ETV Bharat / state

ರಾಜಕಾಲುವೆ ಒತ್ತುವರಿ ಮಾಡಿರುವ 600 ಕಟ್ಟಡ ತೆರವಿಗೆ ಸೂಚನೆ.. ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

author img

By

Published : Sep 12, 2022, 7:51 PM IST

ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಮಾಡಿರುವ ಸುಮಾರು 600 ಕಟ್ಟಡಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

notice-to-vacate-600-buildings-encroached-by-rajkaluve
ರಾಜಕಾಲುವೆ ಒತ್ತುವರಿ ಮಾಡಿರುವ 600 ಕಟ್ಟಡದ ತೆರವಿಗೆ ಸೂಚನೆ..ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು : ರಾಜಕಾಲುವೆ ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ ಸಿದ್ಧವಾಗಿದೆ. ನಗರ ವ್ಯಾಪ್ತಿಯಲ್ಲಿ ಬರೋಬ್ಬರಿ 600 ಕಟ್ಟಡ ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಒತ್ತುವರಿ ಮಾಡಿರುವವರಿಗೆ ಕಂದಾಯ ಇಲಾಖೆಯಿಂದ ನೋಟೀಸ್ ನೀಡಲಾಗಿದೆ. ಅದರಂತೆ ಸುಮಾರು 600 ಕಟ್ಟಡಗಳನ್ನು ತೆರವು ಮಾಡಲು ಸೂಚನೆ ನೀಡಲಾಗಿದೆ ಎಂದರು.

ರಾಜಕಾಲುವೆ ಒತ್ತುವರಿ ಮಾಡಿರುವ 600 ಕಟ್ಟಡದ ತೆರವಿಗೆ ಸೂಚನೆ..ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಇದೀಗ ನೊಟೀಸ್ ನೀಡುವ ಅನಿವಾರ್ಯತೆ ಇದೆ. ರಾಜಕಾಲುವೆ, ಕೆರೆ ಜಾಗ ಕಂದಾಯ ಇಲಾಖೆಗೆ ಸೇರಿದ್ದು. ಪಾಲಿಕೆಗೆ ಸೇರಿದ್ದಲ್ಲ. ಹಾಗಾಗಿ ಕಂದಾಯ ಇಲಾಖೆಯವರು ನೊಟೀಸ್ ನೀಡುತ್ತಾರೆ ಎಂದು ಹೇಳಿದರು.

36 ಸ್ಥಳದಲ್ಲಿ ತೆರವು ಕಾರ್ಯಾಚರಣೆ : ಈಗ ಒಟ್ಟು 36 ಸ್ಥಳಗಳಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲದೇ, ಬೇರೊಬ್ಬರ ಆಸ್ತಿಯಲ್ಲಿ ಸರ್ವೆ ಮಾಡುವಾಗ ಕೋರ್ಟ್ ಅನುಮತಿ ಪಡೆಯುವ ಅಗತ್ಯವಿದೆ. ಹೀಗಾಗಿ ಕೋರ್ಟ್​​​ಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.

ಪಾಲಿಕೆಗೆ ರಸ್ತೆ ಒತ್ತುವರಿಗೆ ನೋಟೀಸ್ ನೀಡಲು ಅವಕಾಶ : ಬಿಬಿಎಂಪಿಗೆ ಕೇವಲ ಪಾದಚಾರಿ ರಸ್ತೆ ಒತ್ತುವರಿ ಆಗಿದ್ದರೆ, ನೋಟಿಸ್ ಇಲ್ಲದೇ ತೆರವು ಮಾಡುವ ಅವಕಾಶವಿದೆ. ಒತ್ತುವರಿ ಲೇಔಟ್ ಗಳಿಗೆ ನೋಟೀಸ್ ನೀಡುವ ಕೆಲಸ ಕಂದಾಯ ಇಲಾಖೆಯಿಂದ ಆಗಿದೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ : ಮರುಸ್ಥಾಪನೆ ಬೆನ್ನಲ್ಲೇ ಭ್ರಷ್ಟರ ಬೇಟೆಗೆ ಇಳಿದ ಲೋಕಾಯುಕ್ತ: ಬಿಬಿಎಂಪಿ ಕಚೇರಿ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.