ETV Bharat / state

ಯುವಕನನ್ನು ಕೊಂದು ಮೃತನ ತಾಯಿ ಜೊತೆ ಹುಡುಕಾಟ ನಡೆಸಿದ್ದ ಹಂತಕ ಸೇರಿ ಮೂವರ ಬಂಧನ

author img

By

Published : Apr 10, 2023, 11:58 AM IST

ಯುವಕನ ಕೊಂದು ಬೆಂಗಳೂರಿನ ಸಾದಹಳ್ಳಿ ಬಳಿಯ ಚರಂಡಿಯೊಂದರಲ್ಲಿ ಎಸೆದು ಹೋಗಿದ್ದ ಮೂವರು ಆರೋಪಿಗಳನ್ನು ರಾಮ ಮೂರ್ತಿನಗರ ಪೊಲೀಸರು ತನಿಖೆ ನಡೆಸಿ ಬಂಧಿಸಿದ್ದಾರೆ.

murder case
ಬೆಂಗಳೂರು

ಕೊಲೆ ಪ್ರಕರಣದ ಮಾಹಿತಿ ನೀಡಿದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್

ಬೆಂಗಳೂರು: ಕಳೆದ‌ ಒಂದು ತಿಂಗಳ ಹಿಂದೆ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಅನುಮಾನಾಸ್ಪಾದ ಸಾವು‌ ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿನಗರ ಪೊಲೀಸರು ತನಿಖೆ ನಡೆಸಿ ಇದೊಂದು ಕೊಲೆ ಎಂದು ಕಂಡು ಕೊಂಡಿದ್ದರು. ಈ ಸಂಬಂಧ ಇದೀಗ ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಮೃತ ಸೆಫುಲ್ಲಾ ಎಂಬಾತನನ್ನ ಕೊಲೆ ಮಾಡಿದ ಆರೋಪದಡಿ ಪ್ರಶಾಂತ್, ಜಬಿ ಹಾಗೂ ಶಾಬಾಜ್ ಎಂಬಾತನನ್ನು ಬಂಧಿಸಲಾಗಿದೆ. ರಾಮಮೂರ್ತಿನಗರದ ಸಾದಹಳ್ಳಿ ಬಳಿಯ ಚರಂಡಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು‌. ಬಳಿಕ ಪೊಲೀಸರು ಪರಿಶೀಲನೆ ನಡೆಸಿ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಮೃತನ ವಿವರ ಹಾಗೂ ಕೃತ್ಯಕ್ಕೆ ಕಾರಣ ಬಗ್ಗೆ ನಿರಂತರ ತನಿಖೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.‌ ಅಲ್ಲದೇ, ಮೃತನ ಗುರುತು ಎಲ್ಲ ಪೊಲೀಸ್ ಠಾಣೆಗಳಿಗೂ ಕಳುಹಿಸಲಾಗಿತ್ತು.

ಇದನ್ನೂ ಓದಿ : ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಶಂಕೆ.. ಯುವಕನ ಕೊಲೆ, ಶಾಲೆ ಆವರಣದಲ್ಲಿ ಶವ ಪತ್ತೆ

ಈ ನಡುವೆ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು. ಮಾಹಿತಿ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಮಗ ಸೆಫುಲ್ಲಾ ಈ ಹಿಂದೆ ಕಳ್ಳತನ ಮಾಡಿದ್ದ ಬಗ್ಗೆ ಪ್ರಶಾಂತ್ ಹಾಗೂ ಆತನ ಸಹಚರರು ಕೂಡಿ ಹಾಕಿ ಹಲ್ಲೆ ನಡೆಸಿದ್ದರು ಎಂದು ಸುಳಿವು ನೀಡಿದ್ದರು. ಕೂಡಲೇ ಪ್ರಶಾಂತ್​ನನ್ನು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ‌.

ಇದನ್ನೂ ಓದಿ : ಇದ್ರೀಷ್ ಪಾಷಾ ಪ್ರಕರಣ: ಆರೋಪಿಗಳು 7 ದಿನ ಪೊಲೀಸ್ ಕಸ್ಟಡಿಗೆ

ಕೆ ಜಿ ಹಳ್ಳಿಯಲ್ಲಿ ಆರೋಪಿ ಪ್ರಶಾಂತ್ ಸ್ಕ್ರ್ಯಾಪ್ ಅಂಗಡಿ ಇಟ್ಟುಕೊಂಡಿದ್ದ. ಈ ಅಂಗಡಿಯಲ್ಲಿ ಆಗಾಗ ಕಳ್ಳತನವಾಗುತಿತ್ತು. ಖದೀಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೊಂಚು ಹಾಕಿದ್ದ. ಅದರಂತೆ ಒಂದು ದಿನ ಸೆಫುಲ್ಲಾ ಅಂಗಡಿಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ವಿಷಯವನ್ನು ಪ್ರಶಾಂತ್ ಅಂಗಡಿ ಮಾಲೀಕ ಜಬಿಗೆ ತಿಳಿಸಿದ್ದಾನೆ. ಬಳಿಕ ಆತನ ಸಹಚರನನ್ನು ಕರೆಯಿಸಿಕೊಂಡು ಹಲ್ಲೆ ಮಾಡಿದ್ದಾನೆ.‌

ಇದನ್ನೂ ಓದಿ : ರೀಲ್ಸ್​ ಮಾಡಲೆಂದು ಭಾವಿ ಪತಿಯನ್ನು ಪಾರ್ಕ್​ಗೆ ಕರೆದ ಹುಡುಗಿ .. ಯುವಕನ ಕತ್ತು ಕೊಯ್ದ ಅಪ್ರಾಪ್ತೆ!

ಯುವಕನನ್ನು ಕೂಡಿ ಹಾಕಿ ಒಂದು ವಾರದವರೆಗೂ ನಿರಂತರವಾಗಿ ಆರೋಪಿಗಳು ಹಲ್ಲೆ ಮಾಡಿದ್ದಾರೆ‌. ಬಳಿಕ ಸಾವನ್ನಪ್ಪಿದ್ದ ಸೆಫುಲ್ಲಾನನ್ನು ಚರಂಡಿಯೊಂದರಲ್ಲಿ ಎಸೆದು ಸುಮ್ಮನಾಗಿದ್ದರು‌. ಅಲ್ಲದೇ, ಮೃತ‌ನ ತಾಯಿಯೊಂದಿಗೆ ಮಗನ ಹುಡುಕಾಟ ಕಾರ್ಯದಲ್ಲಿ ಆರೋಪಿ ಜಬಿ ತೊಡಗಿಸಿಕೊಂಡಿದ್ದ. ಯಾರಿಗೂ ಈತನ ನಡೆ ಬಗ್ಗೆ ಅನುಮಾನ ಬಂದಿರಲಿಲ್ಲ. ಪ್ರಶಾಂತ್ ನನ್ನ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.

ಇದನ್ನೂ ಓದಿ : ಸೇಡು! ಪ್ರೇಯಸಿಯ ಪೋಷಕರು, ಸಹೋದರಿಯ ಕೊಂದ ಪ್ರಿಯಕರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.