ETV Bharat / state

ಕೋವಿಡ್ ಲಸಿಕಾ ಅಭಿಯಾನ ಶುರುವಾಗಿ ಇಂದಿಗೆ ಒಂದು ವರ್ಷ.. 9.14 ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ..

author img

By

Published : Jan 16, 2022, 3:14 PM IST

ಕಳೆದ 365 ದಿನಗಳಲ್ಲಿ ಕರ್ನಾಟಕದಲ್ಲಿ ಒಟ್ಟು 9.14 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ. ಸರಾಸರಿ ಪ್ರತಿ ದಿನ 2.5 ಲಕ್ಷ ಡೋಸ್ ವಿತರಿಸಲಾಗಿದೆ..

covid-vaccination-campaign
ಕೋವಿಡ್ ಲಸಿಕಾ ಅಭಿಯಾನ

ಬೆಂಗಳೂರು : ನೋವೆಲ್ ಕೊರೊನಾ ವೈರಸ್ ಕಾಲಿಟ್ಟು ವರ್ಷಗಳು ಕಳೆದು ಹೋಯ್ತು. ಆದರೆ, ಕೊರೊನಾ ವೈರಸ್​ಗೆ ಇಂದಿಗೂ ಯಾವುದೇ ಪ್ರತ್ಯೇಕ ಔಷಧಿ ಕಂಡು ಹಿಡಿದಿಲ್ಲ. ಬದಲಿಗೆ ಸೋಂಕಿತನ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತಿದೆ.

ಅಂದಹಾಗೇ, ಕೊರೊನಾದಿಂದಾಗುವ ತೀವ್ರತೆಯನ್ನ ಕಡಿಮೆ ಮಾಡಲು ಬಂದಿದ್ದೆ ಕೋವಿಡ್ ಲಸಿಕೆ. 2ನೇ ಅಲೆಯ ಆರ್ಭಟದ ಮಧ್ಯೆ ರಾಮಬಾಣವಾಗಿ ಬಂದಿದ್ದು ಕೋವಿಡ್ ವ್ಯಾಕ್ಸಿನ್‌. ಮೊದ್‌ ಮೊದಲು ಲಸಿಕೆ ಕುರಿತು ಜನರು ಅನುಮಾನಿಸಿದ್ದರು. ನಂತರದ ದಿನಗಳಲ್ಲಿ ಜನ ಲಸಿಕೆ ಪಡೆಯಲು ಮುಗಿಬಿದ್ದಾಗ ಕೊರತೆಯ ಸ್ಥಿತಿ ನಿರ್ಮಾಣವಾಯ್ತು.

2021ರ ಜನವರಿ 16ರಂದು ದೇಶದ್ಯಾಂತ ದೊಡ್ಡ ಲಸಿಕಾ ಅಭಿಯಾನವೇ ಶುರುವಾಯ್ತು. ಕೊರೊನಾ ಲಸಿಕೆ ವಿತರಣೆಗೂ ಮುನ್ನ ಎಲ್ಲಾ ಜಿಲ್ಲೆಗಳಿಗೂ ಸಿರಿಂಜುಗಳ ವಿತರಣೆ ಕಾರ್ಯ ಆರಂಭಿಸಿದ ಸರ್ಕಾರ, ಜನವರಿ 8ರಂದು ಎಲ್ಲ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಿತು. ಇದರಲ್ಲಿ ಯಶಸ್ವಿಯಾಗಿ ಜನವರಿ 16ರಂದು ಲಸೀಕರಣಕ್ಕೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಆಗಿನ ಸಿಎಂ ಆಗಿದ್ದ ಯಡಿಯೂರಪ್ಪ ಚಾಲನೆ ನೀಡಿದ್ದರು.

ಈ ಕುರಿತು ಟ್ವೀಟ್​​ ಮೂಲಕ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಸುಧಾಕರ್, ಒಂದು ವರ್ಷದ ಹಿಂದೆ ಈ ದಿನದಂದು ಶತಕೋಟಿ ಭಾರತೀಯರನ್ನು ಸಾಂಕ್ರಾಮಿಕದಿಂದ ರಕ್ಷಿಸಲು ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಳೆದ 365 ದಿನಗಳಲ್ಲಿ ಕರ್ನಾಟಕದಲ್ಲಿ ಒಟ್ಟು 9.14 ಕೋಟಿಗೂ ಹೆಚ್ಚು ಡೋಸ್ ಲಸಿಕೆ ವಿತರಿಸಲಾಗಿದೆ. ಸರಾಸರಿ ಪ್ರತಿ ದಿನ 2.5 ಲಕ್ಷ ಡೋಸ್ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ‌.


ವ್ಯಾಕ್ಸಿನೇಷನ್‌ ಡಿಟೈಲ್ಸ್

ಅಂದಹಾಗೇ ಈ ತನಕ ರಾಜ್ಯದಲ್ಲಿ 9,13,77,435 ಮಂದಿ ಲಸಿಕೆ ಪಡೆದಿದ್ದಾರೆ.

ಮೊದಲ ಡೋಸ್

-ಹೆಲ್ತ್ ಕೇರ್ ವರ್ಕ್ಸ್- 7,64,985
-ಫ್ರಂಟ್ ಲೈನ್ ವರ್ಕ್ಸ್- 9,44,044
-15-17 ವರ್ಷದ ಮಕ್ಕಳು- 18,98,386
-18-44 ವರ್ಷದ ವಯಸ್ಕರು- 2,83,57,066
-45 ವರ್ಷ ಮೇಲ್ಪಟ್ಟವರು- 1,86,08,477

2ನೇ ಡೋಸ್

- ಹೆಲ್ತ್ ಕೇರ್ ವರ್ಕ್ಸ್- 7,24,817
- ಫ್ರಂಟ್ ಲೈನ್ ವರ್ಕ್ಸ್- 9,00,545
- 15-17 ವರ್ಷದ ಮಕ್ಕಳು-nill
- 18-44 ವರ್ಷದ ವಯಸ್ಕರು- 2,25,52,593
- 45 ವರ್ಷ ಮೇಲ್ಪಟ್ಟವರು- 1,63,70,358

ಬೂಸ್ಟರ್ ಡೋಸ್ ಪಡೆದವರ ಮಾಹಿತಿ

- ಹೆಲ್ತ್ ಕೇರ್ ವರ್ಕ್ಸ್- 1,51,763
- ಫ್ರಂಟ್ ಲೈನ್ ವರ್ಕ್ಸ್- 53,115
- 60 ವರ್ಷ ಮೇಲ್ಪಟ್ಟವರು- 51,286
ಒಟ್ಟು- 2,56,164 ಜನರು ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.

ಸದ್ಯ ರಾಜ್ಯದಲ್ಲಿ ಕೊರೊನಾ 3ನೇ ಅಲೆ ತೀವ್ರತೆ ಹೆಚ್ಚಾಗ್ತಿದ್ದ ಕಾರಣಕ್ಕೆ ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಜ್ಞರ ಸೂಚನೆ ಮೇರೆಗೆ ಫ್ರಂಟ್​ಲೈನ್‌ ವರ್ಕರ್ಸ್‌, ಹೆಲ್ತ್ ವರ್ಕರ್ಸ್‌, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಇದಕ್ಕೂ ಮೊದಲು ಜನವರಿ 3ನೇ ತಾರೀಖಿನಿಂದ 15 ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ.

ಓದಿ: ಚಿಕ್ಕಮಗಳೂರಿನಲ್ಲಿ 27 ಜನ ಪೊಲೀಸರಿಗೆ ಕೊರೊನಾ ಸೋಂಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.