ETV Bharat / state

ಸುಷ್ಮಾ‌ ಸ್ವರಾಜ್ ನಿಧ‌ನ : ಸಂಸದೆ ಶೋಭಾ, ಕೆ ಎಸ್ ಈಶ್ವರಪ್ಪ ಸಂತಾಪ

author img

By

Published : Aug 7, 2019, 1:09 AM IST

ಬಿಜೆಪಿ‌ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಸಂಸದೆ ಶೋಭಾ, ಕೆ ಎಸ್ ಈಶ್ವರಪ್ಪ ಸಂತಾಪ

ಬೆಂಗಳೂರು : ಬಿಜೆಪಿ‌ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಸಹಾಯಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು, ಬಿಜೆಪಿಗೆ ಪೂರ್ಣಾವಧಿ ಕಾರ್ಯಕರ್ತೆಯಾಗಿ ಕೆಲಸ ಮಾಡುವ ವೇಳೆ ಸುಷ್ಮಾ ಸ್ವರಾಜ್ ಅವರಂತಹ ನಾಯಕಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದು ಅತ್ಯುತ್ತಮ ಅಭ್ಯಾಸದ ಸಮಯವಾಗಿತ್ತು‌ ಎಂದು ಸುಷ್ಮಾ ಜೊತೆಗಿನ ತಮ್ಮ ಒಡನಾಟವನ್ನು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಬುದ್ದಿವಂತೆ, ಶ್ರಮಜೀವಿ, ಶಕ್ತಿಶಾಲಿ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಕೇವಲ ಎರಡು ತಿಂಗಳಿನಲ್ಲಿಯೇ ಕನ್ನಡ ಕಲಿತಿದ್ದರು, ಅವರ ಅಗಲಿಕೆ ದೇಶದ ರಾಜಕೀಯ ಕ್ಷೇತ್ರಕ್ಕೆ ಬಹು ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಹಿಳೆಯರು ರಾಜಕೀಯ ಕ್ಷೇತ್ರ ಪ್ರವೇಶಿಸುವುದನ್ನು ಉತ್ತೇಜನ ಮಾಡುತ್ತಿದ್ದರು, ನಮ್ಮಂತಹ ಅನೇಕರಿಗೆ ಅವರು ಆದರ್ಶರಾಗಿದ್ದರು ಅವರ ಆತ್ಮಕ್ಕೆ ಶಾಂತ ಸಿಗಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

  • Had got the opportunity to assist her in Bellary LS polls. As a full timer of @BJP4India, it was a great learning time for me to assist a leader like Suhma Ji.

    Intelligent, hardworking, highly energetic leader, who learnt Kannada in just 2mnths.

    A great loss to Indian politics!

    — Shobha Karandlaje (@ShobhaBJP) August 6, 2019 " class="align-text-top noRightClick twitterSection" data=" ">

ಸುಷ್ಮಾ ಸ್ವರಾಜ್ ನಿಧನಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೂಡಾ ಸಂತಾಪ ಸೂಚಿಸಿ‌ ಟ್ವೀಟ್ ಮಾಡಿದ್ದು, ಭಾರತಾಂಬೆಯ ಮುಕುಟ ಕಮಲ ಇನ್ನಿಲ್ಲ ಎನ್ನುವುದು ನಂಬಲಸಾಧ್ಯವಾದ ದುಃಖದ ವಿಷಯ. ಪ್ರಖರ ವಾಗ್ಮಿ, ಅದ್ಬುತ ಸಂಸದೀಯಪಟು, ಮಾಜಿ ವಿದೇಶಾಂಗ ಸಚಿವರು ಆಗಿದ್ದ ಸುಷ್ಮಾ ಸ್ವರಾಜ್ ಅವರ ಸೇವೆ ದೇಶಕ್ಕೆ ಹಾಗೂ ಪಕ್ಷಕ್ಕೆ ಅಪಾರವಾಗಿದೆ.

ಕಾಶ್ಮೀರ "ಸ್ವರಾಜ್ಯ"ದ ಬಗ್ಗೆ ಸುಷ್ಮಾ "ಸ್ವರಾಜ್" ಕೊನೆಯ ಹೇಳಿಕೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೊಡಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಓಂ ಶಾಂತಿ ಎಂದು ಈಶ್ವರಪ್ಪ ಟ್ವೀಟ್ ಮಾಡಿದ್ದಾರೆ.

  • ಭಾರತಾಂಬೆಯ ಮುಕುಟ ಕಮಲ ಇನ್ನಿಲ್ಲ

    ನಂಬಲಸಾಧ್ಯವಾದ ದುಃಖದ ವಿಷಯ

    ಪ್ರಖರವಾಗ್ಮಿ, ಅದ್ಬುತ ಸಂಸದೀಯಪಟು, ಮಾಜಿ ವಿದೇಶಾಂಗ ಸಚಿವರು ಆಗಿದ್ದ
    ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಸೇವೆ ದೇಶಕ್ಕೆ ಹಾಗೂ ಪಕ್ಷಕ್ಕೆ ಅಪಾರ

    ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೊಡಲಿ.
    ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ

    ಓಂ ಶಾಂತಿ pic.twitter.com/BRTCx4uj9O

    — K S Eshwarappa (@ikseshwarappa) August 6, 2019 " class="align-text-top noRightClick twitterSection" data=" ">
Intro:


ಬೆಂಗಳೂರು: ಬಿಜೆಪಿ‌ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನಕ್ಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗು ಸಂಸದೆ ಶೋಭಾ ಕರಂದ್ಲಾಜೆ ಸಂತಾಪ ಸೂಚಿಸಿದ್ದಾರೆ.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್ ಅವರಿಗೆ ಸಹಾಯಕಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು, ಬಿಜೆಪಿಗೆ ಪೂರ್ಣಾವಧಿ ಕಾರ್ಯಕರ್ತೆಯಾಗಿ ಕೆಲಸ ಮಾಡುವ ವೇಳೆ ಸುಷ್ಮಾ ಸ್ವರಾಜ್ ಅವರಂತಹ ನಾಯಕಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದು ಅತ್ಯುತ್ತಮ ಅಭ್ಯಾಸದ ಸಮಯವಾಗಿತ್ತು‌ ಎಂದು ಸುಷ್ಮಾ ಜೊತೆಗಿನ ತಮ್ಮ ಒಡನಾಟವನ್ನು ಟ್ವೀಟ್ ಮೂಲಕ‌ ಹಂಚಿಕೊಂಡಿದ್ದಾರೆ.

ಬುದ್ದಿವಂತೆ,ಶ್ರಮಜೀವಿ,ಶಕ್ತಿಶಾಲಿ ನಾಯಕಿಯಾಗಿದ್ದ ಸುಷ್ಮಾ ಸ್ವರಾಜ್ ಕೇವಲ ಎರಡು ತಿಂಗಳಿನಲ್ಲಿಯೇ ಕನ್ನಡ ಕಲಿತಿದ್ದರು, ಅವರ ಅಗಲಿಕೆ ದೇಶದ ರಾಜಕೀಯ ಕ್ಷೇತ್ರಕ್ಕೆ ಬಹು ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

ಮಹಿಳೆಯರು ರಾಜಕೀಯ ಕ್ಷೇತ್ರ ಪ್ರವೇಶಿಸುವುದನ್ನು ಉತ್ತೇಜನ ಮಾಡುತ್ತಿದ್ದರು,ನಮ್ಮಂತಹ ಅನೇಕರಿಗೆ ಅವರು ಆದರ್ಶರಾಗಿದ್ದರು ಅವರ ಆತ್ಮಕ್ಕೆ ಶಾಂತ ಸಿಗಲಿ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.