ETV Bharat / state

ಪೊಲೀಸರು ತಡೆಯುತ್ತಿಲ್ಲವೆಂದು ಸಂಚಾರ ರಸ್ತೆ ನಿಯಮ ಉಲ್ಲಂಘಿಸಿದ್ರೆ ಜೋಕೆ! ಐಟಿಎಂಎಸ್ ಮೂಲಕ ಬೀಳುತ್ತೆ ದಂಡ

author img

By

Published : Apr 20, 2023, 12:49 PM IST

Updated : Apr 20, 2023, 1:19 PM IST

ಚುನಾವಣೆ ನಂತರ ಮನೆ ಮನೆಗೆ ತೆರಳಿ ದಂಡ ಸಂಗ್ರಹ ಮಾಡಲು ಸಂಚಾರಿ ವಿಭಾಗದ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Penalties through ITMS technology
ಪೊಲೀಸರು ತಡೆಯುತ್ತಿಲ್ಲವೆಂದು ಸಂಚಾರ ರಸ್ತೆ ನಿಯಮ ಉಲ್ಲಂಘಿಸಿದ್ರೆ ಜೋಕೆ

ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ. ಸಲೀಂ

ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನು ತಡೆಯುತ್ತಿಲ್ಲ ಎಂದು ಸಂಚಾರ ನಿಯಮಗಳನ್ನು ಉಲ್ಲಂಘಿಸಬಹುದು ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ರಸ್ತೆಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸುವುದನ್ನು ಕಡಿಮೆ ಮಾಡಿರುವ ಬೆಂಗಳೂರು ಸಂಚಾರಿ ಪೊಲೀಸರು ಐಟಿಎಂಎಸ್ (ಇಂಟಲಿಜೆನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ಮೂಲಕ ದಂಡ ವಿಧಿಸುತ್ತಿದ್ದಾರೆ.

ಎರಡು ತಿಂಗಳಲ್ಲಿ ವಿಧಿಸಿದ ದಂಡ ಎಷ್ಟು?: ಕಳೆದ ವರ್ಷ ಡಿಸೆಂಬರ್‌ನಲ್ಲಿ ಐಟಿಎಂಎಸ್ ಕ್ಯಾಮೆರಾ ವ್ಯವಸ್ಥೆಯನ್ನು ಆರಂಭಿಸಿರುವ ಸಂಚಾರಿ ಪೊಲೀಸರು, ಈ ವರ್ಷದ ಆರಂಭದಿಂದಲೇ ವಾಹನಗಳನ್ನು ತಡೆದು ದಂಡ ವಿಧಿಸುವುದನ್ನು ಕಡಿಮೆ ಮಾಡಿದ್ದಾರೆ. ಐಟಿಎಂಎಸ್ ಮೂಲಕ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ, ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಕಳೆದ ಮೂರೂವರೆ ತಿಂಗಳಿನ ಅವಧಿಯಲ್ಲಿ ಬರೋಬ್ಬರಿ 19,04,227 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಆ ಪೈಕಿ 18 ಲಕ್ಷ ಪ್ರಕರಣಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಲಾಗಿದೆ. ಈಗಾಗಲೇ ಹೆಚ್ಚು ಪ್ರಕರಣಗಳು ದಾಖಲಾಗಿರುವ ವಾಹನಗಳ ಮಾಲೀಕರಿಗೆ ಸಂಚಾರಿ ಪೊಲೀಸರು ನೊಟೀಸ್ ರವಾನಿಸಿದ್ದಾರೆ. ಚುನಾವಣೆ ಮುಗಿದ ಬಳಿಕ ಮನೆ ಮನೆಗೆ ತೆರಳಿ ದಂಡ ವಸೂಲಿ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಐಟಿಎಂಎಸ್ ತಂತ್ರಜ್ಞಾನದ ಸದ್ಬಳಕೆಯಿಂದ ಸಂಚಾರಿ ಪೊಲೀಸರು ನಗರದಲ್ಲಿನ ವಾಹನಗಳ ನಿಯಂತ್ರಣ, ಸಂಚಾರ ದಟ್ಟಣೆಯನ್ನು ತಡೆಗಟ್ಟುವ ಕಡೆ ಗಮನಹರಿಸಲು ಅನುಕೂಲವಾಗುತ್ತಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ. ಸಲೀಂ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ, 6 ಕೋಟಿ ದಂಡ ಸಂಗ್ರಹ : ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಮಾಹಿತಿ

Last Updated :Apr 20, 2023, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.