ETV Bharat / state

ಜಾರಕಿಹೊಳಿ ಸಿಡಿ ಕೇಸ್: ಟ್ರಾವೆಲ್ ಹಿಸ್ಟರಿ ರಿವೀಲ್ ಮಾಡದೇ SIT ಮುಂದೆ ಹಾಜರಾದ ನರೇಶ್ ಗೌಡ, ಶ್ರವಣ್

author img

By

Published : Jun 12, 2021, 4:02 PM IST

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುಂತೆ ನ್ಯಾಯಾಲಯ ಸೂಚಿಸಿತ್ತು.

Naresh Gowda, Shravan, present at SIT hearing
ಟ್ರಾವೆಲ್ ಹಿಸ್ಟರಿ ರಿವೀಲ್ ಮಾಡದೆ SIT ಮುಂದೆ ಹಾಜರಾದ ನರೇಶ್ ಗೌಡ, ಶ್ರವಣ್

ಬೆಂಗಳೂರು: ಎಸ್ ಐ.ಟಿ ಗೆ ಬರುವ ವೇಳೆಯೂ ಸಿ.ಡಿ ಕೇಸ್ ಕಿಂಗ್ ಪಿನ್ಸ್ ನರೇಶ್ ಗೌಡ, ಶ್ರವಣ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದ್ದು. ಮೆಜೆಸ್ಟಿಕ್ ನಿಂದ ಬಂದ ಆರೋಪಿಗಳು ಎಲ್ಲಿಯೂ ತಮ್ಮ ಟ್ರಾವೆಲ್ ಹಿಸ್ಟರಿ ರಿವೀಲ್ ಮಾಡಿಲ್ಲ ಎಂದು ಗೊತ್ತಾಗಿದೆ.

ಮೆಜೆಸ್ಟಿಕ್​​​​ನಲ್ಲಿ ಕ್ಯಾಬ್ ಹತ್ತಿದ ಆರೋಪಿಗಳು. ಆಡುಗೋಡಿ ಟೆಕ್ನಿಕಲ್ ಸೆಂಟರ್​​ಗೆ ಬಿಡಲು‌ ಕ್ಯಾಬ್ ಚಾಲಕನಿಗೆ ಹೇಳಿದ್ದಾರೆ. ಕ್ಯಾಬ್ ಬುಕ್ ಮಾಡಿದರೆ ಮಾತ್ರ ಕರೆದುಕೊಂಡು ಹೋಗುತ್ತೇನೆ ಸರ್ ಪೊಲೀಸರು ಹಿಡಿಯುತ್ತಾರೆ ಎಂದು ಚಾಲಕ ಹೇಳಿದ್ದಾನೆ.

ನಾವು ಹೇಳ್ಕೊತಿವಿ ನಡಿಯಪ್ಪ ಎಂದು ನರೇಶ್ ಹಾಗೂ ಶ್ರವಣ್ ಹೇಳಿದ್ದಾರೆ. ನಂತರ ಆಡುಗೋಡಿ ಟೆಕ್ನಿಕಲ್ ಸೆಂಟರ್​​​ಗೆ‌ ಬಂದು ಕ್ಯಾಬ್ ಚಾಲಕ ಬಂದು ಬಿಟ್ಟಿದ್ದಾನೆ. ಮೆಜೆಸ್ಟಿಕ್ ನಿಂದ ಆಡುಗೋಡಿಗೆ ಇಳಿಸಿದ್ದಕ್ಕೆ 1 ಸಾವಿರ ರೂ ಹಣ ಆರೋಪಿಗಳು ನೀಡಿದ್ದಾರೆ ಎಂದು ಕ್ಯಾಬ್ ಚಾಲಕನಿಂದ ಮಾಹಿತಿ ಹೊರ ಬಿದ್ದಿದೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೆ ಹಾಜರಾಗುಂತೆ ನ್ಯಾಯಾಲಯ ಸೂಚಿಸಿತ್ತು.

ಮಧ್ಯಾಹ್ನ 12 ರಿಂದ ಸಿ.ಡಿ ಕೇಸ್ ವಿಚಾರಣೆಯ ಬೆಳವಣಿಗೆ:

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ರೂವಾರಿಗಳು ಎಂದು ಹೇಳಲಾಗ್ತಿರುವ ನರೇಶ್ ಗೌಡ ಮತ್ತು ಶ್ರವಣ್ ಎಸ್​ಐಟಿ ಮುಂದೆ ವಿಚಾರಣೆಗೆ ಎದರಿಸುತ್ತಿದ್ದಾರೆ. ಈ ಇಬ್ಬರ ಮೇಲೆ ಸದಾಶಿವನಗರ ಠಾಣೆಯಲ್ಲಿ ಷಡ್ಯಂತ್ರ, ಬ್ಲ್ಯಾಕ್​​ಮೇಲ್ ಕೇಸ್‌ ದಾಖಲಾಗಿತ್ತು.

ಇದೀಗ ಕೋರ್ಟ್ ಆದೇಶದಂತೆ ವಿಚಾರಣೆಗೆ ಹಾಜರಾಗಿದ್ದಾರೆ. ಷಡ್ಯಂತ್ರ, ಬ್ಲ್ಯಾಕ್​​ಮೇಲ್ ಆರೋಪ ಪ್ರಕರಣದಲ್ಲಿ ಇಬ್ಬರು ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆರೋಪಿಗಳು 5 ದಿನಗಳ ಒಳಗೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.

ನ್ಯಾಯಾಲಯ ಆದೇಶ ನೀಡಿದ 5ನೇ ದಿನ, ಅಂದರೆ ಕೊನೆಯ ದಿನ ಆರೋಪಿಗಳು ವಿಚಾರಣೆ ಎದುರಿಸಲು ಆಡುಗೋಡಿ ಟೆಕ್ನಿಕಲ್ ಸೆಲ್​ಗೆ ಆಗಮಿಸಿದ್ದರು. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಆರೋಪಿಗಳು ಎಸ್​ಐಟಿ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಮುಂದೆ ವಕೀಲರೊಂದಿಗೆ ಹಾಜರಾಗಿದ್ದರು. ಎಸ್​ಐಟಿ ಕೂಡ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದರು.

ವಿಚಾರಣೆ ಆರಂಭಿಸಿರುವ ತನಿಖಾಧಿಕಾರಿ : ಆರೋಪಿಗಳು ಹಾಜರಾಗುತ್ತಿದ್ದಂತೆ ತನಿಖಾಧಿಕಾರಿಗಳು ದಾಖಲಾತಿಗಳ ಪರಿಶೀಲನೆ ಮೇಲಧಿಕಾರಿಗಳಿಗೆ ವಿಚಾರ ಮುಟ್ಟಿಸಿ ಚರ್ಚೆ ನೆಡೆಸಿದ್ದರು. ವಿಚಾರಣೆ ಸುಮಾರು 2ರ ನಂತರ ಪ್ರಾರಂಭಾವಾಗಿದ್ದು ಮೊದಲು ಆರೋಪಿಗಳ ಹುಟ್ಟಿದ ದಿನಾಂಕ, ವಿದ್ಯಾಭ್ಯಾಸ, ತಂದೆ, ತಾಯಿ, ಊರು, ಓದಿದ ಶಾಲೆಗಳು, ಮೊದಲು ಎಲ್ಲಿ ಕೆಲಸ ಪ್ರಾರಂಭಿಸಿದ್ದು, ಮೊದಲ ಸಂಬಳ, ಕೆಲಸ ಮಾಡಿದ ಸಂಸ್ಥೆಗಳು, ಆದಾಯದ ಮೂಲ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಎಸ್​ಐಟಿ ಕಲೆ ಹಾಕುತ್ತಿದ್ದಾರೆ.

ಸುಮಾರು 64 ಕ್ಕೂ ಅಧಿಕ ಪ್ರಶ್ನೆಗಳನ್ನು ಎಸ್​ಐಟಿ ರೆಡಿ ಮಾಡಿಟ್ಟುಕೊಂಡಿರುವ ಮಾಹಿತಿಯಿದ್ದು, ಅದೇ ಸ್ವರೂಪದಲ್ಲಿ ಆರೋಪಿಗಳಿಗೆ ಪ್ರೆಶ್ನೆಗಳ ಸುರಿಮಳೆ ಸುರಿಸಿ ಅಧಿಕಾರಿಗಳು ವಿಚಾರಣೆ ಸಂಜೆಯವರಿಗೆ ನೆಡಸುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.