ETV Bharat / state

ಸರ್ಕಾರ, ಸರ್ಕಾರಿ ಸಂಸ್ಥೆಗಳಿಂದಲೇ ಬೆಂಗಳೂರು ಕೆರೆಗಳ ಗುಳುಂ: ಹೆಚ್.‌ಡಿ.ಕುಮಾರಸ್ವಾಮಿ ಗಂಭೀರ ಆರೋಪ

author img

By

Published : Jun 28, 2022, 10:02 AM IST

ನಾಡಪ್ರಭು ಕೆಂಪೆಗೌಡರ 513ನೇ ಜಯಂತಿಯ ಅಂಗವಾಗಿ ರಾಜ್ಯ ಒಕ್ಕಲಿಗರ ಸಂಘದಿಂದ ಬೆಂಗಳೂರು ನಗರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಹೆಚ್​.ಡಿ.ಕುಮಾರಸ್ವಾಮಿ ಅಭಿವೃದ್ಧಿ ಹೆಸರಲ್ಲಿ ಕೆರೆಗಳನ್ನು ಸ್ವಾಧೀನ ಮಾಡಲಾಗುತ್ತಿದೆ. ಕೆರೆಗಳ ಬಗ್ಗೆ ಜಾಗೃತಿ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಮಹಾನಗರ ನೀರಿನ ಸಮಸ್ಯೆ ಎದುರಿಸಬೇಕಾಗತ್ತದೆ ಎಂದರು.

nadaprabhu kempegowdas513th jayanthi
ನಾಡಪ್ರಭು ಕೆಂಪೆಗೌಡರ 513ನೇ ಜಯಂತಿಯ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ನಗರದಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯ ನಿಮಿತ್ತ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ನಗರದಲ್ಲಿ ಅಭಿವೃದ್ದಿ ಹೆಸರಿನಲ್ಲಿ ಒಂದೊಂದೇ ಕೆರೆ ನುಂಗಲಾಗುತ್ತಿದೆ. ಒಂದೆಡೆ ಕೆರೆಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹೀಗೆ ಆದಲ್ಲಿ ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರವು ಕುಡಿಯುವ ನೀರಿನ ಸಮಸ್ಯ ಎದುರಿಸಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಬಿಳೇಕಹಳ್ಳಿ ಕರೆಯನ್ನು ಮುಚ್ಚಿದರು. ಬೇಕಾದ ಹಾಗೆ ಬೇಲಿ ಹಾಕಿಕೊಂಡು ಜಲಸಂಪನ್ಮೂಲಗಳನ್ನು ಹಾಳು ಮಾಡಿದರು. ಬೆಂಗಳೂರು ಕೆರೆಗಳನ್ನು ಉಳಿಸುವುದು ಕೆಂಪೇಗೌಡರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ಅವರು ಪ್ರತಿಪಾದಿಸಿದರು. ನಾನು ಮುಖ್ಯಮಂತ್ರಿ ಆಗಿದ್ದಾಗ ನಗರದ ಕೆರೆಗಳನ್ನು ಕಬಳಿಕೆ ಮಾಡಿರುವುದನ್ನು ತನಿಖೆ ಮಾಡಲು ಸದನ ಸಮಿತಿ ರಚನೆ ಮಾಡಿದೆ. ನಾನು ಸಿಎಂ ಆಗಿದ್ದಾಗ ಜೆಪಿ ನಗರದ ಕೆಲ ಬಡಾವಣೆಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಆ ನೀರು ಮನೆಗಳಿಗೆ ನುಗ್ಗದೆ ಕೆರೆಗೆ ಹರಿದುಹೋಗುವ ರೀತಿ ವ್ಯವಸ್ಥೆ ಮಾಡಿದೆ. ಕೆಲ ದಿಚನಗಳ ಹಿಂದೆ ಭಾರೀ ಮಳೆಯಾದರೂ ಪುಟ್ಟೇನಹಳ್ಳಿ ಭಾಗದ ಮನೆಗಳಿಗೆ ನೀರು ನುಗ್ಗಿಲ್ಲ. ಆಗ ಅಲ್ಲಿಗೆ ಭೇಟಿ ನೀಡಿದಾಗ ಹೆಲಿಕಾಪ್ಟರ್‌ʼನಲ್ಲಿ ನನ್ನ ಮೇಲೆ ಪುಷ್ಷಾರ್ಚನೆ ಮಾಡಿದರು. ಆದರೆ, ಚುನಾವಣೆ ಬಂದಾಗ ನನ್ನನ್ನು ಮರೆತೇ ಬಿಟ್ಟರು ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.


ಒಂದೆಡೆ ಕೆರೆಗಳನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದೇವೆ. ಇನ್ನೊಂದೆಡೆ ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಇಲ್ಲಿ ಕೆರೆ ಉಳಿಸಿಕೊಂಡಿಲ್ಲ, ಉಳಿಸಿಕೊಳ್ಳುವ ಬಗ್ಗೆ ಮಾತನಾಡುವುದೂ ಇಲ್ಲ. ಕೊನೆಪಕ್ಷ ಈಗ ಉಳಿದಿರುವ ಕೆರೆಗಳನ್ನಾದರೂ ರಕ್ಷಣೆ ಮಾಡಿದ್ದೀವಾ? ಅದೂ ಇಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ‌ ಸಮಸ್ಯೆಗೆ ಪರಿಹಾರ ಏನು? ಒಂದು ಕಡೆ ಬೆಳೆಯುತ್ತಿದ್ದೇವೆ, ಮತ್ತೊಂದೆಡೆ ಹೊಸ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಗುಡುಗಿದರು.

ಕೆಂಪೇಗೌಡರ ಜಯಂತಿ ಇಡೀ ಕರ್ನಾಟಕದಲ್ಲಿ ನಡೆಯಬೇಕು: ಬೆಂಗಳೂರು ನಗರ ಇಡೀ ವಿಶ್ವಕ್ಕೆ ಪರಿಚಯ ಇರುವ ನಗರಿ. ಇದಕ್ಕೆ ಕಾರಣ ಕೆಂಪೇಗೌಡರು. ಕೆಂಪೇಗೌಡರ ಜಯಂತಿ ಇಡೀ ಕರ್ನಾಟಕದಲ್ಲಿ ನಡೆಯಬೇಕು. ಆ ಮೂಲಕ ಅವರ ಆಶಯಗಳನ್ನು ಸಾಕಾರಗೊಳಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅವರು ಹೇಳಿದರು.


ಯಾವ್ಯಾವುದಕ್ಕೋ ಹಣ ಕಳೆದಿದ್ದೇವೆ. ಕೊನೆಪಕ್ಷ ಕೆಂಪಾಂಬುದಿ ಕೆರೆಯನ್ನಾದರೂ ಸಂಘದವತಿಯಿಂದ ಜೀರ್ಣೋದ್ಧಾರ ಮಾಡಿ. ಅದಕ್ಕೆ ನಾವೆಲ್ಲರೂ ಆರ್ಥಿಕವಾಗಿ ಶಕ್ತಿ ತುಂಬೋಣ ಎಂದ ಕುಮಾರಸ್ವಾಮಿ; ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆಗೆ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ನಾನು ಮಾತನಾಡಿದರೆ ವಿವಾದವಾಗುತ್ತೆ- ಡಿಕೆಶಿ: ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮಾರಂಭ ಉದ್ದೇಶಿಸಿ ಮಾತನಾಡಿ, ನಾನು ಮಾತನಾಡಿದರೆ ವಿವಾದವಾಗುತ್ತದೆ. ಹಿಂದೆ ಕಾರ್ಯಕ್ರಮವೊಂದರಲ್ಲಿ ಒಂದು ಮಾತು ಹೇಳಿದ್ದೆ. more work more mistakes, less work less mistakes, no work no mistake. (ಹೆಚ್ಚು ಕೆಲಸ ಮಾಡಿದರೆ ಹೆಚ್ಚು ತಪ್ಪಾಗುತ್ತದೆ, ಕಡಿಮೆ ಕೆಲಸ ಮಾಡಿದರೆ ಕಡಿಮೆ ತಪ್ಪಾಗುತ್ತದೆ, ಕೆಲಸವೇ ಮಾಡದಿದ್ದರೆ ತಪ್ಪುಗಳು ಆಗುವುದಿಲ್ಲ) ಮತ್ತೊಂದು ಕಡೆ more strong more enemies, less strong less enemies, no strong no enemies (ಹೆಚ್ಚು ಸಾಮರ್ಥ್ಯ ಇದ್ದರೆ ಹೆಚ್ಚು ಶತ್ರುಗಳು, ಕಡಿಮೆ ಸಾಮರ್ಥ್ಯ ಇದ್ದರೆ ಕಡಿಮೆ ಶತ್ರುಗಳು, ಸಾಮರ್ಥ್ಯವೇ ಇಲ್ಲದಿದ್ದರೆ ಶತ್ರುಗಳೇ ಇರುವುದಿಲ್ಲ) ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮಿಗಳು, ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಶಾಸಕ ಎಸ್.ಆರ್.ವಿಶ್ವನಾಥ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ‌ ಉಪಸ್ಥಿತರಿದ್ದರು.

ಇದನ್ನೂ ಓದಿ:ನೋಡಿಯೂ ಸುಮ್ನಿರಬೇಡಿ.. ಎಲ್ಲೆಂದರಲ್ಲಿ ಕಸ ಎಸೆದವರ ಮಾಹಿತಿ ಕೊಟ್ರೆ ಬಿಬಿಎಂಪಿಯಿಂದ ಸಿಗುತ್ತೆ ಪ್ರಶಸ್ತಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.