ETV Bharat / state

ಡಿಕೆಶಿ ಭೇಟಿಯಾದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ : ನಾಳೆ ಕಾಂಗ್ರೆಸ್​ ಸೇರ್ಪಡೆ

author img

By

Published : Feb 24, 2021, 7:21 PM IST

ನಾಳೆ ಬೆಳಗ್ಗೆ 10.30 ಕ್ಕೆ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯತ್ವ ನೀಡಲಿದ್ದಾರೆ. ನನ್ನ ಮತ್ತು ಪಕ್ಷದ ನಿಲುವು ಒಂದೇ ಆಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.

MLA Sharat Bacchegowda met KPCC President DKS at Bengaluru
ಡಿಕೆಶಿ ಭೇಟಿಯಾದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ

ಬೆಂಗಳೂರು : ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯತ್ವ ಪಡೆಯಲಿರುವ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಸದಾಶಿವನಗರ ನಿವಾಸದಲ್ಲಿ ಡಿಕೆಶಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಸೇರಲು ಯಾವುದೇ ಅಡ್ಡಿ ಇಲ್ಲ. ನಮ್ಮ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಒಪ್ಪಿದ್ದಾರೆ. ಕಾರ್ಯಕರ್ತರೂ ಪಕ್ಷ ಸೇರಲು ಯಾವುದೇ ಅಡ್ಡಿ ಆತಂಕಗಳಿಲ್ಲ. ಕೆಲವು ಪ್ರಕ್ರಿಯೆಗಳಿವೆ, ಹೀಗಾಗಿ ನಾನು ಮೊದಲು ಸಿಎಲ್​ಪಿ ಸದಸ್ಯತ್ವ ಪಡೆಯುತ್ತಿದ್ದೇನೆ. ನಾಳೆ ಬೆಳಗ್ಗೆ 10.30 ಕ್ಕೆ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯತ್ವ ನೀಡಲಿದ್ದಾರೆ. ನನ್ನ ಮತ್ತು ಪಕ್ಷದ ನಿಲುವು ಒಂದೇ ಆಗಿದೆ ಎಂದರು.

ಓದಿ : ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಗಳು, ಮುಖಂಡರೊಂದಿಗೆ ಡಿಸಿಎಂ ಸವದಿ ಸಭೆ

ಕಳೆದ ಹಲವು ದಿನಗಳಿಂದ ಶರತ್​ ಬಚ್ಚೇಗೌಡ ಕಾಂಗ್ರೆಸ್​ ಸೇರ್ಪಡೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ನಾಳೆ ಅವರು ಅಧಿಕೃತವಾಗಿ ಕಾಂಗ್ರೆಸ್​ ಸೇರುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.