ETV Bharat / state

ಒಂದೇ ದಿನ ಮೋದಿ ಮೆಗಾ ರೋಡ್ ಶೋ: ಮೇ 6ಕ್ಕೆ ಸಿಲಿಕಾನ್ ಸಿಟಿಯಲ್ಲಿ ನಮೋ ಮತಬೇಟೆ..

author img

By

Published : May 2, 2023, 9:48 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎರಡು ದಿನ ನಡೆಯಬೇಕಿದ್ದ ಮೋದಿ ಮೆಗಾ ರೋಡ್ ಶೋ ಅನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. ಮೇ 6ರಂದು ಮಾತ್ರ ಪ್ರಧಾನಿ ಮೋದಿ ಅವರು ಉದ್ಯಾನ ನಗರಿಯಲ್ಲಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

Mega Road Show
ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಮೇ 6 ಮತ್ತು 7 ರಂದು ಎರಡು ದಿನ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಕಾರ್ಯಕ್ರಮವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. ಹೌದು, ಮೇ 6ರಂದು ಒಂದೇ ದಿನ ಪ್ರಚಾರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದ್ದು, ಅಂದು 23 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋದಿ ಭರ್ಜರಿ ರೋಡ್ ಶೋ ನಡೆಸಿ, ಬಿಜೆಪಿ ಪರವಾಗಿ ಮತಬೇಟೆ ನಡೆಸಲಿದ್ದಾರೆ.

ಇದನ್ನೂ ಓದಿ: ವಿಧಾನಸಭೆ ಚುನಾವಣೆ.. ಕರ್ನಾಟಕದಲ್ಲಿ ಬಿಜೆಪಿ ಇಂದಿಗೂ ಗೆಲ್ಲಲಾಗದ 52 ಕ್ಷೇತ್ರಗಳಿವು..

ಮೋದಿ ರೋಡ್ ಶೋ ಹಿನ್ನೆಲೆ ಬಿಜೆಪಿ ಶಾಸಕರ ಸಭೆ: ಮೋದಿ ರೋಡ್ ಶೋ ಅಂಗವಾಗಿ ಬೆಂಗಳೂರು ಬಿಜೆಪಿ ಶಾಸಕರ ಸಭೆ ನಡೆಸಲಾಯಿತು. ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಶಾಸಕರು ಮತ್ತು ಸಂಸದರು ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ನಮೋ ಮೆಗಾ ರೋಡ್ ಶೋ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಎರಡು ದಿನದ ಬದಲು ಒಂದೇ ದಿನ ರೋಡ್ ಶೋ ನಡೆಸಲು ಪ್ರಧಾನಿ ಕಾರ್ಯಾಲಯದಿಂದ ಬಂದಿದ್ದ ಮಾಹಿತಿಯಂತೆ ಒಂದೇ ದಿನದ ರೋಡ್ ಶೋಗಾಗಿ ಸಿದ್ಧತೆ ಮಾಡಿಕೊಳ್ಳುವ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: ಬಜರಂಗದಳ ಕರ್ನಾಟಕದ ಅಸ್ಮಿತೆ, ತಾಕತ್ತಿದ್ದರೆ ಬ್ಯಾನ್ ಮಾಡಿ ನೋಡಿ: ತೇಜಸ್ವಿ ಸೂರ್ಯ ಸವಾಲ್

ಮೆಗಾ ರೋಡ್ ಶೋ ನಡೆಯುವ ಸ್ಥಳಗಳು: ಎರಡು ದಿನದ ಬದಲು ಒಂದೇ ದಿನ ಮೆಗಾ ರೋಡ್ ಶೋ ನಡೆಯಲಿದ್ದು, ಮೇ 6ರಂದು ಬೃಹತ್ ರೋಡ್ ಶೋ ನಡೆಯಲಿದೆ. ಅಂದು ಬೆಳಗ್ಗೆ 8 ಕಿ.ಮೀ. ರೋಡ್ ಶೋ ನಡೆಸಲಿದ್ದು, ಸಂಜೆ 30 ಕಿ.ಮೀ. ಬೃಹತ್ ರೋಡ್ ಶೋ ನಡೆಸಲಾಗುತ್ತದೆ. ಬೆಳಗ್ಗೆ ಬೆಂಗಳೂರು ಕೇಂದ್ರದಲ್ಲಿ ಆರಂಭವಾಗಲಿರೋ ರೋಡ್ ಶೋ, ಸಿ.ವಿ. ರಾಮನ್ ನಗರದಿಂದ ಆರಂಭವಾಗಿ ಬ್ರಿಗೇಡ್ ರೋಡ್‌ನಲ್ಲಿ ಅಂತ್ಯವಾಗಲಿರೋ ರೋಡ್ ಶೋ, ಸಂಜೆ ಕೋಣನಕುಂಟೆಯಿಂದ ಆರಂಭವಾಗಲಿರೋ ರೋಡ್ ಶೋ ಬಳಿಕ ಜಯನಗರ, ಗಾಂಧಿ ಬಜಾರ್, ಶಾಂತಿನಗರ, ಬಿನ್ನಿಮಿಲ್, ಮಾಗಡಿ ರಸ್ತೆ, ಟೋಲ್‌ಗೇಟ್, ದಾಸರಹಳ್ಳಿ, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ನವರಂಗ್, ಮಲ್ಲೇಶ್ವರ, ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂತ್ಯವಾಗಲಿದೆ. ಒಟ್ಟು 23 ವಿಧಾನಸಭಾ ಕ್ಷೇತ್ರ ರೀಚ್ ಆಗುವಂತೆ ರೋಡ್ ಶೋ ನಡೆಯಲಿದೆ. ಮೇ 7ರಂದು ಯಾವುದೇ ರೋಡ್ ಶೋ ಇರುವುದಿಲ್ಲ.

ಇದನ್ನೂ ಓದಿ: ಕೆಪಿಸಿಸಿಯ ಪ್ರಣಾಳಿಕೆ ಐತಿಹಾಸಿಕವಾದದ್ದು: ರಾಹುಲ್ ಗಾಂಧಿ

ಇದನ್ನೂ ಓದಿ: ಪದ್ಮನಾಭನಗರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ: 4ನೇ ಗೆಲುವಿನ ವಿಶ್ವಾಸದಲ್ಲಿ ಆರ್. ಅಶೋಕ್, ಇತರ ಪಕ್ಷಗಳಿಂದ ರಣತಂತ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.