ದೇಶದಲ್ಲಿ ಪ್ರಥಮವಾಗಿ ಫಾಸ್ಟ್ ಟಿಬಿ ಟೆಸ್ಟ್ ಆವಿಷ್ಕಾರ.. ಲಕ್ಷಾಂತರ ಜನರಿಗೆ ನೆರವು

author img

By

Published : Aug 9, 2019, 9:35 AM IST

ಕ್ಷಯರೋಗದಲ್ಲಿ ಡಿಎನ್‌ಎ ಪರೀಕ್ಷೆಯ ಮೂಲಕ ಎಲ್ಲ ಔಷಧಗಳ ಪ್ರತಿರೋಧ ಗುರುತಿಸುವ ಮಹತ್ತರ ಸಾಧನೆಯನ್ನು ಮಾಡಿದೆ.

ಬೆಂಗಳೂರು: ಕ್ಲಿನಿಕಲ್ ಡೇಟಾ ಪ್ರೇರಿತ ಜೆನೆಟಿಕ್ ಡಯಾಗ್ನೋಸ್ಟಿಕ್ಸ್ ಮತ್ತು ಔಷಧ ಅನ್ವೇಷಣೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಮೆಡ್ ಜಿನೋಮ್ ಲ್ಯಾಬ್ಸ್ ಸ್ಪಿಟ್ ಎಸ್ಇಕ್ಯೂ ಎಂಬ ಫಾಸ್ಟ್ ಟಿಬಿ ಟೆಸ್ಟ್‌ನ ಆವಿಷ್ಕಾರ ಮಾಡಿದೆ.

ದೇಶದಲ್ಲಿ ಪ್ರಥಮವಾಗಿ ಫಾಸ್ಟ್ ಟಿಬಿ ಟೆಸ್ಟ್ ಆವಿಷ್ಕಾರ..

ಇದು ಸಮಗ್ರ ಜಿನೋಮ್ ಆಧಾರಿತ ಪರೀಕ್ಷೆಯಾಗಿದ್ದು, ಇದು ಯಾವುದೇ ಕ್ಷಯರೋಗದ ಬ್ಯಾಕ್ಟೀರಿಯಾದಲ್ಲಿರುವ ಔಷಧಕ್ಕೆ ಪ್ರತಿರೋಧ ಶಕ್ತಿ ಉಂಟು ಮಾಡುವ ಪ್ರತಿಯೊಂದು ಮ್ಯುಟೇಷನ್ ವಿವರವಾದ ವಿಶ್ಲೇಷಣೆಯನ್ನು ಕಫದಿಂದ ನೇರವಾಗಿ ನೀಡುತ್ತದೆ. ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಾ.ರವಿಕುಮಾರ್, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2017ರಲ್ಲಿ 2.7 ಮಿಲಿಯನ್ ಕ್ಷಯರೋಗದ ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಭಾರತವು ಜಾಗತಿಕ ಕ್ಷಯರೋಗದ ಮರಣಗಳಲ್ಲಿ ಶೇ. 27ರಷ್ಟು ಹೊಂದಿದೆ ಅಂತಾ ತಿಳಿಸಿದರು.

ಏನಿದು ಸ್ಪಿಟ್ ಎಸ್ಇಕ್ಯೂ ಪರೀಕ್ಷೆ..?

ಸ್ಪಿಟ್ ಎಸ್ಇಕ್ಯೂ ಲಕ್ಷಾಂತರ ಜನರಿಗೆ ನೆರವಾಗುವ ಆವಿಷ್ಕಾರವಾಗಿದ್ದು, ಈ ನಿರ್ದಿಷ್ಟ ಪರೀಕ್ಷೆಯಿಂದ ನಿಖರ ಫಲಿತಾಂಶಗಳನ್ನು ನೀಡಬಹುದಾಗಿದೆ. ಜೊತೆಗೆ ಕ್ಷಯ ರೋಗದ ಚಿಕಿತ್ಸೆಯಲ್ಲಿ ಸಾಕಷ್ಟು ಸಮಯ ಉಳಿಸುತ್ತದೆ. ಕ್ಷಯವನ್ನು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ನಿಯಂತ್ರಿಸುವುದಾಗಿದೆ. ಈ ಪರೀಕ್ಷೆಗಳಲ್ಲಿ ಕಣ್ಣಿನ ಸೋಂಕುಗಳು, ಮೆದುಳು ಹಾಗೂ ರಕ್ತದ ಸೋಂಕುಗಳನ್ನು ಒಳಗೊಂಡಿದೆ. ರಕ್ತ ಪರೀಕ್ಷೆ ಮಾಡುವ ಮೂಲಕ ಸುಲಭವಾಗಿ ಒಂದು ವಾರದೊಳಗೆ ಗುರುತಿಸಬಹುದಾಗಿದೆ. ಹೀಗಾಗಿ ವೈದ್ಯರು ಸುಲಭವಾಗಿ ಮುಂದಿನ ಚಿಕಿತ್ಸೆಯನ್ನು ಮುಂದುವರಿಸಬಹುದಾಗಿದೆ.

Intro:ದೇಶದಲ್ಲಿ ಇದೇ ಮೊದಲ ಬಾರಿಗೆ ಫಾಸ್ಟ್ ಟೆಸ್ಟ್‌ ಟಿಬಿ ಟೆಸ್ಟ್ ಆವಿಷ್ಕಾರ...

ಬೆಂಗಳೂರು: ಕ್ಷಯರೋಗದಲ್ಲಿ ಡಿಎನ್ ಎ ಪರೀಕ್ಷೆಯ ಮೂಲಕ ಎಲ್ಲ ಔಷಧಗಳ ಪ್ರತಿರೋಧ ಗುರುತಿಸುವ ಮಹತ್ತರ ಸಾಧನೆಯನ್ನು ಮಾಡಿದೆ.. ಹೌದು, ಕ್ಲಿನಿಕಲ್ ಡೇಟಾ ಪ್ರೇರಿತ ಜೆನೆಟಿಕ್ ಡಯಾಗ್ನೋಸ್ಟಿಕ್ಸ್ ಮತ್ತು ಔಷಧ ಅನ್ವೇಷಣೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ ಮೆಡ್ ಜಿನೋಮ್ ಲ್ಯಾಬ್ಸ್ ಸ್ಪಿಟ್ ಎಸ್ಇಕ್ಯೂ ಅಭಿವೃದ್ಧಿ ಪಡಿಸಿದೆ..

ಇದು ಸಮಗ್ರ ಜಿನೋಮ್ ಆಧರಿತ ಪರೀಕ್ಷೆಯಾಗಿದ್ದು, ಇದು ಯಾವುದೇ ಕ್ಷಯರೋಗದ ಬ್ಯಾಕ್ಟೀರಿಯಾದಲ್ಲಿರುವ ಔಷಧಕ್ಕೆ ಪ್ರತಿರೋಧ ಶಕ್ತಿ ಉಂಟು ಮಾಡುವ ಪ್ರತಿಯೊಂದು ಮ್ಯುಟೇಷನ್ ವಿವರವಾದ ವಿಶ್ಲೇಷಣೆಯನ್ನು ಕಫದಿಂದ ನೇರವಾಗಿ ನೀಡುತ್ತದೆ..

ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿ ಮಾತಾನಾಡಿದ ಡಾ ರವಿಕುಮಾರ್, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, 2017 ರಲ್ಲಿ 2.7 ಮಿಲಿಯನ್ ಕ್ಷಯರೋಗದ ಪ್ರಕರಣಗಳು ವರದಿಯಾಗಿವೆ.. ಅದರಲ್ಲೂ ಭಾರತವು ಜಾಗತಿಕ ಕ್ಷಯರೋಗದ ಮರಣಗಳಲ್ಲಿ ಶೇ 27 ರಷ್ಟು ಹೊಂದಿದೆ ಅಂತ ತಿಳಿಸಿದರು..

*ಏನಿದು ಸ್ಪಿಟ್ ಎಸ್ಇಕ್ಯೂ ಪರೀಕ್ಷೆ* ??

ಸ್ಪಿಟ್ ಎಸ್ಇಕ್ಯೂ ಲಕ್ಷಾಂತರ ಜನರಿಗೆ ನೆರವಾಗುವ ಆವಿಷ್ಕಾರವಾಗಿದ್ದು, ಈ ನಿರ್ದಿಷ್ಟ ಪರೀಕ್ಷೆಯಿಂದ ನಿಖರ ಫಲಿತಾಂಶಗಳನ್ನು ನೀಡಬಹುದಾಗಿದೆ..‌ಜೊತೆಗೆ ಕ್ಷಯ ರೋಗದ ಚಿಕಿತ್ಸೆಯಲ್ಲಿ ಸಾಕಷ್ಟು ಸಮಯ ಉಳಿಸುತ್ತದೆ.. ಕ್ಷಯವನ್ನು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ನಿಯಂತ್ರಿಸುವುದಾಗಿದೆ..

ಈ ಪರೀಕ್ಷೆಗಳಲ್ಲಿ ಕಣ್ಣಿನ ಸೋಂಕುಗಳು, ಮೆದುಳು ಹಾಗೂ ರಕ್ತದ ಸೋಂಕುಗಳನ್ನು ಒಳಗೊಂಡಿದೆ.. ಮೆಡ್ ಜಿನೋಮ್ ಭಾರತದಲ್ಲಿ ಎಲ್ಲ ಎಕ್ಸ್ ಸೈಟನ್ ಪರೀಕ್ಷೆಗಳಿಗೆ ವಿಶೇಷ ಮಾರಾಟ ಪಾಲುದಾರನಾಗಿರುತ್ತದೆ.. ಹೀಗಾಗಿ ಸ್ಪಿಟ್ ಎಸ್ ಇಕ್ಯೂ ನೊಂದಿಗೆ ಮೆಡ್ ಜಿನೋಮ್ ಲ್ಯಾಬ್ಸ್, ಸೋಂಕುರೋಗಗಳ ತಳಿ ಶಾಸ್ತ್ರ, ಬೆಂಗಳೂರಿನ ಎಕ್ಸ್ ಸೈಟನ್ ಡಯಾಗ್ನೊಸ್ಟಿಕ್ಸ್ ದೊಂದಿಗೆ ಸಹಯೋಗ ಹೊಂದಿದೆ..

ಅಂದಹಾಗೇ ರಕ್ತ ಪರೀಕ್ಷೆ ಮಾಡುವ ಮೂಲಕ ಸುಲಭವಾಗಿ ಒಂದು ವಾರದೊಳಗೆ ಗುರುತಿಸಬಹುದಾಗಿದೆ.. ಹೀಗಾಗಿ ವೈದ್ಯರು ಸುಲಭವಾಗಿ ಮುಂದಿನ ಚಿಕಿತ್ಸೆಯನ್ನು ಮುಂದುವರೆಸಬಹುದಾಗಿದೆ.. ಒಟ್ಟಿನ್ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರ ವಾಗುತ್ತಿದ್ದು, ಕಡಿಮೆ ಸಮಯದಲ್ಲಿ ಹೇಗೆ ರೋಗವನ್ನ ಕಂಡು ಹಿಡಿದು ಚಿಕಿತ್ಸೆ ನೀಡಬಹುದು ಎಂಬುದನ್ನ ತೋರಿಸುತ್ತಿದೆ..

Byte; ಪ್ರವೀಣ್ ಬರಮಗೌಡ- ಸದಸ್ಯರು

KN_BNG_02_TB_TEST_FASTER_PC_SCRIPT_7201801

Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.