ್ಜಿ: ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್

author img

By ETV Bharat Karnataka Team

Published : Nov 7, 2023, 10:09 AM IST

ಮಕ್ಕಳ ಪಾಲನೆಗೆ ನಿರ್ದೇಶನ ಕೋರಿ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.

ಹೈಕೋರ್ಟ್
High Court

ಬೆಂಗಳೂರು: ಮಕ್ಕಳ ಪಾಲನೆಗೆ ಸಂಬಂಧಿಸಿದಂತೆ ಮಾನಸಿಕವಾಗಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಕೋರಿ ದಾಖಲಾಗಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

2023ರ ಅಕ್ಟೋಬರ್ 5ರಂದು ಅಪ್ರಾಪ್ತ ಬಾಲಕನೊಬ್ಬನ ಪೋಷಕರು ಅವರ ತಾಯಿ, ಅಜ್ಜಿಯ ನಡುವಿನ ಮಕ್ಕಳ ಪಾಲನೆಗೆ ಸಂಬಂಧಿಸಿದ ಉಂಟಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ನಿರ್ದೇಶನ ನೀಡಿದ್ದರು.

ಈ ನಿರ್ದೇಶನದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ.
ಮಕ್ಕಳ ಪಾಲನೆಯಲ್ಲಿ ದೇಶದ ನ್ಯಾಯಾಂಗ ಮತ್ತು ಕಾನೂನು ಚೌಕಟ್ಟ ಎದುರಿಸುತ್ತಿರುವ ಒಂದು ಸಂಕೀರ್ಣ ಸಮಸ್ಯೆಯಾಗಿದೆ. ಅಲ್ಲದೆ, ಈ ರೀತಿಯ ಸಮಸ್ಯೆಗಳನ್ನು ಎದುರಿಸುವಾಗಿ ಮನೋ ವಿಜ್ಞಾನಿಗಳನ್ನು ಒಳಗೊಳ್ಳವಂತೆ ಮಾರ್ಗಸೂಚಿಗಳನ್ನು ರಚಿಸಬೇಕಾಗಿದೆ.
ದಂಪತಿಯ ನಡುವೆ ಎದುರಾಗುವ ಸಮಸ್ಯೆಗಳಿಗೆ ಮಾನಸಿಕ ಸಮಸ್ಯೆಗಳೂ ಇರಬಹುದಾಗಿದೆ. ಹೀಗಾಗಿ ಈ ರೀತಿಯ ಪ್ರಕರಣಗಳಲ್ಲಿ ಮಗುವಿನ ಪಾಲನೆಗೆ ಒಳಗೊಳ್ಳುವ ವಿಚಾರಗಳಲ್ಲಿ ಕೇವಲ ತಾಂತ್ರಿಕ ಹಾಗೂ ಕಾನೂನಾತ್ಮ ವಿಚಾರಗಳೊಂದಿಗೆ ಮಾನಸಿಕ ಅಂಶಗಳನ್ನೊಳಗೊಂಡು ನೋಡಬೇಕಾಗುತ್ತೆ.

ಈ ರೀತಿಯ ಪರಿಸ್ಥಿತಿಗಳನ್ನು ಎದುರಿಸುವುದು ಮಕ್ಕಳ ಹಿತಾಸಕ್ತಿಯನ್ನು ರಕ್ಷಣೆ ಮಾಡುವುದು ಮತ್ತು ಮನಃಶಾಸ್ತ್ರಜ್ಞರ ಸಹಕಾರವನ್ನು ಪಡೆಯುವುದು ಅತ್ಯಗತ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ವೈವಾಹಿಕ ವಿವಾದಗಳಲ್ಲಿ ಮಗುವಿನ ಪಾಲನೆಗೆ ಸಂಬಂಧಿಸಿದಂತೆ ಹೆಚ್ಚು ತೊಂದರೆಗೆ ಸಿಲುಕುವುದು ಮಗುವೇ ಆಗಿರುತ್ತದೆ. ಅಲ್ಲದೆ, ವಿಚ್ಛೇದನ ಪ್ರಕರಣಗಳಲ್ಲಿ ಪೋಷಕರು ಮಕ್ಕಳ ಪಾಲನೆ ಮತ್ತು ತಮ್ಮ ವಶಕ್ಕೆ ಪಡೆದುಕೊಳ್ಳುವುದಕ್ಕೆ ಹೋರಾಡುತ್ತಾರೆ. ತಮ್ಮ ಮಕ್ಕಳನ್ನು ಪೋಷಣೆಗೆ ನಾವೇ ಸೂಕ್ತರು ಎಂದು ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ.

ಮಗುವಿನ ಅಜ್ಜಿಯರು ಹಾಗೂ ಇತರೆ ಕುಟುಂಬ ಸದಸ್ಯರು ಇದೇ ರೀತಿಯಲ್ಲಿ ಮನವೊಲಿಸುವ ತಂತ್ರಗಳನ್ನು ಬಳಸಿಕೊಂಡು ನ್ಯಾಯಾಂಗದ ಮೇಲೆ ಪ್ರಭಾವ ಬೀರಿ ಪ್ರಕರಣದ ತೀರ್ಪು ದುರ್ಬಲಗೊಳ್ಳುವಂತೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಗುವಿನ ಮನಸ್ಸನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಅದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ರಚನೆ ಮಾಡುವುದು ಅತ್ಯಗತ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಕುರಿತಂತೆ ನ್ಯಾಯಾಂಗ ಕ್ಷೇತ್ರ ಹಲವು ಕಾನೂನುಗಳಲ್ಲಿ ನಿಯಮಗಳಿದ್ದರೂ, ಮನೋ ವಿಜ್ಞಾನ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವುದಿಲ್ಲ. ಹೀಗಾಗಿ ಮಾನಸಿಕ ತಜ್ಞರ ಅಭಿಪ್ರಾಯಗಳು ಮುಖ್ಯವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ನೆರವಾಗಲು ಹಿರಿಯ ವಕೀಲ ಹಾಗೂ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರನ್ನು ಅಮೈಕಾಸ್ ಕ್ಯೂರಿಯನ್ನಾಗಿ ನೇಮಕ ಮಾಡಲು ಆದೇಶಿಸಿದೆ.

ಇದನ್ನೂ ಓದಿ: ಪಂಚ ಗ್ಯಾರಂಟಿ ಹೊರೆ, ಬರದ ಬರೆ ಮಧ್ಯೆ ಆರು ತಿಂಗಳ ರಾಜ್ಯದ ಆರ್ಥಿಕ ಸ್ಥಿತಿಗತಿ ಹೇಗಿದೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.