ETV Bharat / state

ಎತ್ತಿನಹೊಳೆ, ನರೇಗಾ ಅವ್ಯವಹಾರ ಆರೋಪ: ಶಿವಲಿಂಗೇಗೌಡರ ವಿರುದ್ಧ 2 ದೂರು ದಾಖಲಿಸಿದ ಎನ್.ಆರ್.ರಮೇಶ್

author img

By

Published : Mar 28, 2023, 1:33 PM IST

Updated : Mar 28, 2023, 3:53 PM IST

ಪ್ರಕರಣಕ್ಕೆ ಪೂರಕವಾಗಿ ರಘುನಾಥ ಎಂಬುವವರ ಡೈರಿ ಸಿಕ್ಕಿದ್ದು ಆ ದಾಖಲೆಯ ಪ್ರತಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದೇನೆ ಎಂದು ಎನ್.ಆರ್. ರಮೇಶ್​ ತಿಳಿಸಿದ್ದಾರೆ.

N R Ramesh
ಎನ್​ ಆರ್​ ರಮೇಶ್​

ಮಾಧ್ಯಮದ ಜೊತೆ ಮಾತನಾಡುತ್ತಿರುವ ಎನ್​ ಆರ್​ ರಮೇಶ್​

ಬೆಂಗಳೂರು: ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್. ಆರ್. ರಮೇಶ್ ಲೋಕಾಯುಕ್ತಕ್ಕೆ ಎರಡು ದೂರುಗಳನ್ನು ನೀಡಿದ್ದಾರೆ‌. ಸರ್ಕಾರದ ಎರಡು ಮಹತ್ವದ ಯೋಜನೆಗಳ ಹೆಸರಿನಲ್ಲಿ ಸುಮಾರು 250 ಕೋಟಿಯಷ್ಟು ಅಕ್ರಮವೆಸಗಿರುವ ಆರೋಪದಡಿ ಕೆಲ ದಾಖಲೆಗಳ ಸಹಿತ ಶಿವಲಿಂಗೇಗೌಡ ವಿರುದ್ಧ ಎನ್. ಆರ್. ರಮೇಶ್ ದೂರು ಸಲ್ಲಿಸಿದ್ದಾರೆ. ಎತ್ತಿನ ಹೊಳೆ ಹಾಗೂ ನರೇಗಾ ಯೋಜನೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ಶಾಸಕರು, ಅಧಿಕಾರಿಗಳ ಸಹಿತ ಒಟ್ಟು 15 ಜನರ ವಿರುದ್ಧ ದೂರು ದಾಖಲಾಗಿದೆ.

ಎತ್ತಿನ ಹೊಳೆ ಯೋಜನೆ ಅನುಷ್ಠಾನದ ಹೆಸರಿನಲ್ಲಿ ನೂರು ಕೋಟಿ ರೂ. ಗಳಿಗೂ ಹೆಚ್ಚು ಹಣ ದುರ್ಬಳಕೆ ಆರೋಪ: ಎತ್ತಿನ ಹೊಳೆ ಯೋಜನೆಯು ಚೆಕ್ ಡ್ಯಾಂಗಳನ್ನು ನಿರ್ಮಿಸುವುದು, ಆಯಾ ಪ್ರದೇಶಗಳಲ್ಲಿರುವ ಕೆರೆ ಅಥವಾ ಹೊಳೆಗಳ ಹೂಳೆತ್ತುವುದು ಹಾಗೂ ಅವುಗಳ ಸುತ್ತಮುತ್ತಲ ಪ್ರದೇಶಗಳಿಗೆ ಕೊಳವೆ ಮಾರ್ಗಗಳನ್ನು ಮತ್ತು ರಸ್ತೆಗಳನ್ನು ನಿರ್ಮಿಸುವುದಾಗಿತ್ತು. ಆದರೆ ಶಾಸಕ ಶಿವಲಿಂಗೇಗೌಡ ಅವರು ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಬೃಹತ್ ಪ್ರಮಾಣದ ಅಕ್ರಮಗಳನ್ನು ಎಸಗಿದ್ದಾರೆ. 150 ಕೋಟಿ ರೂ. ಗಳಿಗೂ ಹೆಚ್ಚು ಹಣ ಈ ಯೋಜೆಯಲ್ಲಿ ದುರ್ಬಳಕೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಎತ್ತಿನ‌ಹೊಳೆ ಯೋಜನೆಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನರಿಗೆ ಈ ಯೋಜನೆ ಅನ್ವಯವಾಗಿತ್ತು. ಜನರಲ್ ಕೆಟಕೆಗೆರಿಯಲ್ಲಿ ಟೆಂಡರ್ ಕರೆಯದೆ ತಮಗೆ ಬೇಕಾದವರಿಗೆ ಟೆಂಡರ್ ಕೊಟ್ಟು, 75 ಶೇ ಕಾಮಗಾರಿ ಮಾಡದೇ ಹಣವನ್ನು ನುಂಗಿದ್ದಾರೆ ಎಂದು ಎನ್.ಆರ್.ರಮೇಶ್​ ಆರೋಪಿಸಿದ್ದಾರೆ.

ನರೇಗಾ ಯೋಜನೆಯಲ್ಲೂ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪ: ಕಳೆದ ಐದು ವರ್ಷಗಳಲ್ಲಿ MGNREGA (ನರೇಗಾ) ಯೋಜನೆಯ ಅನುಷ್ಠಾನಕ್ಕೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಬಿಡುಗಡೆಯಾಗಿರುವ 150 ಕೋಟಿ ರೂ. ಗಳಿಗೂ ಹೆಚ್ಚು ಮೊತ್ತದ ಅನುದಾನಗಳ ಪೈಕಿ, ಶೇ. 50 ಕ್ಕೂ ಹೆಚ್ಚು ಹಣವನ್ನು ಶಾಸಕ ಶಿವಲಿಂಗೇಗೌಡರು ತಮ್ಮ ಆಪ್ತ ಮತ್ತು ವಂಚಕ ಅಧಿಕಾರಿಗಳ ಸಹಕಾರದಿಂದ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಎನ್. ಆರ್. ರಮೇಶ್, ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಎಷ್ಟು ಹಣ ಕೊಟ್ಟಿದಾರೆ ಎಂದು ಉಲ್ಲೇಖಿಸಿರುವ AEE ರಘುನಾಥ್ ಎಂಬುವವರ ಡೈರಿಯ ಸಾಕ್ಷ್ಯಾಧಾರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಬಿಜೆಪಿ ಬೆಂಗಳೂರು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್​ ಆರ್​ ರಮೇಶ್​, ರಘುನಾಥ ಎಂಬುವವರು ಯಾರ್ಯಾರಿಗೆ ಎಷ್ಟೆಷ್ಟು ಕೊಟ್ಟಿದ್ದೇನೆ, ಶಾಸಕರಿಗೆ ಎಷ್ಟು ಕೊಟ್ಟಿದ್ದೇನೆ, ಶಾಸಕರ ಹಿಂಬಾಲಕರಿಗೆ, ಶಾಸಕರ ಆಪ್ತ ಸಹಾಯಕ ಬಾಬುಗೆ ಲಂಚದ ರೂಪದಲ್ಲಿ ಎಷ್ಟು ಹಣ ಕೊಟ್ಟಿದ್ದೇನೆ ಎಂದು ಬರೆದಿಟ್ಟಿರುವ ದಾಖಲೆಯ ಡೈರಿ ಕೂಡ ನಮಗೆ ಲಭ್ಯವಾಗಿದೆ. ಆ ದಾಖಲೆಗಳ ಪ್ರತಿಯನ್ನು ಕೂಡ ಲೋಕಾಯುಕ್ತಕ್ಕೆ ಸಲ್ಲಿಸಿದ್ದೇನೆ. ಇದನ್ನೂ ಕೂಡ ತನಿಖೆಗೆ ಒಳಪಡಿಸಬೇಕು ಎಂದು ನಾನು ಲೋಕಾಯುಕ್ತಕ್ಕೆ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 97 ಕೋಟಿ ರೂ.ವಂಚನೆ ಆರೋಪ: ಸಚಿವ ಭೈರತಿ ಬಸವರಾಜ್ ಸೇರಿ 10 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Last Updated : Mar 28, 2023, 3:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.