ETV Bharat / state

ಗೃಹಿಣಿ ಶಕ್ತಿ, ನಮ್ಮ ನೆಲೆ ಹೊಸ ಯೋಜನೆ ಘೋಷಣೆ; ಬಜೆಟ್​ ವಲಯವಾರು ಹಂಚಿಕೆ ಹೀಗಿದೆ

author img

By

Published : Feb 17, 2023, 12:40 PM IST

ಚುನಾವಣೆ ಹಿನ್ನೆಲೆ ಎಲ್ಲ ಸಮುದಾಯದ ದೃಷ್ಟಿಕೋನದಲ್ಲಿರಿಸಿಕೊಂಡು ಬಜೆಟ್​ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನೇಕ ಹೊಸ ಯೋಜನೆ ಜೊತೆಗೆ ಹಲವು ಯೋಜನೆಗೆ ಅನುದಾನ ಒದಗಿಸಿದ್ದಾರೆ.

New scheme and sector wise Grant allocated in CM Basavaraja bommai Budget
New scheme and sector wise Grant allocated in CM Basavaraja bommai Budget

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ಜನರ ಓಲೈಕೆಯ ದೃಷ್ಟಿಯಿಂದ ಪ್ರಸಕ್ತ ಸಾಲಿನ ಬಜೆಟ್​ ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಯೋಜನೆಗಳಿಗೆ ಅನುದಾನ ನೀಡುವ ಮೂಲಕ ಎಲ್ಲಾ ಸಮುದಾಯದ ಜನರ ಸೆಳೆಯಲು ಮುಂದಾಗಿದ್ದಾರೆ. ಗ್ರಾಮೀಣ, ಕೃಷಿ, ಆರೋಗ್ಯ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಪ್ರಕಟಿಸಿದ್ದಾರೆ. ಈ ಮೂಲಕ ಹಲವು ಜನಪರ ಯೋಜನೆಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಇನ್ನು ಯಾವ ಯಾವ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ: 45 ಸಾವಿರ ಸ್ವಸಹಾಯ ಗುಂಪುಗಳಿಗೆ 1800 ಕೋಟಿ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಯೋಜನೆಯನ್ನು ಪರಿಚಯಿಸಲಾಗಿದ್ದು, 'ಗೃಹಿಣಿ ಶಕ್ತಿ; ಯೋಜನೆಗೆ ಘೋಷಣೆ ಮಾಡಲಾಗಿದೆ. ಅಸಂಘಟಿತ ವಲಯದ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಯೋಜನೆಗೆ 1000 ಕೋಟಿ ಅನುದಾನ ನೀಡಲಾಗಿದೆ. 3538 ಅಂಗನವಾಡಿ ಸ್ಥಾಪನೆಗೆ 270 ಕೋಟಿ ಅನುದಾನ ಒದಗಿಸಲಾಗಿದೆ. ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ.ಸಹಾಯಧನ ನೀಡಲಾಗಿದೆ. ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಗೆ 350 ಕೋಟಿ ಅನುದಾನ ನೀಡಲಾಗಿದೆ. ಆಸಿಡ್ ದಾಳಿ ಸಂತ್ರಸ್ಥ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಯರಿಗೆ ಗ್ರಾಚುಟಿ ನೀಡಲು 40 ಕೋಟಿ ಅನುದಾನ ನೀಡಲಾಗಿದ್ದು, ಒಟ್ಟಾರೆ ಮಕ್ಕಳ ಅಭ್ಯೂದಯಕ್ಕೆ 47,256 ಕೋಟಿ ಅನುದಾನ ನೀಡಲಾಗಿದೆ.

ನಮ್ಮ ನೆಲೆ ಹೊಸ ಯೋಜನೆ ಘೋಷಣೆ: ವಿಶೇಷ ಚೇತನರಿಗಾಗಿ ಸ್ವಚೇತನಾ ಯೋಜನೆಯಡಿ 5 ಸಾವಿರ ಅರ್ಹರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಕ್ಕೆ 50 ಕೋಟಿ ಅನುದಾನ ಮಾಡಲಾಗಿದೆಎಸ್ಸಿ ಎಸ್ಟಿ ಸಮುದಾಯದ ಅಭ್ಯೂದಯಕ್ಕೆ 30215 ಕೋಟಿ ಅನುದಾನ ನೀಡಲಾಗಿದ್ದು, ಹಿಂದುಳಿದ ವರ್ಗ ಸಮುದಾಯಗಳ ಮಠಗಳಿಗೆ ಶೈಕ್ಷಣಿಕ ಕಾರ್ಯಗಳಿಗಾಗಿ 1115 ಸಂಸ್ಥೆಗಳಿಗೆ 375 ಕೋಟಿ ಅನುದಾನ ಒದಗಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ 18 ಕೋಟಿ ವೆಚ್ಚದಲ್ಲಿ ನಾರಾಯಣಗುರು ವಸತಿ ಶಾಲೆ ಆರಂಭಕ್ಕೆ ಅನುಮೋದನೆ ನೋಡಲಾಗಿದೆ. ವಕ್ಫ್ ಆಸ್ತಿ ರಕ್ಷಣೆಗೆ 10 ಕೋಟಿ, ಖಬರಸ್ತಾನ ಅಭಿವೃದ್ಧಿಗೆ 10 ಕೋಟಿ ರೂ ಅನುದಾನದ ಜೊತೆಗೆ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 110 ಕೋಟಿ ಅನುದಾನ ಮೀಸಲಿಡಲಾಗಿದೆ. 'ನಮ್ಮ ನೆಲೆ' ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಗೃಹ ಮಂಡಳಿ ನಿರ್ಮಿಸುವ ನಿವೇಶನಗಳಲ್ಲಿ ಮೂರನೇ ಒಂದು ಭಾಗ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಹಂಚಿಕೆ ಮಾಡಲಾಗಿದೆ.

ಬಜೆಟ್ ನಲ್ಲಿ ವಲಯವಾರು ಹಣಕಾಸಿನ ಹಂಚಿಕೆ : ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 39031 ಕೋಟಿ ರೂ ಅನುದಾನ ನೀಡಲಾಗಿದ್ದು, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 80318 ಕೋಟಿ ರೂ ಅನುದಾನ ಘೋಷಿಸಲಾಗಿದೆ. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ವಲಯಕ್ಕೆ 61488 ಕೋಟಿ ರೂ, ಬೆಂಗಳೂರು ಸಮಗ್ರ ಅಭಿವೃದ್ಧಿ ವಲಯಕ್ಕೆ 9698 ಕೋಟಿ ರೂ ಅನುದಾನ ಒದಗಿಸಲಾಗಿದೆ. ಸಂಸ್ಕ್ರತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ವಲಯಕ್ಕೆ 3458 ಕೋಟಿ ರೂ ಅನುದಾನ ಘೋಷಿಸಲಾಗಿದ್ದು, ಆಡಳಿತ ಸುಧಾರಣೆ ಮತ್ತು ಸಾಋ್ವಜನಿಕ ಸೇವೆಗಳ ವಲಯಕ್ಕೆ 68585 ಕೋಟಿ ರೂ ಅನುದಾನ ನೀಡಲಾಗಿದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಶಿಕ್ಷಣಕ್ಕೆ ವಿಶೇಷ ಪ್ರಾಧಾನ್ಯತೆ: ಶಿರಸಿಯಲ್ಲಿ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.