ETV Bharat / state

ಎನ್​ಐಎ ನ್ಯಾಯಾಲಯವು ಐಪಿಸಿ ಅಡಿಯಲ್ಲಿನ ಪ್ರಕರಣ ವಿಚಾರಣೆ ನಡೆಸಬಹುದು: ಹೈಕೋರ್ಟ್​

author img

By

Published : Sep 9, 2022, 11:06 PM IST

ಡಿಜೆ ಹಳ್ಳಿ ಗಲಭೆ ಪ್ರಕರಣ ಆರೋಪಿಯು ತಮ್ಮ ವಿರುದ್ಧದ ಪ್ರಕರಣವನ್ನು ಎನ್‌ಐಎ ವಿಶೇಷ ನ್ಯಾಯಾಲಯದಿಂದ ವರ್ಗಾಯಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ

nia-court-can-also-conduct-trial-offences-under-ipc
ಎನ್​ಐಎ ನ್ಯಾಯಾಲಯವು ಐಪಿಸಿ ಅಡಿಯಲ್ಲಿನ ಪ್ರಕರಣ ವಿಚಾರಣೆ ನಡೆಸಬಹುದು: ಹೈಕೋರ್ಟ್​

ಬೆಂಗಳೂರು: ಭಾರತೀಯ ದಂಡ ಸಂಹಿತೆಯಡಿಯ(ಐಪಿಸಿ) ಆರೋಪ ಎದುರಿಸುತ್ತಿರುವ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್​ಐಎ) ವಿಶೇಷ ನ್ಯಾಯಾಲಯಗಳು ವಿಚಾರಣೆ ನಡೆಸುವ ಅಧಿಕಾರವಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ಎನ್‌ಐಎ ವಿಶೇಷ ನ್ಯಾಯಾಲಯದಿಂದ ವರ್ಗಾಯಿಸಬೇಕು ಎಂದು ಡಿಜೆ ಹಳ್ಳಿ ಗಲಭೆ ಪ್ರಕರಣ ಆರೋಪಿಯಾಗಿರುವ ನಗರದ ಬೆಂಗಳೂರಿನ ಸೈಯ್ಯದ್ ಸೊಹೆಲ್ ತೊರ್ವಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ವಜಾಗೊಳಿಸಿದೆ.

ಅಲ್ಲದೆ, ಎನ್‌ಐಎ ಕಾಯಿದೆಯ ಪ್ರಕಾರ ವಿಶೇಷ ನ್ಯಾಯಾಲಯಕ್ಕೆ ಆರೋಪಿಯು ಎನ್‌ಐಎ ಮಾತ್ರವಲ್ಲದ್ದೆ, ಇತರ ಕಾಯಿದೆಗಳಡಿ ದಾಖಲಾಗಿದ್ದ ಅಪರಾಧ ಪ್ರಕರಣಗಳ ವಿಚಾರಣೆ ನಡೆಸುವ ಅಕಾರವಿದೆ. ಅಪರಾಧವು ಅಂತಹ ಇತರ ಅಪರಾಧದೊಂದಿಗೆ ಸಂಬಂಧ ಹೊಂದಿದ್ದರೆ ಅದೇ ವಿಚಾರಣೆಯನ್ನು ಐಪಿಸಿ ಅಡಿಯಲ್ಲಿ ನಡೆಸಬಹುದು ಎಂದು ತಿಳಿಸಿದೆ.

ಅರ್ಜಿದಾರರು ಯುಎಪಿಎ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುವ ಕೃತ್ಯಗಳಲ್ಲಿ ತೊಡಗಿರುವ ಗುಂಪಿನ ಭಾಗವಾಗಿದ್ದರೂ, ಇತರ ಆರೋಪಿಗಳೊಂದಿಗೆ ಸಂಚು ರೂಪಿಸಿದ್ದಕ್ಕಾಗಿ ಯುಎಪಿಎಯ ಸೆಕ್ಷನ್ 14ರಡಿಯಲ್ಲಿ ಆರೋಪ ಹೊರಿಸಿಲ್ಲ. ಆದರೆ, ಐಪಿಸಿಯ ಸೆಕ್ಷನ್ 120 ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿದೆ. ಹಾಗಾಗಿ ಮುಖ್ಯ ಪ್ರಕರಣದ ಆರೋಪಿಗಳ ಜೊತೆ ಅರ್ಜಿದಾರರೂ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಎನ್‌ಐಎ ಕೋರ್ಟ್ ವಿಚಾರಣೆ ನಡೆಸಬಹುದು. ಅದಕ್ಕೆ ನಿಯಮದಲ್ಲಿ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ ಏನು?: 2020ರ ಆ.11ರಂದು ನಗರದ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಪ್ರದೇಶಗಳಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಎನ್‌ಐಎ ಆರೋಪಪಟ್ಟಿಯಲ್ಲಿ ಅರ್ಜಿದಾರ ಸೈಯದ್ ಆರೋಪಿಯಾಗಿದ್ದಾರೆ. ಪ್ರಕರಣದ ಆರೋಪಿಗಳ ವಿರುದ್ಧ ಎನ್‌ಐಎ, ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿ ಆರೋಪಪಟ್ಟಿ ದಾಖಲಿಸಿದ್ದಾರೆ.

ಅರ್ಜಿದಾರ ಇತರೆ ಆರೋಪಿಗಳ ಜೊತೆ ಸೇರಿ ಸಂಚು ರೂಪಿಸಿದ್ದಾರೆ, ಅವರ ವಿರುದ್ಧ ಯುಎಪಿಎ ಹೇರಿಲ್ಲ. ಆದರೆ ಐಪಿಸಿ ಅಡಿ ಆರೋಪ ದಾಖಲಿಸಲಾಗಿತ್ತು. ಹಾಗಾಗಿ ಎನ್‌ಐಎ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಅರ್ಜಿದಾರರು ತಮ್ಮ ವಿರುದ್ಧದ ವಿಚಾರಣೆಯನ್ನು ಎನ್‌ಐಎ ಕೋರ್ಟ್‌ನಿಂದ ಸಾಮಾನ್ಯ ಕೋರ್ಟ್​ಗೆ ವರ್ಗಾಯಿಸಲು ನಿರ್ದೇಶನ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ನ್ಯಾಯಪೀಠಕ್ಕೆ ಅರ್ಜಿಯಲ್ಲಿ ಮನವಿ ಮಾಡಿದ್ದರು.

ಇದನ್ನೂ ಓದಿ; ಅಪ್ರಾಪ್ತರ ನಡುವಿನ ಲೈಂಗಿಕ ಅಪರಾಧ: ರಾಜಿ ಹಿನ್ನೆಲೆ ಪ್ರಕರಣ ಮುಕ್ತಾಯಗೊಳಿಸಿದ ಹೈಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.