ETV Bharat / state

ನಿಸ್ಸಾನ್‍ನಿಂದ ಹೊಸ ಶ್ರೇಣಿಯ ಕಿಕ್ಸ್ಎಕ್ಸ್ಎಲ್​​​​​​​​ ಡೀಸೆಲ್ ಶ್ರೇಣಿಯ ವಾಹನ ಬಿಡುಗಡೆ

author img

By

Published : Aug 9, 2019, 10:07 AM IST

Updated : Aug 9, 2019, 10:12 AM IST

ನಿಸ್ಸಾನ್ ಇಂಡಿಯಾ ತನ್ನ ಇಂಟಲಿಜೆಂಟ್ ಎಸ್‍ಯುವಿ ಕಿಕ್ಸ್ ಎಕ್ಸ್ಎಲ್​​​​​​​​ ಡೀಸೆಲ್ ಶ್ರೇಣಿಯ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸಾಕಷ್ಟು ಸ್ಥಳಾವಕಾಶ ಹೊಂದಿದ ಇಂಟೀರಿಯರ್ಸ್ ಮತ್ತು ಸ್ಟೈಲಿಶ್ ಹೊರಾಂಗಣವನ್ನು ಬಯಸುವ ಗ್ರಾಹಕರಿಗೆ ಈ ಕಿಕ್ಸ್ ಹೇಳಿ ಮಾಡಿಸಿದಂತಹ ವಾಹನವಾಗಿದೆ.

ಎಸ್‍ಯುವಿ ಕಿಕ್ಸ್ ಎಕ್ಸ್ಎಲ್​​​​​​​​ ಡೀಸೆಲ್ ಶ್ರೇಣಿಯ ವಾಹನ

ಬೆಂಗಳೂರು: ನಿಸ್ಸಾನ್ ಇಂಡಿಯಾ ತನ್ನ ಇಂಟಲಿಜೆಂಟ್ ಎಸ್‍ಯುವಿ ಶ್ರೇಣಿಯ ಕಿಕ್ಸ್ ಎಕ್ಸ್ಎಲ್​ ಡೀಸೆಲ್ ಶ್ರೇಣಿಯ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ದೇಶಾದ್ಯಂತ ಇದರ ಬೆಲೆ 9.89 ಲಕ್ಷ ರೂಪಾಯಿಗಳಾಗಿದೆ. ಸಾಕಷ್ಟು ಸ್ಥಳಾವಕಾಶ ಹೊಂದಿದ ಇಂಟೀರಿಯರ್ಸ್ ಮತ್ತು ಸ್ಟೈಲಿಶ್ ಹೊರಾಂಗಣವನ್ನು ಬಯಸುವ ಗ್ರಾಹಕರಿಗೆ ಈ ಕಿಕ್ಸ್ ಹೇಳಿ ಮಾಡಿಸಿದಂತಹ ವಾಹನವಾಗಿದೆ. ಹಿಂಭಾಗದ ಎಸಿ ವೆಂಟ್ ಆಟೋ ಎಸಿ, ಡ್ಯುಯೆಲ್ ಏರ್‍ಬ್ಯಾಗ್, ಎಬಿಎಸ್+ಇಬಿಡಿ+ಬ್ರೇಕ್ ಅಸಿಸ್ಟ್, ನಿಸ್ಸಾನ್ ಕನೆಕ್ಟ್, ಯುಎಸ್‍ಬಿ & ಬ್ಲೂಟೂತ್ ಕನೆಕ್ಟಿವಿಟಿ, ಕೂಲ್ಡ್ ಗ್ಲೋವ್ ಬಾಕ್ಸ್, ಶಾರ್ಕ್ ಫಿನ್ ಆಂಟೆನಾ, ಚೈಲ್ಡ್ ಲಾಕ್ ಜತೆಗೆ ಸೆಂಟ್ರಲ್ ಡೋರ್ ಲಾಕ್, ಸ್ಪೀಡ್, ಸೆನ್ಸಿಂಗ್ ಆಟೋ ಡೋರ್ ಲಾಕ್ & ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್‍ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್​​ಗಳು, 2 ಡಿಐಎನ್ ಎಸ್‍ಟಿಡಿ ಆಡಿಯೋ ಸೇರಿದಂತೆ 50 ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಈ ಕಿಕ್ಸ್ ಹೊಂದಿದೆ. ಈ ಎಲ್ಲಾ ವಿಶೇಷತೆಗಳು ಕಿಕ್ಸ್ ಎಕ್ಸ್ಎಲ್​​​​​​​ ಡೀಸೆಲ್ ಮತ್ತು ಇತರೆ ಶ್ರೇಣಿಗಳಲ್ಲಿಯೂ (ಕಿಕ್ಸ್ ಎಕ್ಸ್​​ಎಲ್​​​ ಡೀಸೆಲ್, ಕಿಕ್ಸ್ ಎಕ್ಸ್​​​ ವಿ ಡೀಸೆಲ್, ಕಿಕ್ಸ್ ಎಕ್ಸ್​​ವಿ ಪ್ರೀಮಿಯಂ ಡೀಸೆಲ್) ಲಭ್ಯವಿವೆ.

•ಕಿಕ್ಸ್ ಎಕ್ಸ್​​ಇ ಡೀಸೆಲ್ 50+ ವೈಶಿಷ್ಟ್ಯತೆಗಳನ್ನು ಹೊಂದಿದೆ
•ಕಿಕ್ಸ್ ಎಕ್ಸ್​​​ಎಲ್, ಕಿಕ್ಸ್ ಎಕ್ಸ್​​ವಿ ಮತ್ತು ಕಿಕ್ಸ್ ಎಕ್ಸ್​​​ವಿ ಪ್ರೀಮಿಯಂ ಲಭ್ಯ
•24 x7 ರೋಡ್‍ಸೈಡ್ ನೆರವಿನೊಂದಿಗೆ 5 ವರ್ಷಗಳ ತಡೆರಹಿತ ವಾರಂಟಿ

Kicks Car for the Indian market
ಎಸ್‍ಯುವಿ ಕಿಕ್ಸ್ ಎಕ್ಸ್ಎಲ್​​​​​​​​ ಡೀಸೆಲ್ ಶ್ರೇಣಿಯ ವಾಹನ

ಈ ಹೊಸ ಶ್ರೇಣಿಯ ವಾಹನದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿಸ್ಸಾನ್ ಮೋಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಶ್ರೀರಾಂ ಪದ್ಮನಾಭನ್, ದೇಶಾದ್ಯಂತ ಎಸ್‍ಯುವಿ ಉತ್ಸಾಹಿಗಳಿಂದ ಈ ನಮ್ಮ ಹೊಸ ನಿಸ್ಸಾನ್ ಕಿಕ್ಸ್​​​​ಗೆ ಸಾಕಷ್ಟು ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಪ್ರತಿಕ್ರಿಯೆಯನ್ನು ಗಮನಿಸಿರುವ ನಾವು ಆರಂಭಿಕ ಹಂತದ ಡೀಸೆಲ್ ಶ್ರೇಣಿಯಲ್ಲಿ ಹೊಸ ಎಕ್ಸ್​​​ಇ ಡೀಸೆಲ್​ನನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.

Intro:Body:ಭಾರತದ ಮಾರುಕಟ್ಟೆಗೆ ನಿಸಾನ್‍ನಿಂದ ಹೊಸ ಶ್ರೇಣಿಯ ಕಿಕ್ಸ್ ಬಿಡುಗಡೆ


ಬೆಂಗಳೂರು: ನಿಸಾನ್ ಇಂಡಿಯಾ ತನ್ನ ಇಂಟಲಿಜೆಂಟ್ ಎಸ್‍ಯುವಿ ಶ್ರೇಣಿಯ ಕಿಕ್ಸ್ ಎಕ್ಸ್‍ಇ ಡೀಸೆಲ್ ಶ್ರೇಣಿಯ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೇಶಾದ್ಯಂತ ಇದರ ಬೆಲೆ 9.89 ಲಕ್ಷ
ರೂಪಾಯಿಗಳಾಗಿದೆ.
ಪ್ರೀಮಿಯಂ, ಸಾಕಷ್ಟು ಸ್ಥಳಾವಕಾಶ ಹೊಂದಿದ ಇಂಟೀರಿಯರ್ಸ್ ಮತ್ತು ಸ್ಟೈಲಿಶ್ ಹೊರಾಂಗಣವನ್ನು ಬಯಸುವ ಗ್ರಾಹಕರಿಗೆ ಈ ಕಿಕ್ಸ್ ಹೇಳಿ ಮಾಡಿಸಿದಂತಹ ವಾಹನವಾಗಿದೆ. ಹಿಂಭಾಗದ ಎಸಿ ವೆಂಟ್ ಆಟೋ ಎಸಿ, ಡ್ಯುಯೆಲ್ ಏರ್‍ಬ್ಯಾಗ್, ಎಬಿಎಸ್+ಇಬಿಡಿ+ಬ್ರೇಕ್ ಅಸಿಸ್ಟ್, ನಿಸಾನ್ ಕನೆಕ್ಟ್, ಯುಎಸ್‍ಬಿ & ಬ್ಲೂಟೂತ್ ಕನೆಕ್ಟಿವಿಟಿ, ಕೂಲ್ಡ್ ಗ್ಲೋವ್ ಬಾಕ್ಸ್, ಶಾರ್ಕ್ ಫಿನ್ ಆಂಟೆನಾ, ಚೈಲ್ಡ್ ಲಾಕ್ ಜತೆಗೆ ಸೆಂಟ್ರಲ್ ಡೋರ್ ಲಾಕ್, ಸ್ಪೀಡ್, ಸೆನ್ಸಿಂಗ್ ಆಟೋ ಡೋರ್ ಲಾಕ್ & ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್‍ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್‍ಗಳು, 2ಡಿಐಎನ್ ಎಸ್‍ಟಿಡಿ ಆಡಿಯೋ ಸೇರಿದಂತೆ 50 ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಈ ಕಿಕ್ಸ್ ಹೊಂದಿದೆ. ಈ ಎಲ್ಲಾ ವೈಶಿಷ್ಟ್ಯತೆಗಳು ಕಿಕ್ಸ್ ಎಕ್ಸ್‍ಇ ಡೀಸೆಲ್ ಮತ್ತು ಇತರೆ ಶ್ರೇಣಿಗಳಲ್ಲಿಯೂ (ಕಿಕ್ಸ್ ಎಕ್ಸ್‍ಎಲ್ ಡೀಸೆಲ್, ಕಿಕ್ಸ್ ಎಕ್ಸ್‍ವಿ ಡೀಸೆಲ್, ಕಿಕ್ಸ್ ಎಕ್ಸ್‍ವಿ ಪ್ರೀಮಿಯಂ ಡೀಸೆಲ್) ಲಭ್ಯವಿವೆ.


•ಕಿಕ್ಸ್ ಎಕ್ಸ್‍ಇ ಡೀಸೆಲ್ 50+ ವೈಶಿಷ್ಟ್ಯತೆಗಳನ್ನು ಹೊಂದಿದೆ
•ಕಿಕ್ಸ್ ಎಕ್ಸ್‍ಎಲ್, ಕಿಕ್ಸ್ ಎಕ್ಸ್‍ವಿ ಮತ್ತು ಕಿಕ್ಸ್ ಎಕ್ಸ್‍ವಿ ಪ್ರೀಮಿಯಂ ಲಭ್ಯ
•24 x7 ರೋಡ್‍ಸೈಡ್ ನೆರವಿನೊಂದಿಗೆ 5 ವರ್ಷಗಳ ತಡೆರಹಿತ ವಾರಂಟಿ




ಈ ಹೊಸ ಶ್ರೇಣಿಯ ವಾಹನದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿಸಾನ್ ಮೋಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಶ್ರೀರಾಂ ಪದ್ಮನಾಭನ್ ಅವರು, ``ದೇಶಾದ್ಯಂತ ಎಸ್‍ಯುವಿ ಉತ್ಸಾಹಿಗಳಿಂದ ಈ ನಮ್ಮ ಹೊಸ ನಿಸಾನ್ ಕಿಕ್ಸ್‍ಗೆ ಸಾಕಷ್ಟು ಧನಾತ್ಮಕವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಪ್ರತಿಕ್ರಿಯೆಯನ್ನು ಗಮನಿಸಿರುವ ನಾವು ಆರಂಭಿಕ ಹಂತದ ಡೀಸೆಲ್ ಶ್ರೇಣಿಯಲ್ಲಿ ಹೊಸ ಎಕ್ಸ್‍ಇ ಡೀಸೆಲ್ ಅನ್ನು ಬಿಡುಗಡೆ ಮಾಡಿದ್ದು, ಇದು ಗ್ರಾಹಕರಿಗೆ ಅತ್ಯುತ್ತಮ ಎನಿಸುವ ಮೌಲ್ಯವನ್ನು ತಂದುಕೊಡಲಿದೆ. ಇದರ ಜತೆಗೆ ಅತ್ಯುತ್ತಮ ದರ್ಜೆಯ ಸೇವೆ ಮತ್ತು ಗುಣಮಟ್ಟದ ಭರವಸೆಯನ್ನು ನೀಡುತ್ತದೆ’’ ಎಂದು ತಿಳಿಸಿದರು.


ಪರಿಪೂರ್ಣವಾದ ನೆಮ್ಮದಿ:
ಇದಲ್ಲದೇ, ನಿಸಾನ್ ಕಿಕ್ಸ್ ಗ್ರಾಹಕರಿಗೆ ಸಂಪೂರ್ಣವಾದ ನೆಮ್ಮದಿಯನ್ನು ನೀಡಲಿದೆ. ಅಂದರೆ, 5 ವರ್ಷಗಳ ಉಚಿತ ವಾರಂಟಿ ಮತ್ತು ದಿನದ 24 ಗಂಟೆಯೂ ರೋಡ್‍ಸೈಡ್ ಅಸಿಸ್ಟೆನ್ಸ್ ನೀಡಲಿದೆ. ನಿಸಾನ್ ಕಿಕ್ಸ್ `ವೆಚ್ಚ ನಿರ್ವಹಣೆ ಪ್ಯಾಕೇಜ್’ ನ ಎರಡು ಆಯ್ಕೆಗಳನ್ನು ನೀಡಲಿದೆ. ಇದು ಸಿಲ್ವರ್ & ಬೌನ್ಝ್‍ಗೆ ಲಭ್ಯವಿದ್ದು, ತಡೆರಹಿತವಾದ ಮಾಲೀಕತ್ವದ ಅನುಭವವನ್ನು ನೀಡಲಿದೆ. ಬ್ರೌನ್ಝ್ ಪ್ಯಾಕೇಜ್ ನಿಗದಿತ ನಿರ್ವಹಣೆ ಮತ್ತು ಸಿಲ್ವರ್ ಪ್ಯಾಕೇಜ್ ವಿಯರ್ ಅಂಡ್ ಟಿಯರ್






(ಬ್ಯಾಟರಿ ಮತ್ತು ಟೈಯರ್‍ಗಳನ್ನು ಹೊರತುಪಡಿಸಿ) ಅನ್ನು ಒಳಗೊಂಡಿದೆ. ಈ ಆಪರ್‍ಗಳಿಂದ ನಿಯಮಿತವಾದ ನಿರ್ವಹಣೆಗೆ ಮಾಡುವ ವೆಚ್ಚದಲ್ಲಿ ಶೇ.30 ರವರೆಗೆ ಉಳಿತಾಯ ಮಾಡಬಹುದಾಗಿದೆ.


ನಿಸಾನ್ ಇಂಟಲಿಜೆಂಟ್ ಮೊಬಿಲಿಟಿ & ಎಸ್‍ಯುವಿ ಡಿಎನ್‍ಎ
ಇನ್ನು ಹೊಸ ನಿಸಾನ್ ಕಿಕ್ಸ್ ನಿಸಾನ್‍ನ ಜಾಗತಿಕ ಎಸ್‍ಯುವಿ ಪರಂಪರೆಯನ್ನು ನಿರ್ಮಾಣ ಮಾಡಲಿದೆ. ಸುರಕ್ಷತೆ, ಸ್ಟೈಲ್, ಸಾಕಷ್ಟು ಸ್ಥಳಾವಕಾಶ ಮತ್ತು ಇಂಟಲಿಜೆನ್ಸ್ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ಕಿಕ್ಸ್ ಜಾಗತಿಕ ಪರಂಪರೆಯನ್ನು ಭಾರತೀಯ ಗ್ರಾಹಕರಿಗೆ ನೀಡಲಿದೆ. ಇಂಟಲಿಜೆಂಟ್ ಟೆಕ್ನಾಲಜಿ, ಕ್ಲಾಸ್-ಲೀಡಿಂಗ್ ಪ್ರೀಮಿಯಂನೆಸ್, ಮಾಲೀಕತ್ವದ ಇಂಟಲಿಜೆಂಟ್ ಆಯ್ಕೆ ಮತ್ತು ವೈಯಕ್ತಿಕ ಆಯ್ಕೆ ಮೂಲಕ ಅತ್ಯದ್ಭುತವಾದ ಅನುಭವಗಳನ್ನು ನೀಡಲಿದೆ.
ನಿಸಾನ್‍ನ ಇಂಟಲಿಜೆಂಟ್ ಮೊಬಿಲಿಟಿ ದೂರದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಿರುವ ನಿಸಾನ್ ಕನೆಕ್ಟ್ ಕಾರು ತಂತ್ರಜ್ಞಾನದ ಅತ್ಯುತ್ಕøಷ್ಠವಾದ ಸೌಲಭ್ಯವಾಗಿದೆ. ಇದು ಕಿಕ್ಸ್‍ನ ಪೆಟ್ರೋಲ್ ಮತ್ತು ಡೀಸೆಲ್ ಶ್ರೇಣಿಗಳೆರಡರಲ್ಲೂ ಲಭ್ಯವಿದೆ.
ಜಿಯೋ ಫೆನ್ಸಿಂಗ್, ಸ್ಪೀಡ್ ಅಲರ್ಟ್, ಕಫ್ರ್ಯೂ ಅಲರ್ಟ್, ಲೊಕೇಟ್ ಮೈ ಕಾರ್ ಮತ್ತು ಶೇರ್ ಮೈ ಕಾರ್ ಲೊಕೇಶನ್ ಸೇರಿದಂತೆ ಕಾರಿನ ಸುರಕ್ಷತೆ ಮತ್ತು ಭದ್ರತೆಗೆ ಅಗತ್ಯವಾದ ವೈಶಿಷ್ಟ್ಯತೆಗಳು ಸೇರಿದಂತೆ ನಿಸಾನ್ ಕನೆಕ್ಟ್ 50 ಕ್ಕೂ ಹೆಚ್ಚು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಕೀ ರಹಿತವಾದ ಕಾರು ಪ್ರವೇಶ, ಇಂಟಲಿಜೆಂಟ್ ಕೀ ಮೂಲಕ ಪುಶ್-ಸ್ಟಾಪ್-ಸ್ಟಾರ್ಟ್ ಮತ್ತು `ಲೀಡ್ ಮಿ ಟು ಕಾರ್’ ಸೌಲಭ್ಯವನ್ನು ಹೊಂದಿದೆ. ಇದು ಕಾರಿನ ಪ್ರಯಾಣಿಕರಿಗೆ ಸೂಕ್ತ ಮಾರ್ಗದರ್ಶನ ಮಾಡಲಿದೆ ಮತ್ತು ವಾಹನ ಚಾಲಕನಿಗೆ ಅನುಕೂಲಕರವಾದ ಅನುಭವವನ್ನು ನೀಡಲಿದೆ.


ನಿಮ್ಮ ಆಯ್ಕೆಯ ಬಣ್ಣ
ಈ ಕಿಕ್ಸ್ ನಾಲ್ಕು ಶ್ರೇಣಿಗಳಲ್ಲಿ ಲಭ್ಯವಿದೆ. ಡೀಸೆಲ್‍ನ ಎಕ್ಸ್‍ಇ, ಎಕ್ಸ್‍ಎಲ್, ಎಕ್ಸ್‍ವಿ ಮತ್ತು ಎಕ್ಸ್‍ವಿ ಪ್ರೀಮಿಯಂ ಮತ್ತು ಪೆಟ್ರೋಲ್‍ನಲ್ಲಿ ಎರಡು ಡೈನಾಮಿಕ್ ಶ್ರೇಣಿಗಳಾದ ಎಕ್ಸ್‍ಎಲ್ ಮತ್ತು ಎಕ್ಸ್‍ವಿಯಲ್ಲಿ ಲಭ್ಯವಿದೆ. ಈ ನಿಸಾನ್ ಕಿಕ್ಸ್ 11 ಅತ್ಯದ್ಭುತವಾದ ಬಣ್ಣಗಳಲ್ಲಿ ಲಭ್ಯವಿದೆ. ಅವುಗಳೆಂದರೆ: ಪರ್ಲ್ ವೈಟ್, ಬ್ಲೇಡ್ ಸಿಲ್ವರ್, ಬ್ರೌನ್ಝ್ ಗ್ರೇ, ಫೈರ್ ರೆಡ್, ಅಂಬರ್ ಆರೆಂಜ್, ಡೀಪ್ ಬ್ಲ್ಯೂ ಪರ್ಲ್, ನೈಟ್ ಶೇಡ್, ಫೈರ್ ರೆಡ್ ಮತ್ತು ಒನಿಕ್ಸ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್‍ನಲ್ಲಿ ಲಭ್ಯವಿದೆ.


ಹೆಚ್ಚಿಸಿದ ಕಾರ್ಯಕ್ಷಮತೆ ಮತ್ತು ಡ್ರೈವಿಂಗ್ ಡೈನಾಮಿಕ್‍ಗಳೊಂದಿಗೆ ಸ್ಟೈಲಿಶ್ ವಿನ್ಯಾಸವನ್ನು ಒಳಗೊಂಡಿದೆ. ಈ ಹೊಸ ಕಿಕ್ಸ್ 1.5 ಎಚ್4ಕೆ ಪೆಟ್ರೋಲ್ ಆಯ್ಕೆಯನ್ನು ನೀಡಲಿದ್ದು, 106ಪಿಎಸ್‍ನ ಅತ್ಯಧಿಕ ಪವರ್ ಜನರೇಟ್ ಮಾಡಲಿದೆ. ಅದೇರೀತಿ 1.5 ಕೆ9ಕೆ ಡಿಸಿಐ ಡೀಸೆಲ್ ಇಂಜಿನ್ 116ಪಿಎಸ್‍ನ ಅಧಿಕ ಪವರ್ ಜನರೇಟ್ ಮಾಡುವ ಸಾಮಥ್ರ್ಯ ಹೊಂದಿದೆ. ಎಆರ್‍ಎಐ ಪ್ರಮಾಣೀಕೃತಕ್ಕೆ ಅನುಗುಣವಾಗಿ ಈ ವಾಹನಗಳ ಇಂಧನ ಕ್ಷಮತೆಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‍ಗೆ 14.23 ಕಿಲೋಮೀಟರ್ ನೀಡಿದರೆ, ಡೀಸೆಲ್‍ನ ವಾಹನ ಪ್ರತಿ ಲೀಟರ್‍ಗೆ 20.45 ಕಿಲೋಮೀಟರ್ ಓಡಲಿದೆ.
Conclusion:
Last Updated :Aug 9, 2019, 10:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.