ETV Bharat / state

ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ವೇಳೆ ಹೊಸ ರೂಪಾಂತರಿಗಳು ಪತ್ತೆಯಾಗ್ತಿವೆ : ಬಿಬಿಎಂಪಿ ಮುಖ್ಯ ಆಯುಕ್ತ

author img

By

Published : Jul 13, 2021, 3:27 PM IST

Updated : Jul 13, 2021, 4:15 PM IST

ನಗರದಲ್ಲಿ ನಿನ್ನೆ ಹೊಸದೊಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದೆ. ಈ ಹಿಂದೆ ಪತ್ತೆಯಾಗಿದ್ದ ಒಂದು ಕೇಸ್ ಸದ್ಯ ಗುಣವಾಗಿದೆ. ಇವೆಲ್ಲವೂ ರೂಪಾಂತರಿ ವೈರಸ್​ಗಳು. ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡುವಾಗ ಹೊಸ ಹೊಸ ಕೇಸ್ ಪತ್ತೆಯಾಗ್ತಿವೆ. ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ..

New mutants have been discovered during the genome sequencing test
ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಮಕ್ಕಳ ತಜ್ಞ ವೈದ್ಯರ ಸಮಿತಿ ರಚಿಸಲಾಗಿದೆ. ಸಮಿತಿಯ ಸದಸ್ಯರು ಪಾಲಿಕೆಗೆ ಕೆಲವು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಮಕ್ಕಳಿಗೆ ಬೇಕಾದ ಹಾಸಿಗೆಗಳ ಪ್ರಮಾಣ ಹೆಚ್ಚು ಮಾಡಲು, ಪಾಲಿಕೆ ವ್ಯಾಪ್ತಿಯಲ್ಲಿರುವ ದೊಡ್ಡ ದೊಡ್ಡ ಆಸ್ಪತ್ರೆ, ಮೆಡಿಕಲ್ ಸೆಂಟರ್​ಗಳಲ್ಲಿ ಹಾಸಿಗೆ ಪ್ರಮಾಣ ಹೆಚ್ಚು ಮಾಡಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರಿನ ಅಕ್ಕಪಕ್ಕದ ರಾಜ್ಯಗಳಲ್ಲಿ ಕೋವಿಡ್ ಸೋಂಕು ಇನ್ನೂ ಏರಿಕೆಯಲ್ಲಿದೆ. ಹೀಗಾಗಿ. ಎಲ್ಲವನ್ನು ಒಂದೇ ಬಾರಿಗೆ ಅನ್​ಲಾಕ್ ಮಾಡಲು ಸಾಧ್ಯವಿಲ್ಲ. ನೈಟ್ ಕರ್ಫ್ಯೂ ತೆರವು, ಪಬ್, ಸಿನಿಮಾ ಥಿಯೇಟರ್ ಓಪನ್ ವಿಚಾರವಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಮಹಾದೇವಪುರ ವಲಯದಲ್ಲಿಯೂ ಸದ್ಯ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಅಲ್ಲಿನ ಜನರು ಕೊರೊನಾ ನಿಯಮ ಪಾಲಿಸುವಲ್ಲಿ ಎಡವುತ್ತಿದ್ದಾರೆ. ಮಹಾದೇವಪುರಕ್ಕೆ ಹೋಲಿಸಿಕೊಂಡರೆ ಸದ್ಯ ಸೋಂಕು ಏರಿಯಾಗುತ್ತಿರುವುದು ದಕ್ಷಿಣ ವಲಯದಲ್ಲಿ.

ಬೆಂಗಳೂರು ದಕ್ಷಿಣ ವಲಯದಲ್ಲಿ ದಿನದಿಂದ ದಿನಕ್ಕೆ ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದೆ. ಮಹಾದೇವಪುರದಂತೆ ದಕ್ಷಿಣದಲ್ಲೂ ಮೈಕ್ರೋ ಕಂಟೇನ್ಮೆಂಟ್ ಮೊರೆ ಹೋಗಲಿದ್ದೇವೆ. ಮನೆಗೆ ಭೇಟಿ ನೀಡಿ ಸೋಂಕಿತರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿ ಕಂಟ್ರೋಲ್ ಮಾಡಲಿದ್ದೇವೆ ಎಂದರು.

ಇದನ್ನೂ ಓದಿ: ಜನರ ನಡವಳಿಕೆ ನೋಡಿದ್ರೆ ಭಯವಾಗುತ್ತೆ: ಸಚಿವ ಸುಧಾಕರ್ ಆತಂಕ

ನಗರದಲ್ಲಿ ನಿನ್ನೆ ಹೊಸದೊಂದು ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದೆ. ಈ ಹಿಂದೆ ಪತ್ತೆಯಾಗಿದ್ದ ಒಂದು ಕೇಸ್ ಸದ್ಯ ಗುಣವಾಗಿದೆ. ಇವೆಲ್ಲವೂ ರೂಪಾಂತರಿ ವೈರಸ್​ಗಳು. ಜಿನೋಮ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡುವಾಗ ಹೊಸ ಹೊಸ ಕೇಸ್ ಪತ್ತೆಯಾಗ್ತಿವೆ. ಬೆಂಗಳೂರಿಗರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ನಗರದ ಮಳೆ ಪ್ರಮಾಣ ಎದುರಿಸಲೂ ಪಾಲಿಕೆ‌ ಸಜ್ಜಾಗಿದೆ. ಈಗಾಗಲೇ 50 ಮಿ.ಮೀ ಅಷ್ಟೇ ಮಳೆಯಾಗಿದೆ. ಇದಕ್ಕಿಂತ ಹೆಚ್ಚಾದರೆ ಕೆಲವು ಕಡೆ ನೀರು ನಿಲ್ಲುವ ಸಾಧ್ಯತೆ ಇದೆ. ನಾಲ್ಕು ದಿನ ನಗರದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

Last Updated : Jul 13, 2021, 4:15 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.