ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಚಳಿಯಿಂದ ಜನ ಹೈರಾಣಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಹವಾಮಾನ ಕೇಂದ್ರದ ಸದಾನಂದ ಅಡಿಗ, ಕರ್ನಾಟಕದಾದ್ಯಂತ ಒಣಹವೆ ವರದಿಯಾಗಿದೆ. ಬೀದರ್ನಲ್ಲಿ ಅತ್ಯಂತ ಕನಿಷ್ಠ ಉಷ್ಣಾಂಶ 9.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಗರಿಷ್ಠ ಉಷ್ಣಾಂಶ ವಾಡಿಕೆಗಿಂತ 3, 4 ಡಿಗ್ರಿ ಸೆಲ್ಸಿಯಸ್ ಕಡಿಮೆ ಇತ್ತು. ಮುಂದಿನ ಐದು ದಿನದ ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯಾದ್ಯಂತ ಒಣಹವೆ ಇರಲಿದೆ. ಅಲ್ಲದೆ ಕನಿಷ್ಟ ಉಷ್ಣಾಂಶ ವಾಡಿಕೆಗಿಂತ ಕಡಿಮೆ ಇರುವ ಸಾಧ್ಯತೆ ಇದೆ ಎಂದರು.
ಓದಿ: ಪ್ರೋ ಕಬ್ಬಡ್ಡಿ ಸೀಸನ್ 8: ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ಬೆಂಗಳೂರು ಬುಲ್ಸ್
ಬೆಂಗಳೂರಿನಲ್ಲಿ ಬುಧವಾರ ಗರಿಷ್ಠ 27 ಡಿಗ್ರಿ, ಕನಿಷ್ಠ ಉಷ್ಣಾಂಶ 14.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೆಚ್ಎಎಲ್ನಲ್ಲಿ 13.5, ಜಿಕೆವಿಕೆ 12.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇಂದು (ಗುರುವಾರ) ಗರಿಷ್ಠ 28, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ. ಬೆಳಗ್ಗೆ ದಟ್ಟ ಮಂಜು ಕವಿದಿರಲಿದೆ ಎಂದು ಮಾಹಿತಿ ನೀಡಿದರು.